ದಾವಣಗೆರೆ (Davanagere): ಪ್ರತ್ಯೇಕ ಬೈಕ್ ಕಳವು ಪ್ರಕರಣಗಳಲ್ಲಿ ಐದು ಜನ ಆರೋಪಿಗಳನ್ನು ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿ 3.85 ಲಕ್ಷ ಮೌಲ್ಯದ ಆರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಿಳಗಟ್ಟದ ನಿವಾಸಿ ಮೊಹಮ್ಮದ್ ಸೂಫಿಯಾನ್, 1ನೇ ಕ್ರಾಸ್ ಕೆಳಗಿನ ತುಂಗಾನಗರ ನಿವಾಸಿ ಮೊಹಮ್ಮದ್ ದಾದಾಪೀರ್, ದಾವಣಗೆರೆ ಅಮರಪ್ಪನ ತೋಟದ ನಿವಾಸಿ ಅಲ್ತಾಫ್, ಅಜಾದ್ ನಗರ ನಿವಾಸಿ ಬಾಬ್ಜಾನ್ ಹಾಗೂ ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಗ್ರಾಮದ ಆರ್.ರವಿ ಬಂದಿತರು.
ಈ ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.