ದಾವಣಗೆರೆ : ಮಂಡ್ಯ ಜಿಲ್ಲೆಯ ಬೆನ್ನಹಟ್ಟಿ ಗ್ರಾಮದ ಕೆಲ ಕಿಡಿಗೇಡಿಗಲು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿ ನಿಂದನೆ ಮಾಡಿರುತ್ತಾರೆ.
ಸಿದ್ದರಾಮಯ್ಯ ನವರು ಅಹಿಂದ ವರ್ಗದ ಜನಪ್ರಿಯ ನಾಯಕರು. ಇಂತಹ ನಾಯಕರ ಕುರಿತು ಕೀಳುಮಟ್ಟದ ಮಾತುಗಳು ಕೇವಲ ವ್ಯಕ್ತಿಗೇ ಅಲ್ಲ, ಸಂಪೂರ್ಣ ಸಮಾಜಕ್ಕೂ ಅವಮಾನಮಾಡಿದ್ದಾರೆ. ಜಾತಿ ಭೇದವನ್ನು ಕೆರಳಿಸುವ ಉದ್ದೇಶ ಹೊಂದಿರುವ ಇಂತಹ ಹೇಳಿಕೆಗಳು ರಾಜ್ಯದ ಸೌಹಾರ್ದತೆಗೆ ವಿಷ ಬೀಜ ಬಿತ್ತುತ್ತವೆ. ಗೃಹ ಸಚಿವರು ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಎಂದು ದಾವಣಗೆರೆ ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಮಾಜಿ ಉಪಾಧ್ಯಕ್ಷ ಜಿಲ್ಲಾ ಕನಕ ಯುವಕರ ಬಳಗದ ಜಿಲ್ಲಾಧ್ಯಕ್ಷ ಹಾಲೆಕಲ್ಲು ಎಸ್. ಟಿ. ಅರವಿಂದ್ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಕುರುಬ ಸಮಾಜ ಬಾಂಧವರು ರಾಜ್ಯದಲ್ಲಿ ಸ್ನೇಹದಿಂದ, ಸಹಜೀವನದಿಂದ ಬಾಳುತ್ತಿದ್ದಾರೆ. ಆದರೆ ಕೆಲ ಅಸಮಾಜಮುಖಿ ಶಕ್ತಿಗಳು ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಂಡು ಜಾತಿ-ಧರ್ಮಗಳ ಮಧ್ಯೆ ವಿಭಜನೆ ಹುಟ್ಟುಹಾಕಲು ಯತ್ನಿಸುತ್ತಿವೆ. ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆಸೂಕ್ತವಾಗಿ ಕ್ರಮ ಜರುಗಿಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಮಾಡಿದ್ದಾರೆ.