Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > ದಣಿವರಿಯದ ಯುವ ನಾಯಕ ಲಿಯಾಖತ್ ಅಲಿ; ದಣಿವಿಲ್ಲದ ಸೇವೆ
ರಾಜಕೀಯ

ದಣಿವರಿಯದ ಯುವ ನಾಯಕ ಲಿಯಾಖತ್ ಅಲಿ; ದಣಿವಿಲ್ಲದ ಸೇವೆ

Dinamaana Kannada News
Last updated: June 1, 2025 12:55 am
Dinamaana Kannada News
Share
liaquat-ali-m-k-congress-leader-davanagere
SHARE

ದಾವಣಗೆರೆ ದಣಿ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪ್ರೀತಿಗೆ ಪಾತ್ರರಾದ, ನಿಷ್ಠಾವಂತ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಯಾಖತ್ ಅಲಿ ಎಂ.ಕೆ., ಜೂನ್ 1ಕ್ಕೆ ಜನ್ಮದಿನ ಆಚರಿಸಿಕೊಂಡು 44ನೇ ವರ್ಷಕ್ಕೆ ಪ್ರಾದಾರ್ಪಣೆ ಮಾಡಿದ್ದಾರೆ.

ಕೆ.ಟಿ.ಜೆ.ನಗರ ನಿವಾಸಿಯಾಗಿರುವ ಲಿಯಾಖತ್ ಅಲಿ ಎಂ.ಕೆ. ಪದವೀಧರರಾಗಿದ್ದಾರೆ. ಸಾಗರ್ ಟೈರ್ಸ್ ಮಾಲೀಕರಾಗಿ ಟೈರ್ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಲಿಯಾಖತ್ ಅಲಿ, 2009ರಲ್ಲಿ ರಾಜಕೀಯ ರಂಗ ಪ್ರವೇಶಿಸುವ ಮೂಲಕ ಜನಸೇವೆ ಮಾಡಲು ತುಡಿತ ಹೊಂದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶ

2009ರಲ್ಲಿ ರಾಜಕೀಯ ರಂಗ ಪ್ರವೇಶ ಮಾಡಿದ ಲಿಯಾಖತ್ ಅಲಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತಕಾರ್ಯಕರ್ತನಾಗಿ ವಿವಿಧ ಘಟಕಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದರಿಂದಾಗಿ ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ಜಿಲ್ಲಾ ಕಾರ್ಯಾಧ್ಯಕ್ಷ ಸ್ಥಾನ ದೊರೆಯಿತು. ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯಲ್ಲಿ ನಡೆದ ಪಕ್ಷದ ಪ್ರತಿಯೊಂದು ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಲಿಯಾಖತ್ ಅಲಿ ಅವರ ಸಾಮಾಜಿಕ ಜಾಲತಾಣದಲ್ಲಿನ ಕಾರ್ಯಕ್ಷಮತೆ ಮೆಚ್ಚಿದ ಪಕ್ಷ, ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ವಿಭಾಗದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇವರ ಸಾಮಾಜಿಕ ಸೇವೆ ಗುರುತಿಸಿದ ಕರ್ನಾಟಕ ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಮೈನುದ್ದೀನ್ ಎಚ್.ಜೆ ಅವರು ಲಿಯಾಖತ್ ಅಲಿ ಅವರನ್ನು ಕರ್ನಾಟಕ ಜವಾಹರ್ ಬಾಲ್ ಮಂಚ್ ರಾಜ್ಯ ಸಂಚಾಲಕರನ್ನಾಗಿ ನೇಮಿಸಿ ಹೊಸ ಜವಾಬ್ದಾರಿ ನೀಡಿದ್ದರು. ಇದನ್ನು ಕೂಡ ನಿಭಾಯಿಸುವ ಮೂಲಕ ಜಿಲ್ಲೆಯ ಹಲವಾರು ನಾಯಕರಿಗೆ ಚಿರಪರಿಚಿತರಾಗಿದ್ದಾರೆ.

