ಈ ವರ್ಷದ ಆರಂಭದಿಂದಲೂ ಹೆಚ್ಚಾಗಿದ್ದ ಚಿನ್ನದ ಬೆಲೆ, ಕಳೆದ 2 ತಿಂಗಳಿಂದ ಏರಿಳಿತಗಳನ್ನು ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಕುಸಿತವೇ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ತಿಂಗಳಲ್ಲಿ ಮಾತ್ರ 1 ಔನ್ಸ್ ಚಿನ್ನದ ಬೆಲೆ 34 USD (₹2,930) ಕಡಿಮೆಯಾಗಿದೆ. ಆದರೂ, ಷೇರುಪೇಟೆಯ ಕುಸಿತವೇ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಮುಂಬರುವ ದಿನಗಳಲ್ಲಿ ಭಾರತದಲ್ಲಿಯೂ ಚಿನ್ನದ ಬೆಲೆ ಇಳಿಯುವ ಸಾಧ್ಯತೆಯಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.