ದಾವಣಗೆರೆ (Davanagere): ನಗರದ ಬಾಡಕ್ರಾಸ್ ನಿಂದ ಆಂಜನೇಯ ಕಾಟನ್ ಮೀಲ್ ಕಡೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ಎಎಸ್ಪಿ ವಿಜಯಕುಮಾರ ಎಂ. ಸಂತೋಷ & ಮಂಜುನಾಥ. ಈ, ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ರವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪಿಎಸ್‍ಐ ರೂಪ ತೆಂಬದ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆಶೋಕ್, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಬುಡೇನ್ ವಲಿ ಅವರ ತಂಡವು ಸ್ಥಳಕ್ಕೆ ದಾಳಿ ಮಾಡಿ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಾದ ವಿನಯ್ ಕುಲಕರ್ಣಿ, ವಿಶ್ವನಾಥ ವಶಕ್ಕೆ ಪಡೆದಿದ್ದಾರೆ.
1 ಲಕ್ಷ ಮೌಲ್ಯದ 01 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read also : Davanagere crime | ನಿಷೇಧಿತ ಇ-ಸಿಗರೇಟ್, ಹುಕ್ಕಾ ಗಳನ್ನು ಮಾರಾಟ : ಆರೋಪಿ ವಶಕ್ಕೆ