ಹರಿಹರ (Harihara): ತಾಲೂಕಿನ ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಅಧ್ಯಕ್ಷರಾಗಿ ಗಣೇಶ್ ಕಮಲಾಪುರ, ಉಪಾಧ್ಯಕ್ಷರಾಗಿ ಮಂಜುಳಾ ಅವರನ್ನು ಪೋಷಕರು, ಗ್ರಾಮಸ್ಥರ ಸಮ್ಮುಖದಲ್ಲಿ ಗುರುವಾರ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಈಶ್ವರಪ್ಪ ಕೆ.ಎಸ್., ಮಹಾಂತೇಶ್ ಕಣ್ಣಾಳರ, ಪ್ರಿಯಾ, ಶೃತಿ, ಗಂಗಾಧರ ಜಿ.ಬಿ., ಹೊನ್ನಪ್ಪ, ಶಿವಕುಮಾರ್ ಬಾವಿಕಟ್ಟಿ, ನಿಜಲಿಂಗಪ್ಪ, ಗಂಗಮ್ಮ, ಸೌಮ್ಯ, ಶಿಲ್ಪಾ, ದೇವಕ್ಕ, ಹಳದಮ್ಮ, ಹನುಮಂತಪ್ಪ, ಪ್ರಶಾಂತ್ ಎಂ.ಬಿ., ನಾಗರತ್ನ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯಲ್ಲಿ ಬಿಆರ್‌ಪಿ ಸಿ.ಕೆ. ಮಹೇಶ್, ಸಿಆರ್‌ಪಿ ಸುನಿತಾ ಸೇರಿದಂತೆ ಗ್ರಾಮದ ಮುಖಂಡರಾದ ಈಶ್ವರಪ್ಪ, ಹಾಲಸಿದ್ದಪ್ಪ, ಬಸವನಗೌಡ, ಚಂದ್ರಶೇಖರಪ್ಪ, ದೊಡ್ಡಬಸಪ್ಪ, ಮೂಕಪ್ಪ, ರಾಮಣ್ಣ, ಬಿ. ರಮೇಶ್, ಚನ್ನಪ್ಪ, ಸುರೇಶ್ ಎಂ., ರವಿಕುಮಾರ್ ಎಂ., ಗ್ರಾಪಂ ಸದಸ್ಯರಾದ ಮಲ್ಲಿಕರ‍್ಜುನ್, ರಮೇಶ್ ಕಣ್ಣಾಳರ, ಮುಖ್ಯಶಿಕ್ಷಕ ಮಂಜುನಾಥ್, ಶಿಕ್ಷಕರಾದ ಪ್ರಭುಗೌಡ ಪಾಟೀಲ್, ರಾಮನಗೌಡಪ್ಯಾಟಿ ಮತ್ತಿತರರಿದ್ದರು.
Read also : 22 ಕೆರೆಗಳ ಅಭಿವೃದ್ಧಿ- ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಬಿಡುಗಡೆಗೆ ಶಾಸಕ ಬಸವಂತಪ್ಪ ಮನವಿ