ದಾವಣಗೆರೆ : ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಾಂತ ಜನಸಂದಣಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರತ್ಯೇಕವಾಗಿ ASC(anti-sabotage check) ಶ್ವಾನದಳ ತಂಡಗಳು ತಪಾಸಣೆ ನಡೆಸಿದರು.
Read also : JIO ಬಳಕೆದಾರರಿಗೆ ಗುಡ್ ನ್ಯೂಸ್..
ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಸೂಚನೆ ಹಿನ್ನಲೆಯಲ್ಲಿ ದಾವಣಗೆರೆ ನಗರದ ಪ್ರಮುಖ ಜನಸಂದಣಿ ಸ್ಥಳಗಳಾದ ರೆಲ್ವೇ ಸ್ಟೇಷನ್, KSRTC ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಗಾಜಿನ ಮನೆ, ಹಾಗೂ ಹರಿಹರದ ಹರಿಹರೇಶ್ವರ ದೇವಾಸ್ಥಾನ, ರೆಲ್ವೇ ನಿಲ್ದಾಣ, KSRTC ಬಸ್ ನಿಲ್ದಾಣ, ಗುತ್ತೂರು ಪವರ್ ಹೌಸ್, ಹೊನ್ನಾಳಿಯಲ್ಲಿನ ತುಂಗಾಭದ್ರಾ ನದಿ ಸೇತುವೆ,KSRTC ಬಸ್ ನಿಲ್ದಾಣ, ಕೋರ್ಟ್, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ, KSRTC ಬಸ್ ನಿಲ್ದಾಣ, ಕೋರ್ಟ್, ಸಂತೆಬೆನ್ನುರು ಪುಷ್ಕರಣಿ ಸೇರಿದಂತೆ ಜಿಲ್ಲೆಯಾದ್ಯಾಂತ ಪರಿಶೀಲನೆ ನಡೆಸಿದ್ದಾರೆ.
