Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ತಾಜಾ ಸುದ್ದಿ

ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Dinamaana Kannada News
Last updated: May 16, 2025 1:20 pm
Dinamaana Kannada News
Share
Davanagere
Davanagere
SHARE

ದಾವಣಗೆರೆ ಮೇ.16 (Davanagere) : ದಾವಣಗೆರೆ ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ, ಕೌಶಲ್ಯ ಅಭಿವೃದ್ದಿ ಇಲಾಖೆ, ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಿಎಂಎಫ್‍ಎಂಇ ಫಲಾನುಭವಿಗಳಿಗೆ ಸಮಾಲೋಚನಾ ಸಮಾರಂಭ ಮತ್ತು ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ದಿ ಕಾರ್ಯಾಗಾರವನ್ನು ಶುಕ್ರವಾರ ಗ್ಲಾಸ್ ಹೌಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುದ್ರಾ ಯೋಜನೆಯಡಿ ಎರಡು ವಿಧಗಳಿವೆ. ಶಿಶು ಮತ್ತು ತರುಣ, ಸ್ವಸಹಾಯ ಸಂಘದವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಸ್ವಸಹಾಯ ಸಂಘದವರು ತಯಾರಿಸಿರುವ ಬೆಡ್‍ಶೀಟ್ ಹಾಗೂ  ಶಾಲುಗಳನ್ನು ಹಾಸ್ಟೆಲ್ ಹಾಗೂ ಸಿ.ಜಿ.ಆಸ್ಪತ್ರೆಯವರು ಖರೀದಿ ಮಾಡಬೇಕು. ಸುಮಾರು 1,20,227 ಜನ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿದ್ದು ನೀವು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡಬೇಕು. ನಗರದ ಗಾಜಿನ ಮನೆಯ ಹತ್ತಿರ ಒಂದು ಖಾಯಂ ಮಾರುಕಟ್ಟೆ ಮಳಿಗೆ ತೆರೆಯಬೇಕು. ಕೋಡುಬಳೆ, ನಿಪ್ಪಟ್ಟುಗಳಿಗೆ ಒಳ್ಳೆಯ ಪ್ಯಾಕೇಜ್ ನೀಡಬೇಕು.

ವಿದ್ಯಾರ್ಥಿ ನಿಲಯಗಳಿಗಾಗಿ ಉತ್ಪನ್ನ ಖರೀದಿಸಿದರೆ ಸಂಘಗಳಿಗೆ ನೆರವು ನೀಡಿದಂತೆ ಆಗುತ್ತದೆ. ವಿವಿಧ ಆಹಾರೋತ್ಪನ್ನಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನಲ್ಲಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಿಗಾಗಿ ಕಡ್ಡಾಯವಾಗಿ ಖರೀದಿಸಿದಲ್ಲಿ ಸಂಘದವರಿಗೆ ನೆರವು ದೊರೆಯಬಹುದು. ನಮ್ಮ ಸಂಘದವರು ತಯಾರಿಸುವ ಯಾವುದೇ ವಸ್ತುಗಳನ್ನು ಸಭೆ, ಸಮಾರಂಭಗಳಿಗಾಗಿ ಗ್ರಾಮ ಪಂಚಾಯಿತಿಗಳು ಖರೀದಿಸಬೇಕು ಎಂದರು.

