ದಾವಣಗೆರೆ : ಮನೆ ಕಳ್ಳತನ ಪ್ರಕರಣ ದಾಖಲಾಗಿ 12 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ವಶಕ್ಕೆ ಪಡೆದಿದ್ದಾರೆ.
ತಿಪ್ಪೇಸ್ವಾಮಿ ಬಂಧಿತ ಆರೋಪಿ
ಬಿಸ್ತುವಳ್ಳಿ ಗ್ರಾಮದ ಶ್ರೀದೇವಿ ಎಂಬುವವರು ಜಗಳೂರು ತಾಲ್ಲೂಕು ಠಾಣೆಗೆ ಹಾಜರಾಗಿ 06.12.2025 ರಂದು ಜಗಳೂರು ಪಟ್ಟಣಕ್ಕೆ ಸಂತೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿ ಸಂಜೆ 5-30 ಗಂಟೆಗೆ ಮನೆಗೆ ಹೋದಾಗ ಮನೆಯ ಬಾಗಿಲ ಬೀಗವನ್ನು ಮುರಿದು ಬೀರುವಿನಲ್ಲಿಟ್ಟದ್ದ ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.
Read also : ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ
ಪ್ರಕರಣ ದಾಖಲಿಸಿಕೊಂಡ ಜಗಳೂರು ಪೊಲೀ ಸ್ ಠಾಣೆ ಪೊಲೀಸರು ಪ್ರಕರಣದ ಆರೋಪಿ ಮತ್ತು ಕಳುವಾದ ಸ್ವತ್ತನ್ನು ಪತ್ತೆ ಗೆ ಎಎಸ್ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿ ಬಿಸ್ತುವಳ್ಳಿ ಗ್ರಾಮದ ತಿಪ್ಪೇಸ್ವಾಮಿ ಬಸವರಾಜ್ ಬಂಧಿಸಿದ್ದಾರೆ. ಆರೋಪಿಯಿಂದ 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
ಆರೋಪಿತನ ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ, ಎ.ಎಸ್.ಐ. ವೆಂಕಟೇಶ್, ಸಿಬ್ಬಂದಿಗಳಾದ ಉಮಾಶಂಕರ್, ನಾಗರಾಜಯ್ಯ, ನಾಗಭೋಷಣ, ಚೈತ್ರ, ಕರಿಬಸವರಾಜ್ ರವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಸಂಸಿಸಿದ್ದಾರೆ.
