ದಾವಣಗೆರೆ : ಜಿಲ್ಲೆಯಲ್ಲಿ ದಿನಾಂಕ : 01-01-2025 ರಿಂದ ಇಲ್ಲಿಯವರೆಗೆ ಕಳುವಾದ / ಕಳೆದು ಹೋದ ಮೊಬೈಲ್ ಪೋನ್‌ಗಳ ಪೈಕಿ . ಒಟ್ಟು 2370 ಪ್ರಕರಣ ದಾಖಲಾಗಿತ್ತು. CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್‌ಗಳನ್ನು ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾಗಿದೆ.
01-01-2025 ರಿಂದ ಇಲ್ಲಿಯವರೆಗೆ ಪತ್ತೆಯಾದ ಮೊಬೈಲ್‌ಗಳ ಅಂದಾಜು ಮೊತ್ತ 1.5 ಕೋಟಿಗೂ ಹೆಚ್ಚು ಮೌಲ್ಯದ ಒಟ್ಟು 861 ಮೊಬೈಲ್ ಗಳನ್ನು ಪೊಲೀಸ್ ಅಧಿಕಾರಿಗಳು ಮೊಬೈಲ್ ಗಳ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
Read also : ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ
ಸಾರ್ವಜನಿಕರ ಗಮನಕ್ಕೆ
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಳುವಾದ / ಕಳೆದು ಹೋದ ಮೊಬೈಲ್ ಪೋನ್‌ಗಳನ್ನು ವಾರಸುದಾರರು ಮೊಬೈಲ್ KSP ಮೊಬೈಲ್ App ಮೂಲಕ e-lost ನಲ್ಲಿ ದೂರು ದಾಖಲಿಸಿ, ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ನಂತರ ‘CEIR’ web portal (https://www.ceir.gov.in) ಗೆ ಭೇಟಿ ನೀಡಿ KSP ಮೊಬೈಲ್ App ಮೂಲಕ ಡೌನ್ಲೋಡ್ ಮಾಡಿಕೊಂಡ ದೂರಿನ ಸ್ವೀಕೃತಿ ಪ್ರತಿ ಹಾಗೂ ಆಧಾರ್ / ಇತರೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಗಿದೆ.