ದಾವಣಗೆರೆ (Davanagere): ಆವರಗೆರೆಯ ಹಳ್ಳದ ಖರಾಬು ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರಿಗೆ ಹಕ್ಕುಪತ್ರವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ (ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ) ಸಮಿತಿಯಿಂದ ಜಿಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಮಿತಿಯ ಅಧ್ಯಕ್ಷ ಡಿ. ಹನುಮಂತಪ್ಪ, ನಗರದ ಆವರಗೆರೆ ಸರ್ವೆ.ನಂ 264, 265, 225, 110 ರ ಮಧ್ಯ ಇರುವ ಖರಾಬು ಜಮೀನಿನಲ್ಲಿ ಸುಮಾರು 7 ವರ್ಷಗಳಿಂದ 200-250 ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿರುವ ಬಡಜನರಿಗೆ ಕಳೆದ 2021ರ ಮಾರ್ಚ್ನಲ್ಲಿ ಪಾಲಿಕೆಯಿಂದ ಯಾವುದೇ ನೋಟೀಸ್ ನೀಡದೆ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ ಎಂದು ಹರಿಹಾಯ್ದರು.
ಇಷ್ಟೇ ಅಲ್ಲದೇ ಕೆಲವೊಬ್ಬ ನಿರ್ಗತಿಕರ ಮೇಲೆ ಪ್ರಕರಣವನ್ನು ದಾಖಸಲಾಗಿದೆ. ನಿರಾಶ್ರಿತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ವಸತಿ ಕಲ್ಪಿಸಿ ಕೊಡುವುದಾಗಿ ಭರವಸೆ ನಿಡಿದ್ದರು. ಆದ್ದರಿಂದ ನೊಂದ ನಿರಾಶ್ರಿತರು ಅಲ್ಲಿಯ ಪಕ್ಕದ ಜಮೀನು ಮತ್ತು ಇತರೆಯವರ ಜಮೀನಿನಲ್ಲಿ ತಾತ್ಕಲಿಕ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದು, ಇನ್ನು ಕೆಲವರು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ.
ಆದ್ದರಿಂದ ಸರ್ಕಾರದ ಖರಾಬು ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸಲು ಅವಕಾಶ ಮಾಡಿಕೊಟ್ಟು ಹಕ್ಕುಪತ್ರಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾಳಪ್ಪ, ಎಂ. ಮಲ್ಲೇಶಪ್ಪ, ಶಾಂತ, ತಿಪ್ಪಣ್ಣ, ನವೀನ, ಮಂಜು, ಬಸಪ್ಪ, ಗಂಗಾಧರ, ಚಂದ್ರು, ವೆಂಕಟೇಶ್, ಜಯಮ್ಮ, ಮಾಲತಿ, ಲತಾ, ದುರುಗಮ್ಮ, ಕೆಂಚಮ್ಮ, ಮಂಜಮ್ಮ, ಸಂಗೀತ ಸೇರಿದಂತೆ ಮತ್ತಿತರರು ಇದ್ದರು.
Read also : Davanagere | ಅನುದಾನಕ್ಕಾಗಿ ಕರ್ನಾಟಕದ ಸಂಸದರಿಂದ ಕೇಂದ್ರ ಹಣಕಾಸು ಸಚಿವರಿಗೆ ಮನವಿ