ದಾವಣಗೆರೆ (Davanagere) : ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಹರಿಹರ ತಾಲೂಕಿನ ಗುಳೇದ ಗ್ರಾಮದ ಹನುಮಂತ ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 28 ಗ್ರಾಂ ತೂಕದ ಸುಮಾರು ರೂ 2,10,000/- ಬೆಲೆ ಬಾಳುವ ಬಂಗಾರದ ಸರಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅ29 ರಂದು ರಾತ್ರಿ 8.30 ರ ವೇಳೆಗೆ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ನಗರ ಕ್ಯಾಂಪನ್ ವಾಸಿ 70 ವರ್ಷದ ಲಕ್ಷ್ಮಿ ಎಂಬ ಮಹಿಳೆಯಳಲ್ಲಿದ್ದ 22 ಗ್ರಾಂ ತೂಕದ ಬಂಗಾರದ ಕೊರಳ ಚೈನ್ ಸರ ಕಿತ್ತುಕೊಂಡು ಹೋಗಿರುವ ಕುರಿತು ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಎಎಸ್ಪಿ ವಿಜಯಕುಮಾರ್, ಎಂ ಸಂತೋಷ್ , ಜಿ. ಮಂಜುನಾಥ ಹಾಗೂ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ರವರು ತನಿಖೆ ಕೈಗೊಂಡು ನ 4 ರಂದು ಆರೋಪಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಈ ಪ್ರಕರಣದ ಜೊತೆಗೆ 2023 ನೇ ಸಾಲಿನ ಮಲೆಬೆನ್ನೂರು ಠಾಣೆಯ ಪ್ರಕರಣದಲ್ಲಿಯೂ ಸಹ ಭಾಗಿಯಾಗಿರುವುದು ಪತ್ತೆಯಾಗಿದೆ.
ಈ ಸರಗಳ್ಳತನ ಪ್ರಕರಣವನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಪ್ರಭು ಡಿ ಕೆಳಗಿನ ಮನಿ, ಪಿ.ಎಸ್.ಐ (ತನಿಖೆ) ಚಿದಾನಂದಪ್ಪ, ಎ.ಎಸ್.ಐ ಶ್ರೀನಿವಾಸ ಡಿ.ಟಿ, ಮಹಮ್ಮದ್ ಇಲಿಯಾಜ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಪ್ರವೀಣ್‍ಪಾಟೀಲ್, ಫೈರೋಜ್, ವೆಂಕಟರಮಣ, ಲಕ್ಷ್ಮಣ, ವಿರೇಶ್, ಶಿವಕುಮಾರ್, ರಾಜಪ್ಪ, ಮುರುಳಿದರ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಈ ಪತ್ತೆ ಕಾರ್ಯ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
Read also : Davanagere | ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಶಿಷ್ಯವೇತನ ಹಾಗೂ ಆರ್ಥಿಕ ಅನುದಾನಕ್ಕಾಗಿ ಅರ್ಜಿ ಆಹ್ವಾನ