ದಾವಣಗೆರೆ: ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ಬಳಿಯ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಮಂಗಳವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ 27 ಕುರಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕುರಿಗಳು ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ಸೋಮಣ್ಣ ಅವರಿಗೆ ಸೇರಿದವು. ಹೊಳೆಸಿರಿಗೆರೆ ಕ್ರಾಸ್ ಸಮೀಪದ ಯಲವಟ್ಟಿ ರಸ್ತೆಯ ತೋಟವೊಂದರಲ್ಲಿ ಕುರಿಗಳೊಂದಿಗೆ ಬೀಡು ಬಿಟ್ಟಿದ್ದರು.
ಕುರಿ ಹಿಂಡಿನ ಮೇಲೆ ಚಿರತೆ ರಾತ್ರಿ ದಾಳಿ ನಡೆಸಿದೆ. ಕುರಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಚಿರತೆ ಸೆರೆಗೆ ಮುಂದಾಗಿದೆ.