ಕೋವಿಡನಲ್ಲಿ ಜೀವ ಪಣಕ್ಕಿಟ್ಟು ಜನಸೇವೆ

ಅಧಿಕಾರವಿರಲಿ, ಇಲ್ಲದೇ ಇರಲಿ ಪಕ್ಷ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಸದಾ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಲಿಯಾಖತ್ ಅಲಿ ಭವಿಷ್ಯದಲ್ಲಿ ಅಪರೂಪದ ಯುವ ರಾಜಕಾರಣಿ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನ ಬೇಡ. ಇದಕ್ಕೆ ಪುಷ್ಟಿ ನೀಡುವಂತೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೋವಿಡ್ ಸೋಂಕು ಇಡೀ ಜಗತ್ತನ್ನು ಕಾಡಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಎಲ್ಲರಿಗೂ ಇದು ಹೊಸ ವಿಚಾರವಾದ ಕಾರಣ ಅದನ್ನು ಎದುರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.
liaquat-ali-m-k-congress-leader-davanagere 1
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಿಯಾಖತ್ ಅಲಿ, ಗೆಳೆಯರ ತಂಡದೊಂದಿಗೆ ತಾನು ಕೂಡ ಜನತೆಯ ಪರ ನಿಂತು ಕೆಲಸ ಮಾಡಬೇಕು ಎಂದು ಪಣತೊಟ್ಟು ನಿಂತರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣು-ಹಂಪಲುಗಳನ್ನು ವಿತರಿಸಿದರು. ಮಾತ್ರವಲ್ಲ, ತಮ್ಮ ಜನ್ಮದಿನ ಅಂಗವಾಗಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರೋಗಿಗಳ ಕುಟುಂಬಸ್ಥರಿಗೆ ಸತತವಾಗಿ 15 ದಿನಗಳ ಕಾಲ ಊಟ ಬಡಿಸಿ ಹಸಿವಿನಿಂದ ಬಳಲುತ್ತಿದ್ದ ಜನರಿಗೆ ನೆರವಾಗಿದ್ದರು. ಲಾಕ್ಡೌನ್ ವೇಳೆ ಆಹಾರ ಪದಾರ್ಥಗಳ ಕೊರತೆಯನ್ನು ಅನುಭವಿಸುತ್ತಿದ್ದ ಬಡ ಜನರಿಗೆ ಅಗತ್ಯವಾದ ದಿನಸಿ ಪದಾರ್ಥಗಳ ಕಿಟ್ ವಿತರಿಸಿದ್ದರು. ಅಲ್ಲದೇ ಸತತ 26 ದಿನ ವಲಸಿಗರಿಗೆ, ನಿರ್ಗತಿಕರಿಗೆ ಹಾಗೂ ಬಡವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಿದ್ದರು.

