Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಫೆ.9 ರಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಕದಸಂಸ ನಿಂದ ಕಪ್ಪುಬಟ್ಟೆ ಪ್ರದರ್ಶನ
ತಾಜಾ ಸುದ್ದಿ

ಫೆ.9 ರಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಕದಸಂಸ ನಿಂದ ಕಪ್ಪುಬಟ್ಟೆ ಪ್ರದರ್ಶನ

Dinamaana Kannada News
Last updated: February 5, 2026 1:54 pm
Dinamaana Kannada News
Share
harihara
ಪಿ.ಜೆ.ಮಹಾಂತೇಶ್
SHARE

ಹರಿಹರ : 2026-27ರ ಬಜೆಟ್ ನಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಗೆ ಶೇ. 24.1ರಷ್ಟು ಅನುದಾನ ಮೀಸಲಿರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.9 ರಂದು ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಸಿ., ಎಸ್.ಟಿ. ಸಮುದಾಯದವರಿಗೆ ಮೀಸಲಿರಿಸಿದ ಅನುದಾನ ದುರ್ಬಳಕೆ ತಡೆಯಲು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಕಾಯ್ದೆ 2013ರ ಸೆಕ್ಷನ್ 7 (ಡಿ) ರದ್ದುಪಡಿಸಿದಂತೆ, 7 (ಸಿ) ರದ್ದುಪಡಿಸಿ ಆದೇಶ ಹೊರಡಿಸಬೇಕು.  ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಹೆಚ್ಚಿಸಬೇಕು. ನಿರ್ವಸತಿಕರು ನಿವೇಶನ ಖರೀದಿಸಲು ರೂ.5 ಲಕ್ಷ ನೆರವು, ಮನೆಗಳ ನಿರ್ಮಾಣಕ್ಕೆ ರೂ.5 ಲಕ್ಷಕ್ಕೆ ಅನುದಾನ ಹೆಚ್ಚಿಸಬೇಕು.

ಗರ್ ಹುಕುಂ ಸಾಗುವಳಿ ದಾರರು ಸಕ್ರಮಕ್ಕಾಗಿ ಸಲ್ಲಿಸಿರುವ ನಮೂನೆ- 57ರ ಅರ್ಜಿಗಳನ್ನು ಸೂಕ್ತ ಕಾರಣವನ್ನು ನೀಡದೆ ಏಕಪಕ್ಷೀಯವಾಗಿ ತಿರಸ್ಕಾರ ಮಾಡುತ್ತಿರುವುದರಿಂದ ಬೇರೆ ಭೂಮಿ ಇಲ್ಲದೆ ಕಳೆದ ಏಳು- ಎಂಟು ದಶಕಗಳಿಂದ ಇದೇ ಭೂಮಿಯಲ್ಲಿ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವ ಬಡವರನ್ನು ಭೂ ಹಕ್ಕಿನಿಂದ ಒಕ್ಕಲೆಬ್ಬಿಸದೆ, ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊ.ಕೃಷ್ಣಪ್ಪ ಅವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು ಹಾಗೂ ಜನ್ಮದಿನದಂದು ಸರ್ಕಾರಿ ರಜೆ ಘೋಷಣೆ, ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರೊ.ಬಿ.ಕೃಷ್ಣಪ್ಪರ ಹೆಸರಿಡುವುದು, ಅವರ ಹೆಸರಿನ ಸ್ಮಾರಕ ನಿರ್ಮಾಣ ಮಾಡಬೇಕು.

ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ನಿರ್ವಸತಿಕರಿಗೆ ನಿವೇಶನ ಮಂಜೂರು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲಗಳನ್ನು ಮಂಜೂರು ಮಾಡಲು ಶಾಸಕರ ಶಿಫಾರಸ್ಸು ಮಾಡುವ ಪದ್ಧತಿ ಬಿಟ್ಟು ಆಯ್ಕೆಯ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಬೇಕು.

ನಗರದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ನಲ್ಲಿ ಕಳಪೆ ಆಹಾರ ವಿತರಣೆ ಮಾಡಿದ ಪ್ರಕರಣದ ಆರೋಪಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಆದಿವಾಸಿ, ಅಲೆಮಾರಿ ಸಮುದಾಯದವರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಬೇಕು. ದೇವದಾಸಿ, ವಿಧವಾ ಮಹಿಳೆಯರು, ವೃದ್ಧಾಪ್ಯ ವೇತನ ಹಾಗೂ ವಿಕಲ ಚೇತನರಿಗೆ ನೀಡುತ್ತಿರುವ ಮಾಸಿಕ ವೇತನ ರೂ. 5000ವರೆಗೆ ಹೆಚ್ಚಿಸಬೇಕು.

