ದಾವಣಗೆರೆ (Davanagere): ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿ 7.30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಂತಿನಗರದ ಪ್ರದೀಪ್ ಆಲಿಯಾಸ್ ಕರಿಯಾ (29), ನಿಜಲಿಂಗಪ್ಪ ಬಡಾವಣೆಯ ಮಣಿಕಂಠ (28), ಎನ್.ಸಂಜಯ್ (23) ಬಂಧಿತ ಆರೋಪಿಗಳು.
ಮನೆಗೆ ಬೀಗ ಹಾಕಿಕೊಂಡು ಟೈಲರ್ ಕೆಲಸ ನಿಮಿತ್ತ ಹಿರಿಯೂರಿಗೆ ಹೋಗಿದ್ದಾಗ ಮನೆ ಬೀಗ ಮುರಿದು ಒಳ ನುಗ್ಗಿ ಗಾಡ್ರೇಜ್ ಬೀರುವಿನಲ್ಲಿದ್ದ 35 ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎಂದು ವಿದ್ಯಾನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಹಾಂತೇಶ್ ಎಂಬುವರು ದೂರು ದಾಖಲಿಸಿದ್ದರು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ.ಸಂತೋಷ , ಜಿ.ಮಂಜುನಾಥ್, ನಗರ ಡಿವೈಎಸ್ಪಿ ಶರಣ ಬಸವೇಶ್ವರ, ವಿದ್ಯಾನಗರ ಠಾಣೆ ಪಿಎಸ್‍ಐ ವೈ.ಎಸ್.ಶಿಲ್ಪಾ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read also : ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್
ಬಂಧಿತರಿಂದ ವಿದ್ಯಾನಗರ ಮತ್ತು ಕೆಟಿಜೆ ನಗರ ಠಾಣೆ ವ್ಯಾಪ್ತಿಯ ಮೂರು ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 7.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ತಲೆಮರಿಸಿಕೊಂಡಿದ್ದು, ಪತ್ತೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ವಿದ್ಯಾನಗರ ಠಾಣೆ ಪಿಎಸ್‍ಐ ವೈ.ಎಸ್.ಶಿಲ್ಪಾ, ಎಸ್ಪಿ ಕಚೇರಿಯ ಪಿಐ ಬಿ.ಇಸ್ಮಾಯಿಲ್, ಪಿಎಸ್‍ಐಗಳಾದ ಜಿ.ಎನ್.ವಿಶ್ವನಾಥ್, ವಿಜಯ, ಮಂಜುನಾಥ ಕಲ್ಲೇದೇವರು, ಸಿಬ್ಬಂದಿ ಶಂಕರ್ ಜಾಧವ್, ಎಂ.ಆನಂದ್, ಚಂದ್ರಪ್ಪ, ಬಸವರಾಜ್, ಬೋಜಪ್ಪ, ಗುಡ್ಡಪ್ಪ, ಆಕಾಶ, ಬಸವರಾಜ, ರಾಮಚಂದ್ರಪ್ಪ, ಸೀಮಾ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.