ಪಕ್ಷದ ಸಂಘಟನೆಯಲ್ಲಿ ಸಕ್ರಿಯ

ಜಿಲ್ಲೆಯ ನಾಯಕರ ವಿಶ್ವಾಸ ಗಳಿಸುವ ಮೂಲಕ ಪಕ್ಷ ವಹಿಸಿದ ಎಲ್ಲಾ ರೀತಿಯ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ಅವರ ಪರವಾಗಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರವಾಗಿ ಸಮರ್ಥ ಶಾಮನೂರು ಅವರೊಂದಿಗೆ ಪ್ರಚಾರ ನಡೆಸುವ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಸಂಘಟಿಸಿದ್ದ ಕಾರ್ಯಕ್ರಮಗಳು, ಹೋರಾಟಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ದಾವಣಗೆರೆ ದಕ್ಷಿಣ ಯುವ ಕಾಂಗ್ರೆಸ್ ಸಮಿತಿಯೊಂದಿಗೆ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ, ದಾವಣಗೆರೆ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ವಿಭಾಗದಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆಯೋಜಿಸಿದ್ದ ಸಂದರ್ಭ, ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲೀದ್ ಅಹ್ಮದ್ ಅವರೊಂದಿಗೆ ನಗರದ ಮಿಲ್ಲತ್ ವಿದ್ಯಾಸಂಸ್ಥೆಯ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ವಿತರಣೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಗಣೇಶ ಚತುರ್ಥಿಯಲ್ಲಿ ಭಾಗವಹಿಸಿರುವುದು, ಅಸಂಘಟಿಕ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿ ಕೊಡಿಸಿರುವುದು, ಗುಜರಾತನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿ.ಅಹ್ಮದ್ ಪಟೇಲ್ ಅವರು ಜಯಗಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮತಿಯೊಂದಿಗೆ ವಿಜಯೋತ್ಸವ ಆಚರಣೆ, ಪದವೀಧರರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್ ಬಾಬು ಅವರೊಂದಿಗೆ ಚುನಾವಣೆಯಲ್ಲಿ ಭಾಗವಹಿಸಿದ್ದು, ಕೇಂದ್ರ ಸರ್ಕಾರದಿಂದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆ ಸ್ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಎಚ್.ಮುನಿಯಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದು, ಹೀಗೆ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ವಹಿಸಿದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಜಿಲ್ಲೆಯ ನಾಯಕರ, ಕಾರ್ಯಕರ್ತರ, ಮುಖಂಡರ ವಿಶ್ವಾಸ ಗಳಿಸಿಕೊಂಡಿದ್ದಾರೆ.

liaquat-ali-m-k-congress-leader-davanagere 1
ದಾವಣಗೆರೆ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ

ಪಕ್ಷದ ವಹಿಸಿದ ಹುದ್ದೆಗಳ ನಿರ್ವಹಣೆ

  • ದಾವಣಗೆರೆ ಉತ್ತರ ವಿಧಾನಸಭಾ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಮೂರು ವರ್ಷ ಸೇವೆ
  • ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮೂರು ವರ್ಷ ಸೇವೆ
  • 2021ರಿಂದ ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ವಿಭಾಗದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗಿ ಸೇವೆ
  • ದಾವಣಗೆರೆ ಜಿಲ್ಲಾ ಅಸಂಘಟಿತ ಕಾರ್ಮಿಕರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ
  • ದಾವಣಗೆರೆ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆ
  • ಕರ್ನಾಟಕ ಜವಾಹರ್ ಬಾಲ್ ಮಂಚ್ ರಾಜ್ಯ ಸಂಚಾಲಕರಾಗಿ ಸೇವೆ
  • ಯುವಗ್ರ್ರೀನ್ ಕೋ ಆಪರೇಟಿವ್ ಸೊಸೈಟಿ ದಾವಣಗೆರೆ ನಿರ್ದೇಶಕರಾಗಿ ಸೇವೆ
  • ಯುವರ್ ಗ್ರೀನ್ ಮಲ್ಟಿಪಪ್ರೋಷ್  ಕೋ ಆಪರೇಟಿವ್ ಸೊಸೈಟಿ ದಾವಣಗೆರೆ ಸದಸ್ಯರಾಗಿ ಸೇವೆ
  • ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತ ವೇದಿಕೆ ಖಜಾಂಚಿಯಾಗಿ ಸೇವೆ
  • ದಾವಣಗೆರೆ ಜಿಲ್ಲಾ ಓಲ್ಡ್ ಟೈಯರ್ ಮಾರಾಟಗಾರ ಮತ್ತು ರಿಪೇರಿದಾರರ ಸಂಘ ಕಾರ್ಯದರ್ಶಿಯಾಗಿ ಸೇವೆ
  • ಮಾಯಾಕೊಂಡ ಖಾದರ್ ಸಾಬ್ ಫೌಂಡೇಶನ್ ಕಾರ್ಯದರ್ಶಿಯಾಗಿ ಸೇವೆ
  • ಪ್ರಜಾತತ್ವ ಹ್ಯೂಮನ್ ರೈಟ್ಸ್ ಫೌಂಡೇಷನ್ ದಾವಣಗೆರೆ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ
  • ಮಹಾನಗರ ಪಾಲಿಕೆ 26 ನೇ ವಾರ್ಡ್‍ನ ಪ್ರಬಲ ಆಕಾಂಕ್ಷಿ
  • ದಾವಣಗೆರೆ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ

