ದಾವಣಗೆರೆ :ಹರಿಹರ ನಗರದ ಅಭಿವೃದ್ಧಿಗಾಗಿ ದಾವಣಗೆರೆ ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡುವಂತೆ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹರಿಹರ ನಗರ ಸಭೆಯಲ್ಲಿ ಯಾವುದೇ ಪ್ರಗತಿ ಕಾರ್ಯಗಳು ನಡೆಯುತ್ತಿಲ್ಲ. ನಗರ ಸಭೆಯಲ್ಲಿ ಅಧಿಕಾರಿಗಳು -ಸಿಬ್ಬಂದಿಗಳ ಕೊರತೆಯಿಂದಾಗಿ ಹರಿಹರ ಅಭಿವೃದ್ದಿ ಕುಂಠಿತವಾಗಿದೆ. ಅನುದಾನದ ಕೊರತೆ ಹಾಗೂ ಹರಿಹರ ವಿಧಾನಸಭಾದಲ್ಲಿ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಸದಸ್ಯರು ಇಲ್ಲದೇ ಇರುವುದರಿಂದ ಯಾವುದೇ ಪ್ರಗತಿ ಕಾರ್ಯಗಳು ನಡೆಯುತ್ತಿಲ್ಲ. ಅಲ್ಲದೇ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದಂತಹ ಅಭ್ಯರ್ಥಿ ಮತ್ತೊಮ್ಮೆ ಅಯ್ಕೆಯಾಗುತ್ತಿಲ್ಲ. ಆದ್ದರಿಂದ ಅನುದಾನದ ಕೊರತೆ ಉಂಟಾಗುತ್ತಿದೆ. ಅಭಿವೃದ್ದಿ ಕೊರತೆ ಎದ್ದು ಕಾಣುತ್ತಿದೆ. ಅದ್ದರಿಂದ ಹರಿಹರ ನಗರಸಭೆಯನ್ನು ಮಹಾನಗರ ಪಾಲಿಕೆ ಸೇರಿಸಿ ಬೃಹತ್ ನಗರ ಪಾಲಿಕೆಯನ್ನಾಗಿ ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಹರಿಹರ ಶಾಸಕ ಬಿ.ಪಿ.ಹರೀಶ್ ರಲ್ಲಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Read also : ದಾವಣಗೆರೆ|ಸಾಮಾಜಿಕ ನ್ಯಾಯಕ್ಕಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ:ಅಬ್ದುಲ್ ಘನಿ ತಾಹೀರ್ ಒತ್ತಾಯ
ಹುಬ್ಬಳ್ಳಿಯಿಂದ ಧಾರವಾಡ ಸೇರಿಸಿ ಬೃಹತ್ ನಗರ ಪಾಲಿಕೆಯಾಗಿ ಮಾಡಿರುವ ರೀತಿಯಲ್ಲಿ ದಾವಣಗೆರೆ-ಹರಿಹರ ಸೇರಿಸಿ ಬೃಹತ್ ದಾವಣಗೆರೆ ಮಹಾನಗರ ಪಾಲಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
