ಹೌದು ಸಾಧ್ಯ, ಮಂಗಳವಾರ ಫೆಬ್ರವರಿ 24, 2026 ಕೇಂದ್ರ ಸಚಿವ ಸಂಪುಟವು ‘ಕೇರಳ’ ರಾಜ್ಯವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ. ಜೂನ್ 24, 2024 ರಂದು, ಕೇರಳ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ರಾಜ್ಯಕ್ಕೆ ಮರುನಾಮಕರಣ ಮಾಡುವಂತೆ ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಇನ್ನು ಈ ಹಿಂದೆಯು ಇಂಡಿಯಾ ಒಕ್ಕೂಟ ಕೆಲವು ರಾಜ್ಯಗಳ ಹೆಸರುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. 2007 ರಲ್ಲಿ, ಉತ್ತರಾಂಚಲ ರಾಜ್ಯದ ಹೆಸರನ್ನು ಉತ್ತರಾಖಂಡ ಎಂದು ಬದಲಾಯಿಸಲಾಯಿತು. 2011 ರಲ್ಲಿ, ಒರಿಸ್ಸಾ ಕಾಯ್ದೆಯ ಮೂಲಕ ಒರಿಸ್ಸಾದ ಹೆಸರನ್ನು ಒಡಿಶಾ ಎಂದು ಬದಲಾವಣೆ ಮಾಡಲಾಗಿದೆ. ಮತ್ತು ಈ ರಾಜ್ಯದ ಭಾಷೆಯ ಹೆಸರನ್ನು ‘ಒರಿಯಾ’ದಿಂದ “ಒಡಿಯಾ” ಎಂದು ಬದಲಾವಣೆ ಮಾಡಿರೋದನ್ನು ನಾವು ಗಮನಿಸಬಹುದು.
ಇಂಡಿಯಾ ಒಕ್ಕೂಟದ ಸಂವಿಧಾನದ “3 ನೇ ವಿಧಿಯ” ಪ್ರಕಾರ, ಸಂಸತ್ತು ಕಾನೂನಿನ ಮೂಲಕ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿರುತ್ತದೆ.
ಇನ್ನು ರಾಜ್ಯ ವಿಧಾನಸಭೆಯು ಮೊದಲು ಹೆಸರು ಬದಲಾವಣೆಗಾಗಿ ನಿರ್ಣಯವನ್ನು ಅಂಗೀಕರಿಸಿ ಗೃಹ ಸಚಿವಾಲಯಕ್ಕೆ (MHA) ಕಳುಹಿಸುತ್ತದೆ. ನಂತರ ಅದನ್ನು ರಾಷ್ಟ್ರಪತಿಗಳ ಶಿಫಾರಸಿಗಾಗಿ ಸಂಸತ್ತಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳು ಶಿಫಾರಸು ಮಾಡಿದ ನಂತರವೇ ಅಂತಹ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲು ಸಾಧ್ಯ ಆಗುತ್ತದೆ. ನಂತರ ಮಸೂದೆಯನ್ನು ಲೋಕಸಭೆ (ಕೆಳಮನೆ) or ರಾಜ್ಯಸಭೆ (ಮೇಲ್ಮನೆ) ಯಲ್ಲಿ ಪರಿಚಯಿಸುವುದು ಮತ್ತು ಸರಳ ಬಹುಮತದಿಂದ ಅಂಗೀಕರಿಸಲ್ಪಡಬೇಕು, ಅಂದರೆ 50% ಕ್ಕಿಂತ ಹೆಚ್ಚು ಸದಸ್ಯರು ಯಾವುದೇ ಸದನದಲ್ಲಿ ಹಾಜರಿರಬೇಕು ಮತ್ತು ಮತವನ್ನು ಚಲಾಯಿಸಬೇಕು.
ಸಂಸತ್ತಿನಲ್ಲಿ ಅಂಗೀಕಾರವಾದ ನಂತರ, ಮಸೂದೆಯು ಅಂತಿಮ ಸಹಿಗಾಗಿ ರಾಷ್ಟ್ರಪತಿಗಳಿಗೆ ಹಿಂತಿರುಗುತ್ತದೆ. ರಾಷ್ಟ್ರಪತಿಗಳು ಸಹಿ ಹಾಕಿದ ನಂತರ, ಅದು ಕಾಯಿದೆ ಆಗುತ್ತದೆ ಹಾಗೂ ಸಂವಿಧಾನದ ಮೊದಲ ಮತ್ತು ನಾಲ್ಕನೇ ವೇಳಾಪಟ್ಟಿಗಳಲ್ಲಿ ಅಧಿಕೃತವಾಗಿ ರಾಜ್ಯದ ಹೆಸರು ಬದಲಾವಣೆಯಾಗುತ್ತದೆ.
Read also:ಫಲಪುಷ್ಪ ಪ್ರದರ್ಶನ -2026:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ
ಒಟ್ಟಾರೆಯಾಗಿ ಒಂದು ರಾಜ್ಯದ ಹೆಸರನ್ನು ಬದಲಾವಣೆ ಮಾಡಲು ಈ ಮೇಲಿನ ಕ್ರಮವನ್ನು ಅನುಸರಿಸಬೇಕಾಗಿರುತ್ತದೆ. ನೋಡೋಣ ಕರ್ನಾಟಕದ ಹೆಸರನ್ನು “ಕನ್ನಡ ನಾಡು” ಎಂದು ಬದಲಾಯಿಸಬೇಕೆಂದು ಸುಮಾರು ವರ್ಷಗಳಿಂದ ಜನರ ಕೂಗಿದೆ, ಆದ್ರೆ ಜನಪ್ರತಿನಿಧಿಗಳು ಈ ಕೂಗನ್ನು ಕೆಳಿಸಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಯಾವಾಗ ಜನರ ಅಪೇಕ್ಷೆಯನ್ನು ಕೇಳಿಸಿಕೊಂಡು ಕರ್ನಾಟಕವನ್ನು ಕನ್ನಡನಾಡು ಎಂದು ಹೆಸರು ಬದಲಾಯಿಸುತ್ತಾರೂ ಕಾದು ನೋಡಬೇಕಾಗಿದೆ. ಇದಕ್ಕಾಗಿ ಜನರು ಜನಪ್ರತಿನಿಧಿಗಳಿಗೆ ಇನ್ನಷ್ಟು ಒತ್ತಡ ಹಾಗೂ ತಿಳುವಳಿಕೆಯನ್ನು ತರಬೇಕಾಗಿದೆ….
ಸಚಿನ್ ಒಕ್ಕಲಿಗ
ಕಾನೂನು ವಿಧ್ಯಾರ್ಥಿ , 7483235060
ನಾವು Dravida ಕನ್ನಡಿಗರು ಚಳುವಳಿ
ವಿದ್ಯಾರ್ಥಿ ಮುಖಂಡ