liaquat-ali-m-k-congress-leader-davanagere 1

ಅಭಿನಂದನೆ

ಸತತವಾಗಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ಸಮಾಜಮುಖಿ ಕಾರ್ಯಗಳೊಂದಿಗೆ ಜನರ ಸೇವೆ ಮಾಡುತ್ತಿರುವ ಲಿಯಾಖತ್ ಅಲಿ ಕೆ.ಎಂ. ಅವರಿಗೆ ಜೂ.1ರಂದು 44ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಿನಮಾನ.ಕಾಂ ವತಿಯಿಂದ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ.
liaquat-ali-m-k-congress-leader-davanagere 1
liaquat-ali-m-k-congress-leader-davanagere 1
TAGGED:Davanagere NewsDinamana.comKannada NewsLiaquat Aliಲಿಯಾಖತ್ ಅಲಿ
Share This Article
Twitter Email Copy Link Print
Previous Article Actor Ahimsa Chetan Harihara | ಸಮ ಸಮಾಜ ನಿರ್ಮಿಸಲು ಯುವ ಜನರು ಪಣ ತೊಡಬೇಕು : ನಟ ಅಹಿಂಸಾ ಚೇತನ್
Next Article Davanagere Davanagere | ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಸಂಧಾನಕ್ಕೆ ಬಗ್ಗದ ಈಶ್ವರಪ್ಪ : ಕಾದು ವಾಪಾಸ್ಸು ತೆರಳಿದ ಬಿಜೆಪಿ ನಾಯಕರು

ಶಿವಮೊಗ್ಗ : ಮಾಜಿ ಡಿಸಿಎಂ ಈಶ್ವರಪ್ಪ ಅವರ ಮನವೊಲಿಸುವ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆಸಿದ ಯತ್ನವೂ ಭಾನುವಾರ…

By Dinamaana Kannada News

Davangere | ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದು ರೈತರನ್ನೇ ಮರೆತರೆ ಹೇಗೆ? : ಸಾಣೇಹಳ್ಳಿ ಶ್ರೀ

ದಾವಣಗೆರೆ (Davangere District) : ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ರಾಜಕಾರಣಿಗಳು ರೈತರ ಪರವಾಗಿ ರೈತ ಬೆಳೆಗಳಿಗೆ ಕನಿಷ್ಠ ಬೆಂಬಲ…

By Dinamaana Kannada News

Political analysis | ಜೆಡಿಎಸ್ ಸಾರಥಿಯಾಗಲು ನಿಖಿಲ್ ರೆಡಿ

ಕಳೆದ ಶುಕ್ರವಾರ ರಾಜ್ಯ ಬಿಜೆಪಿಯ ಕೆಲ ನಾಯಕರು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದಾರೆ. ಹೀಗೆ ಹೋದವರು ಪಕ್ಷದ…

By Dinamaana Kannada News

You Might Also Like

Alur Ningaraj
ತಾಜಾ ಸುದ್ದಿ

ಮೈಸೂರು ಅಭಿವೃದ್ಧಿಗೆ 2578 ಕೋಟಿ : ದಲಿತ,ಅಹಿಂದ ವರ್ಗಕ್ಕೆ ಕೊಡುಗೆ ಶೂನ್ಯ

By Dinamaana Kannada News
Applications invited for annual financial assistance to weavers
ತಾಜಾ ಸುದ್ದಿ

ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ

By Dinamaana Kannada News
Davanagere police
ತಾಜಾ ಸುದ್ದಿ

ಶಾಲಾ ಸಂಸತ್ತು ಕೇವಲ ಹಕ್ಕಲ್ಲ ಜವಾಬ್ದಾರಿ : ಎಸ್ಪಿ ಉಮಾ ಪ್ರಶಾಂತ್

By Dinamaana Kannada News
Davanagere
ತಾಜಾ ಸುದ್ದಿ

ಬಿತ್ತನೆ ಬೀಜ, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ : ಅಂಗಡಿ ತಪಾಸಣೆಗೆ ಸೂಚನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?