ಹರಿಹರ: ಭೌಗೋಳಿಕವಾಗಿ ರಾಜ್ಯದ ಮಧ್ಯ ಬಿಂದುವಾಗಿರುವ ತಾಲ್ಲೂಕಿನ ಚಿಕ್ಕಬಿದರಿ ಗಾಮದ ತುಂಗಭದ್ರ ನದಿ ಭಾಗದಲ್ಲಿ ಅತ್ಯಂತ ಎತ್ತರದ ಕನ್ನಡ ಧ್ವಜ ಕಂಬ ನಿರ್ಮಿಸಬೇಕೆಂದು ‘ನಾವು ದಾವಿಡ ಕನ್ನಡಿಗರು’ ಸಂಘಟನೆಯ ಸಂಚಾಲಕ ಮಂಡ್ಯ ಅಭಿ ಒಕ್ಕಲಿಗ ಹೇಳಿದರು.
ತಾಲ್ಲೂಕಿನ ಚಿಕ್ಕಬಿದರಿ ಗಾಮದ ನದಿ ದಡದಲ್ಲಿ ‘ನಾವುದಾವಿಡ ಕನ್ನಡಿಗರು’ ಸಂಘಟನೆಯಿಂದ ಶನಿವಾರ ಆಯೋಜಿಸಿದ್ದ ವಿಭಿನ್ನ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಏಕೀಕರಣಕ್ಕೆ ಮುನ್ನ ರಾಜ್ಯವು ಮೈಸೂರು ಕರ್ನಾಟಕ, ಹೈದರಾಬಾದ್ ಕನಾಟಕ, ಬಾಂಬೆ ಕರ್ನಾಟಕ, ಮದ್ರಾಸ್ ಕರ್ನಾಟಕ, ಕೊಡಗು ಪ್ರಾಂತ್ಯ ಎಂದು ಗುರುತಿಸಲ್ಪಡುತ್ತಿತ್ತು. ಹರಿಹರ ತಾಲ್ಲೂಕಿನ ಚಿಕ್ಕಬಿದರಿ, ರಾಣೆಬೆನ್ನೂರು ತಾಲ್ಲೂಕಿನ ಹಿರೇಬಿದರಿ, ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮಗಳ ಪರಿಸರವು ಈ ಎಲ್ಲಾ ಪ್ರದೇಶಗಳ ಕೇಂದ್ರ ಬಿಂದುವಾಗಿದೆ.
ಈ ಪರಿಸರದಲ್ಲಿ ನದಿಗೆ ಸೂಕ್ತ ಸೇತುವೆ ನಿರ್ಮಿಸಿ ಅತ್ಯಂತ ಎತ್ತರದ ಕನ್ನಡ ಧ್ವಜ ಕಂಬ ನಿರ್ಮಿಸಬೇಕಿದೆ, ಇಲ್ಲಿಯೆ ಅತ್ಯಂತ ವಿಜೃಂಬಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುವಂತಾಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಲಿದ್ದೇವೆ, ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು, ಜನತೆಯ ಸಹಕಾರ ಅಗತ್ಯವಾಗಿದೆ ಎಂದರು.
ಸಂಘಟನೆಯ ಆಗಹ ಸರಿಯಾಗಿದೆ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಈ ಕಾರ್ಯಕ್ಕೆ ಅಗತ್ಯ ಬೆಂಬಲ ನೀಡುತ್ತೇನೆ ಎಂದು ನಂತರ ಚಿಕ್ಕಬಿದರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಶಾಸಕ ಬಿ.ಪಿ.ಹರೀಶ್ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದಕ್ಕೂ ಮುನ್ನ ತೆಪ್ಪದಲ್ಲಿ ನದಿಯಲ್ಲಿ ಸಾಗುತ್ತಾ ಕನ್ನಡ ಧ್ವಜವನ್ನು ಹಾರಿಸುತ್ತಾ ಒಂದು ಸುತ್ತು ಹಾಕಲಾಯಿತು.
Read also : ಮೃತರ ಸ್ಮರಣೆಯ ದಿನ|ಆಲ್ ಸೋಲ್ಸ್ ಡೇ : ನವೆಂಬರ್ 02 ಬನ್ನಿ ಮೃತರಾದ ನಮ್ಮ ಪಿತೃಗಳನ್ನು ಸ್ಮರಿಸೋಣ
ಕಾರ್ಯಕ್ರಮದಲ್ಲಿ ಮೈಸೂರು ಚಂದನ್, ಚಿಕ್ಕಪೇಟೆ ಮನು ಆಚಾರ್, ಹಿರೇಬಿದರಿ ಕಿರಣ್, ಕೊಪ್ಪಳ ಮಂಜು ಬುದ್ಧಿಸ್ಟ್, ಬೆಂಗಳೂರು ಚೇತನ್ ಒಕ್ಕಲಿಗ, ವಟ್ಲಹಳ್ಳಿ ಸಿದ್ದೇಶ್, ಚಿಕ್ಕಬಿದರಿ ಗಜೇಂದ್ರ, ಪ್ರಜ್ವಲ್, ವಿನಾಯಕ, ಚಿತ್ರದುರ್ಗದ ಸರಸ್ವತಿ ಕುಂಬಾರ್, ಸಾಮಾಟ್ ಉಮೇಶ್, ರತ್ನಕ್ಕ, ಮಂಜುಳ, ಸಚಿನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