Read also : ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಸ್ವಸಹಾಯ ಸದಸ್ಯರು, ಸಾಂಬಾರಪುಡಿ, ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಸಾವಯವ ಬೆಲ್ಲ, ಸಿರಿಧಾನ್ಯದ ಉತ್ಪನ್ನಗಳು, ಅಲ್ಲದೇ ದಿನಬಳಕೆಯ ಅಗರಬತ್ತಿ, ಕರಕುಶಲ ವಸ್ತುಗಳು, ಸ್ಪಂಜ್ ಮಾಲೆಗಳು, ನೆಲಹಾಸುಗಳು, ಬಣ್ಣಬಣ್ಣದ ಶಾಲುಗಳು, ಮಣ್ಣಿನಿಂದ ತಯಾರಿಸಿದ ಉತ್ಪನ್ನಗಳ ಜೊತೆಗೆ ಇನ್ನೂ ಹಲವು ಉತ್ಪನ್ನಗಳ ಪ್ರದರ್ಶನ ಮತ್ತು ಮರಾಟ ಮಳಿಗೆಗಳನ್ನು ತೆರೆಯಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ್.ಬಿ.ಇಟ್ನಾಳ್ ಮಾತನಾಡಿ,  ಜಿಲ್ಲೆಯಲ್ಲಿ ಪಿಎಂಎಫ್‍ಎಂಎಸ್ ಸ್ಕಿಂನಲ್ಲಿ 184 ಜನ ಫಲಾನುಭವಿಗಳು ಇದರ ಪ್ರಯೋಜ ಪಡೆದಿದ್ದಾರೆ.1436 ಲಕ್ಷ ಸಾಲವನ್ನು ನೀಡಲಾಗಿದ್ದು, ಇದಕ್ಕೆ ಸಬ್ಸಿಡಿ ನೀಡಲಾಗಿದೆ. ಇದರಲ್ಲಿ 68 ಜನ ರೊಟ್ಟಿ ಮಾಡುತ್ತಿದ್ದು, 36 ಜನ ಉಪ್ಪಿನಕಾಯಿ ತಯಾರು, 30 ಜನ ಮಿಲೆಟ್ಸ್ ತಯಾರು ಮಾಡುತ್ತಿದ್ದು, ಇನ್ನೂ ಕೆಲವರು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ನಲ್ ಜಲ್ ಮಿತ್ರ ಕಾರ್ಯಕ್ರಮ ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯತಿಯಲ್ಲಿ ಪ್ರತಿ ಮನೆಗಳಿಗೆ ಅಳವಡಿಸಲಾದ 24 ಗಂಟೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಪಂಚಾಯತಿಯಿಂದ ಇಬ್ಬರು ಮಹಿಳಾ ಸದಸ್ಯರನ್ನು ನಿರ್ವಹಣಾ ಸಿಬ್ಬಂದಿಯಾಗಿ ಆಯ್ಕೆ ಮಾಡಿ 50 ಮಹಿಳಾ ಸದಸ್ಯರಿಗೆ 17 ದಿನಗಳ ಕಾಲ ತರಬೇತಿ ಮತ್ತು 23 ದಿನಗಳ ಪ್ರಾಯೋಗಿಕ ಸೇರಿ ಒಟ್ಟು 40 ದಿನಗಳ ಕಾಲ ತರಬೇತಿಯನ್ನು ನೀಡಲಾಗಿದೆ.

ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪೂರಕವಾದ ಟೂಲ್ ಕಿಟ್ ವಿತರಣೆ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ ತೋಟಗಾರಿಕೆ ಉಪನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ  ಶ್ರೀನಿವಾಸ್ ಚಿಂತಾಲ್ ಉಪಸ್ಥಿತರಿದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
Next Article Applications invited ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿದ ಶಿಕ್ಷಕ ಮೇಘರಾಜ್!

ದಿನಮಾನ.ಕಾಂ ವಿಶೇಷ, ದಾವಣಗೆರೆ: ಪ್ರವಾಸ ಕರೆದುಕೊಂಡು ಹೋಗುವುದಾಗಿ ವಿದ್ಯಾರ್ಥಿಗಳಿಗೆ ಮಾತು ನೀಡಿದ್ದ ಶಿಕ್ಷಕರೊಬ್ಬರು ಸ್ವಂತ ಖರ್ಚಿನಲ್ಲಿ 40 ಪಿಯು ವಿದ್ಯಾರ್ಥಿಗಳನ್ನು…

By Dinamaana Kannada News

ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ನಿರ್ಧಾರ

ದಾವಣಗೆರೆ : ದಾವಣಗೆರೆ ಬಿಜೆಪಿ ಅಭ್ಯರ್ಥಿ ವಿರುದ್ದ ಬಂಡಾಯ ಸಾರಿರುವ ಬಿಜೆಪಿ ನಾಯಕರು ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ನಗರದ…

By Dinamaana Kannada News

ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ: ಸಕ್ಷಮ ಅಧ್ಯಕ್ಷ ಕೇಶವ್

ದಾವಣಗೆರೆ (Davanagere): ದಿವ್ಯಾಂಗರಿಗೆ ಅಗತ್ಯ ಅನುಕೂಲಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ‘ಸಕ್ಷಮ’ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆರ್‍ಎಸ್‍ಎಸ್‍ನ…

By Dinamaana Kannada News

You Might Also Like

Eeshwaramma Higher Primary and High School
ತಾಜಾ ಸುದ್ದಿ

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

By Dinamaana Kannada News
Modern Dairy Training
ತಾಜಾ ಸುದ್ದಿ

ದಾವಣಗೆರೆ|ಆಧುನಿಕ ಹೈನುಗಾರಿಕೆ ತರಬೇತಿ

By Dinamaana Kannada News
Power outage
ತಾಜಾ ಸುದ್ದಿ

ದಾವಣಗೆರೆ |ಜು. 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Innonext
ತಾಜಾ ಸುದ್ದಿ

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‍ಪೋ 1.0 : ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?