ದಾವಣಗೆರೆ : ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಾಗ ಇರುವ ಆಸಕ್ತಿ ಪ್ರಕರಣದ ತನಿಖಾ ವೇಳೆಯು ಇರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಎಸ್ಸಿಪಿ-ಟಿಎಸ್ಪಿ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಶೇ.10 ರಷ್ಟು ಇದ್ದರೆ, ಬೇರೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಶೇ.90 ಇರುತ್ತದೆ. ನಮ್ಮ ಇಲಾಖೆಗೆ ಸಂಬಂಧ ಪಟ್ಟಿರುವುದನ್ನು ನಿವಾರಿಸಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುತ್ತೇವೆ. ಮೊಬೈಲ್ನಲ್ಲಿ ಯಾವುದೇ ಹೊಸ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಾರದು. ನಿಮಗೆ ಏನು ಅವಶ್ಯಕತೆ ಇದೆಯೋ ಅದನ್ನು ಮಾತ್ರ ಜಾಣ್ಮೆಯಿಂದ ಬಳಕೆ ಮಾಡಿಕೊಳ್ಳಬೇಕು.
ಮೈಕ್ರೋ ಫೈನಾನ್ಸ್ ನವರು ಜನರಿಗೆ ನೀಡುತ್ತಿರುವ ಕಿರುಕುಳ ಇದ್ದಲ್ಲಿ ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಠಾಣೆಗೆ ಬಂದು ಪ್ರಕರಣ ದಾಖಲಿಸಬೇಕಾಗಿಲ್ಲ, ಮನೆ ಮನೆಗೆ ಪೊಲೀಸ್ನವರು ವೀಕ್ಷಣೆ ಬಂದಾಗ ಅಲ್ಲೇ ಪ್ರಕರಣ ದಾಖಲಿಸಬಹುದು. ಹಾಗೂ 112 ಕರೆ ಮಾಡಬಹುದು. ಈ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ದಲಿತ ಸಮಾಜದ ಮುಖಂಡರ ಕುಂದು ಕೊರತೆ : ಕಡ್ಲೆಗೊಂದಿ ಗ್ರಾಮಕ್ಕೆ ಶೀಘ್ರವೇ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಮನೆ ಬಿದ್ದು, ಹೋಗಿದ್ದು ಅದನ್ನ ಕೂಡಲೇ ಪುನರ್ ನಿರ್ಮಾಣ ಮಾಡಬೇಕೆಂದರು.
ಬೂದಾಳ್ ರೋಡ್ ನಿಂದ ಬರುವ ಕೂಲಿ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಇರುವುದಿಲ್ಲ. ಹಾಗೂ ಬೋರ್ಡ್ ಬರೆಸುವಂತೆ ಮನವಿ ಮಾಡಿದರು.
ಶಾದಿ ಮಹಲ್ ರೋಡ್ ನಲ್ಲಿ ನಾಯಿಗಳ ಹಾವಳಿ ತುಂಬಾ ಹೆಚ್ಚಾಗಿದ್ದು ಅದನ್ನು ತಪ್ಪಿಸಬೇಕೆಂದರು. ಚರಂಡಿ ದುರಸ್ಥಿ, ಮತ್ತು ಬಿ.ಎಸ್ ಚನ್ನಬಸಪ್ಪ ಅಂಗಡಿಯ ಮುಂದೆ ಆಟೋಗಳಿಂದ ಸಂಚಾರ ವ್ಯವಸ್ಥೆ ಮತ್ತು ಮಂಗಳಮುಖಿಯರಿಂದ ತೊಂದರೆ ಆಗುತ್ತಿದೆ, ಅದನ್ನು ತಪ್ಪಿಸುವಂತೆ ಮನವಿ ಮಾಡಿದರು.
ಬೂದಾಳ್ ಅಂಗನವಾಡಿ ಶಾಲೆಗಳಲ್ಲಿ ದಲಿತರ ಮಕ್ಕಳು ಎಂದು ಕೀಳಾಗಿ ಕಾಣುತ್ತಿದ್ದಾರೆ. ಸವಳಂಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮದ್ಯವನ್ನು ಶಾಲೆಯ ಕೌಂಪೌಂಡ್ ಒಳಗೆ ಕುಡಿದು ಗಾಜಿನ ಬಾಟಲಿಯನ್ನು ಹೊಡೆದು ಹಾಕುತ್ತಾರೆ. ಬೀದಿದೀಪಗಳ ವ್ಯವಸ್ಥೆ ಇರುವುದಿಲ್ಲ. 2022ರಲ್ಲಿ ಮಳೆಯಿಂದ ಹಾನಿಗೊಳಾದ ಮನೆಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಿರುವುದಿಲ್ಲ.
ಹೊನ್ನಾಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ಆದರೆ ಸ್ವಚ್ಚತೆ ಇಲ್ಲ. ದನಕರುಗಳನ್ನು ರಸ್ತೆಗೆ ಬಿಡುತ್ತಾರೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಬಡ ಜನರಿಗೆ ಮೈಕ್ರೋಫೈನಾನ್ಸ್ ಕಂಪನಿ ಯವರು ಸಾಲ ಸೌಲಭ್ಯವನ್ನು ನೀಡಿ ಕಂತು ಕಟ್ಟದೇ ಇದ್ದಾಗ ದಬ್ಬಾಳಿಕೆ ಮಾಡುತ್ತಿದ್ದರೆ. ಹೋಟೆಲ್, ಸೆಲ್ಯೂನ್ಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುತ್ತಾರೆ. ಕ್ಯಾಸನಕೆರೆಯಲ್ಲಿ ಇಎಸ್ಐ ಆಸ್ಪತ್ರೆ ಇದ್ದು, ಆದರೆ ಕೆಲಸ ನಿರ್ವಹಿಸುತ್ತಿಲ್ಲ. 100 ಜನ ದಲಿತ ಕುಟುಂಬಳಿವೆ ಎಂದರು.
Read also : ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್
ಬೇಲಿಮಲ್ಲೂರು ಹಳೆ ಸೇತುವೆಯ ಬಳಿ ರಸ್ತೆಗಳಲ್ಲಿ ಗುಂಡಿಗಳಿದ್ದು, ತುಂಬಾ ಅಪಘಾತಗಳಾಗುತ್ತವೆ. ಕಬ್ಬಳ ಗ್ರಾಮದಲ್ಲಿ ಗ್ರಂಥಾಲಯ ಇದೆ, ಯಾವುದೇ ಪುಸ್ತಕ ಇರುವುದಿಲ್ಲ. ಅದನ್ನು ವ್ಯವಸ್ಥೆ ಮಾಡಿಕೊಂಡುವಂತೆ ಮನವಿ ಮಾಡಿದರು.
ಕುಂದೂರು ರಾತ್ರಿಯಲ್ಲಿ ಮಣ್ಣನ್ನು ಸರಬರಾಜು ಮಾಡಲಾಗುತ್ತಿದೆ. ಕೆಟಿಜೆ ನಗರದಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಿ ಎಂದರು.
ಎವಿಕೆ ಕಾಲೇಜು ರಸ್ತೆಯಲ್ಲಿ ಆಟೋದವರು ಸುಮಾರು 10 ರಿಂದ 20 ಜನರನ್ನು ಕೂರಿಸಿಕೊಂಡು ಹೋಗುತ್ತಾರೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಜಿ.ಪಂ. ಉಪಕಾರ್ಯದರ್ಶಿ ಮಮತ ಹೊಸಗೌಡರು ಉಸ್ಥಿತರಿದ್ದರು.
