ದಾವಣಗೆರೆ : ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ ಹಾಗೂ ಸುಯೆಜ್ ಕಂಪನಿ ಸಂಯುಕ್ತಾಶ್ರಯದಲ್ಲಿ ತ್ಯಾಜ್ಯ ಸಂಗ್ರಹಣಾ ಅಭಿಯಾನ ಕಾರ್ಯಕ್ರಮವನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಆಯುಕ್ತರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಹಸಿರು ನಿಶಾನೆ ತೋರಿಸಿ, ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕರ ಹಾಗೂ ಸಂಘ–ಸಂಸ್ಥೆಗಳ ಸಹಕಾರ ಮುಖ್ಯ ಎಂದರು.
ಜೊತೆಗೆ ಸುಯೆಜ್ ಕಂಪನಿಯ ಉದ್ಯೋಗಿಗಳು ಸ್ವಯಂಪ್ರೇರಿತರಾಗಿ ತ್ಯಾಜ್ಯ ಸಂಗ್ರಹಣೆಯಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು. .
ಸುಯೆಜ್‌ನ ವಿಷ್ಣು ಭಟ್ಟ ಮಾತನಾಡಿ, “ಸುಯೆಜ್ ಕಂಪನಿಯು ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪರಿಸರ ಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ತೊಡೆದು ಹಾಕುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ” ಎಂದು ತಿಳಿಸಿದರು.
Read also : ಜುಡೋ ಸ್ಪರ್ಧೆ: ಕೆ.ವೈ.ಸ್ಪಂದನ ರಾಷ್ಟ್ರಮಟ್ಟಕ್ಕೆ ಆಯ್ಕೆ
ಸುಯೆಜ್‌ನ ಶಿವಶಂಕರ್ ಎನ್ ಮಾತನಾಡಿ, ತ್ಯಾಜ್ಯ ಸಂಗ್ರಹಣಾ ಅಭಿಯಾನದಂತಹ ಕಾರ್ಯಕ್ರಮಗಳು ನಮ್ಮ ನಗರವನ್ನು ಸ್ವಚ್ಛವಾಗಿಡಲು ಸಹಕಾರಿಯಾಗಿವೆ ಎಂದರು.
ಪಾಲಿಕೆಯ ಸಹಾಯಕ ಅಭಿಯಂತರ ಶ್ರೀನಿವಾಸರು ತ್ಯಾಜ್ಯ ಸಂಗ್ರಹಣೆಯ ಮಹತ್ವದ ಬಗ್ಗೆ ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಪರಿಸರ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸುಯೆಜ್ ಕಂಪನಿಯ ಹಿರಿಯ, ಕಿರಿಯ ಅಭಿಯಂತರರು ಹಾಗೂ ಉದ್ಯೋಗಿಗಳು ಹಾಜರಿದ್ದರು.
ಸುಯೆಜ್ ಉದ್ಯೋಗಿಗಳು ಸುಮಾರು 300 ಕೆ.ಜಿ ಕಸವನ್ನು ಸಂಗ್ರಹಿಸಿ ಪಾಲಿಕೆಯ ಕಸದ ಗಾಡಿಗೆ ಹಾಕಿ ತಮ್ಮ ಪರಿಸರ ಕಾಳಜಿಯನ್ನು ಮೆರೆದರು.