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಸಾಲ ಸೌಲಭ್ಯ ಯೋಜನೆಗಳ ಘಟಕ ವೆಚ್ಚ ದ್ವಿಗುಣವಾಗಿಸಿ, ಗುರಿ ಹೆಚ್ಚಳ ಮಾಡಬೇಕು, ಹಾಗೂ ಸಾಲ ಸೌಲಭ್ಯಗಳು ಕೋರಿದ ಅರ್ಜಿಗಳು ಅಧಿಕವಾಗಿದ್ದು ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಆಯಾ ನಿಗಮಗಳ ಬೇಡಿಕೆಗೆ ಅನುಗುಣವಾಗಿ ಅನುದಾನ ಒದಗಿಸಬೇಕು.

Read also : ದಾವಣಗೆರೆ|ರಕ್ತ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಪಡೆಯುವಂತಿಲ್ಲ : ಎಡಿಸಿ

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ (ಲಿಡ್ಕರ್) ನಿಗಮಕ್ಕೆ ರೂ.500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಪ.ಜಾತಿಯ ಚರ್ಮ ಕುಶಲ ಕರ್ಮಿಗಳ ಉತ್ಪನ್ನಗಳ ಮಾರುಕಟ್ಟೆಯ ಪ್ರಗತಿಗಾಗಿ ಆರ್ಥಿಕ. ಇಲಾಖೆಯಿಂದ ಟೆಂಡರ್ ವಿನಾಯಿತಿಗಾಗಿ ರೂ.100 ಕೋಟಿಗೆ ಮೀಸಲಿರಿಸಿ ಆದೇಶ ಹೊರಡಿಸಬೇಕು ಹಾಗೂ ನಿಗಮದ ಎಲ್ಲಾ ಟೆಂಡರ್ ಗಳನ್ನು ಪ.ಜಾತಿಯ ಚರ್ಮ ಕುಶಲ ಕರ್ಮಿಗಳ ಘಟಕಕ್ಕೆ ವಿನಾಯಿತಿಯೊಂದಿಗೆ ನೀಡಬೇಕು.

ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ ರೂ 3000 ವರೆಗೆ ಹೆಚ್ಚಳ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ವಸತಿ ಕಾಲೇಜು ಗಳನ್ನಾಗಿ ಮೇಲ್ದರ್ಜೆ ಗೇರಿಸಬೇಕು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ- 2020″ಅನ್ನು ತಕ್ಷಣವೇ ರದ್ದುಪಡಿಸಬೇಕು ಹಾಗೂ ಭಾರತದಿಂದ ವಿದೇಶಗಳಿಗೆ ಮಾಡುತ್ತಿರುವ ದನದ ಮಾಂಸ ರಫ್ತು ನಿಲ್ಲಿಸಬೇಕು.

ಈ  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಮ್ಮ ಸಂಘಟನೆಯಿAದ ಹತ್ತಾರು ಬಾರಿ ಮನವಿಗಳನ್ನು ನೀಡಲಾಗಿದ್ದರೂ ಯಾವುದೆ ಪ್ರಯೋಜನವಾಗದ್ದರಿಂದ ಮುಖ್ಯಮಂತ್ರಿಯವರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ದಾವಣಗೆರೆ|ರಕ್ತ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಪಡೆಯುವಂತಿಲ್ಲ : ಎಡಿಸಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಮೃತ  

ದಾವಣಗೆರೆ  : ಇಲ್ಲಿನ ಶಾಸ್ತ್ರೀ ನಗರದಲ್ಲಿ ಮನೆ ಮುಂದೆ ಆಟ ಆಡುವ ವೇಳೆ ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ…

By Dinamaana Kannada News

UPI ವಹಿವಾಟಿಗೆ GST: ಕರ್ನಾಟಕ ಬಂದ್‌ಗೆ ಸಿದ್ಧತೆ

GST ನೋಟಿಸ್‌ ಜಾರಿ ಖಂಡಿಸಿ ರಾಜ್ಯ ವ್ಯಾಪಾರಿಗಳು ಇದೆ 25 ರಂದು ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ. 2021-22ರ ಆರ್ಥಿಕ…

By Dinamaana Kannada News

Political analysis | ಸಿದ್ದು ದಿಲ್ಲಿಯಲ್ಲಿ  ಬಾಂಬ್ ಬ್ಲಾಸ್ಟ್ ಮಾಡಿದ್ದೇಕೆ?

ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಕೆಲ ದಿನಗಳ ಹಿಂದೆ ಸಿಎಂ ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ.…

By Dinamaana Kannada News

You Might Also Like

Davanagere
Blog

ದಾವಣಗೆರೆ|ರಕ್ತ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಪಡೆಯುವಂತಿಲ್ಲ : ಎಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ–ಕಾಲೇಜುಗಳಲ್ಲಿ ನಾಡಗೀತೆ ಕಡ್ಡಾಯ: ಡಿಡಿಪಿಐ

By Dinamaana Kannada News
Davanagere
ತಾಜಾ ಸುದ್ದಿ

ರೈತರಿಂದ 87258 ಕ್ವಿಂಟಲ್ ಮೆಕ್ಕೆಜೋಳ ಖರೀದಿ,ನೊಂದಣಿಗೆ ಫೆ.13 ರವರೆಗೆ ಅವಕಾಶ

By Dinamaana Kannada News
DAVANAGERE
ಅಭಿಪ್ರಾಯ

ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?