ಗದಗ : ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನ ಮದುವೆಯಾದ ಮಾನ್ಯ ಪಾಟೀಲ್ ಬರ್ಬರ ಹತ್ಯೆ ಮತ್ತು ದಲಿತ ಕುಟುಂಬದ ಮೇಲಿನ ದೌರ್ಜನ್ಯ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ದಲಿತ ಯುವಕ ವಿವೇಕಾನಂದ ಮಾದರ ಹಾಗೂ ಮೇಲ್ಜಾತಿಯ ಯುವತಿ ಮಾನ್ಯ ಪಾಟೀಲ ಇಬ್ಬರೂ ಪರಸ್ಪರ ಪ್ರೀತಿಸಿ ಪೋಲೀಸರ ಸಮ್ಮುಖದಲ್ಲಿ ಮದುವೆಯಾಗಿ ನಂತರ ಯುವತಿಯ ಪೋಷಕರ ಜೀವ ಭಯದಿಂದ ಕೆಲವು ತಿಂಗಳ ಕಾಲ ಹಾವೇರಿಯಲ್ಲಿ ನೆಲೆಸಿದ್ದರು. ಯುವತಿ ಏಳು ತಿಂಗಳು ಗರ್ಭಿಣಿಯಾಗಿ ತಮ್ಮ ಗ್ರಾಮಕ್ಕೆ ಬಂದು ನೆಲೆಸಿದ್ದರು.ಇದನ್ನು ಗಮನಿಸಿದ ಯುವತಿಯ ತಂದೆ ಹಾಗೂ ಪೋಷಕರು ಸೇರಿ ಹಾಡ ಹಗಲೇ ಮಾರಕಾಸ್ತ್ರಗಳಿಂದ ಯುವಕನ ಮನೆಗೆ ನುಗ್ಗಿ ಯುವಕನ ತಂದೆ,ತಾಯಿ ಹಾಗೂ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದರು ಕೂಡ ಮಾನವೀಯತೇ ಮರೆತು ಬರ್ಬರವಾಗಿ ಹತ್ಯೆ ಮಾಡಿರುವುದು ಹೇಯ ಕೃತವಾಗಿದೆ. ಇಂತಹ ಕ್ರೂರ ಮನಸ್ಸಿನ ವ್ಯಕ್ತಿಗಳು ಸಮಾಜಕ್ಕೆ ಮಾರಕ ಆದ್ದರಿಂದ ಇವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ತುಂಬು ಗರ್ಭಿಣಿಯನ್ನು ಮರ್ಯಾದಾ ಹತ್ಯೆ ಮಾಡಿದ ಯುವತಿಯ ತಂದೆ ಹಾಗೂ ಹತ್ಯೆಗೆ ಸಹಕರಿಸಿದ ಎಲ್ಲರಿಗೂ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬೇಕು. ಘಟನೆ ನಡೆದು ಮೂರು ನಾಲ್ಕು ದಿನಗಳಾದರೂ ಧಾರವಾಡ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಇಲ್ಲಿಯವರೆಗೂ ಸೌಜನ್ಯಕ್ಕೂ ಭೇಟಿ ಕೊಟ್ಟಿಲ್ಲ ದಲಿತ ಯುವಕನ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ ಆದರೂ ಕನಿಷ್ಠ ಸಾಂತ್ವನದ ಮಾತುಗಳನ್ನಾಡಿಲ್ಲ ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸಿ ಆ ದಲಿತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
Read also : ಮಗಳ(ಮಾನ್ಯ)ಹತ್ಯೆ ,ದಲಿತರ ಮೇಲೆ ದೌರ್ಜನ್ಯ ಪ್ರಕರಣ:ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ಪ್ರತಿಭಟನೆ
ಒಕ್ಕೂಟದ ಸಂಚಾಲಕ ಶರೀಫ ಬಿಳೆಯಲಿ.ಮುತ್ತು ಬಿಳೆಯಲಿ.ಆನಂದ ಶಿಂಗಾಡಿ. ಬಾಲರಾಜ ಅರಬರ. ಶಿವಾನಂದ ತಮ್ಮಣ್ಣವರ. ಮಾರುತಿ ಭಜಂತ್ರಿ.ಪ್ರಕಾಶ ಕಲ್ಲೆಕ್ಕ ನವರ.ಅನಿಲ ಕಾಳೆ.ಪರಶು ಕಾಳೆ.ಬಸೂ ಬಿಳೆಯಲಿ.ಮುತ್ತಣ್ಣ ಚವ ಡಣ್ಣ ವರ. ಶ್ರೀಕಾಂತ ಮಳಲಿ ಇನ್ನಿತರರು ಹಾಜರಿದ್ದರು.
