ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಹಕ್ಕೋತ್ತಾಯಕ್ಕೆ ಮುಸ್ಲಿಂ ಸಮುದಾಯದವರು ಕೈ ಎತ್ತುವ ಮೂಲಕ ಒಮ್ಮತದಿಂದ ಬೆಂಬಲ ವ್ಯಕ್ತಪಡಿಸಿದರು.
ನಗರದ ತಾಜ್ ಪ್ಯಾಲೇಸ್ನಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮುಸ್ಲಿಂ ಮುಖಂಡರ ಹಾಗೂ ಮುತವಲ್ಲಿಗಳ ಸಮಾವೇಶ ಹಾಗೂ ಎಸ್ ಐಆರ್ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆಯ ರಾಜಕೀಯ ಸಮಲೋಚನೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅಹಿಂದ್ ಮತಗಳು ಬೆಂಬಲ ಸಿಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬಕ್ಕೆ ಟಿಕೆಟ್ ಎನ್ನುವುದು ಇನ್ನೂ ಮುಂದೆ ಸಾಧ್ಯವಿಲ್ಲ. ಶಾಮನೂರು ಕುಟುಂಬಕ್ಕೆ 1994 ರಿಂದಲೂ ಮುಸ್ಲಿಂ ಸಮುದಾಯದ ಗೆಲ್ಲಿಸಿ ಕೊಂಡು ಬಂದಿದೆ. ಈ ಚುನಾವಣೆಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ ಸಮುದಾಯವಾದ ಮುಸಲ್ಮಾನರಿಗೆ ಶಾಮನೂರು ಕುಟುಂಬ ಬೆಂಬಲಿಸಬೇಕು ಎಂದು ಆಗ್ರಹಿಸಿದರು.
ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದಿದ್ದರೆ ಮುಂದೆ ಯಾವತ್ತೂ ನಮಗೆ ರಾಜಕೀಯ ನ್ಯಾಯ ಸಿಗಲು ಸಾಧ್ಯವಿಲ್ಲ. ಅದ್ದರಿಂದ ತಮ್ಮ ತಮ್ಮ ಏರಿಯಾಗಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ತಂಝಿಮಾ ಕಮಿಟಿ ಮಾಜಿ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವೇ ನಿರ್ಣಯವಾಗಿದೆ. ಮುಸ್ಲಿಂ ಸಮುದಾಯದ ಬೆಂಬಲವಿದ್ದರೆ ಮಾತ್ರ ಗೆಲ್ಲಲು ಸಾಧ್ಯ. ನನ್ನ ಆತ್ಮೀಯ ಸ್ನೇಹಿತ ಕೆ. ಅಬ್ದುಲ್ ಜಬ್ಬಾರ್ ಮತ್ತು ನನಗೆ ಯಾರಿಗೂ ಟಿಕೆಟ್ ನೀಡಿದರೂ ನಮ್ಮ ಮುಸ್ಲಿಂ ಸಮು ದಾಯದ ಒಗ್ಗಟ್ಟಿನಿಂದ ಬೆಂಬಲಿಸಲಿದೆ. ಈ ವಿಷಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕರು ಜಾಗೃತಿಯಿಂದ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಜೆಡಿಎಸ್ ಪಕ್ಷದ ಮುಖಂಡ ಜೆ.ಅಮನುಲ್ಲಾ ಖಾನ್ ಮಾತನಾಡಿ, ಜಿಲ್ಲೆ ಎಲ್ಲ ಮುತುವಲ್ಲಿಗಳು ಹಾಗೂ ರಾಜಕೀಯ ಮುಖಂಡರುಗಳು ಹಾಗೂ ಮುಸ್ಲಿಂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ.ದಾವಣ ಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೇ ಇದ್ದರೆ ಮುಂದಿನ ಯಾವ ಚುನಾವಣೆ ಯಲ್ಲೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವ ತಿರ್ಮಾನಕ್ಕೆ ಬರಬೇಕು ಎಂದರು.
ಸಾಹಿತಿ ದಾದಾಪೀರ್ ನವಿಳೆಹಾಳ್ ಮಾತನಾ: ಡಿ,ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಂ ನಾಯಕತ್ವ ಬೇಕು. ಸಾಮಾಜಿಕ ನ್ಯಾಯ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಬಹಳ ಇದೆ ಎಂದು ಹೇಳಿದರು.
ಇದನ್ನೂ ಓದಿ : ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ :ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಚುರುಕಿನಿಂದ ಸಾಗಿವೆ
ಎಐಎಂಐಎಂ ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೋಯೇಬ್ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ನೀಡಬೇಕು ಇಲ್ಲವಾದರೆ, ಎಐಎಂಐಎA ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಹಾಗೂ ಹೈದರಾಬಾದ್ ಸಂಸದ ರಾದ ಅಸಾದೋದ್ದೀನ್ ಓವೈಸಿ ದಾವಣಗೆರೆ ಬಂದು ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ವಕ್ಪ್ ಪರಿಷತ್ ಸದಸ್ಯ ಅಬ್ದುಲ್ ಘನಿತಾಹೀರ್, ಕೆಎಂಡಿಸಿ ನಿರ್ದೇಶಕ ಮೊಹಮದ್ ಸಿರಾಜ್, ಕರ್ನಾಟಕ ವಕ್ಪ್ ಮಂಡಳಿ ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯ ರಾದ ಕೆ.ಅನ್ವರ್ಬಾಷಾ, ಖಾಲಿದ್ ಅಹಮದ್, ವಕೀಲರಾದ ರಿಯಾಜ್ ಅಹಮದ್ ಖಾನ್ , ತುಮಕೂರು ಕಾಂಗ್ರೆಸ್ ಮುಖಂಡ ಮಹಮದ್ ಇಕ್ಬಾಲ್, ಸಂತೇಬೆನ್ನೂರು ಏಜಾಜ್, ವಕೀಲರಾದ ರಿಜ್ವಿ ಖಾನ್, ಮುಸ್ತಾಕ್ ಮಾಲ್ವಿ, ಸೈಯದ್ ಖಾದರ್, ಎಸ್.ಕೆ.ಅಮಾಜದುಲ್ಲಾ , ಶಫಿ, ಟಿ.ಅಸ್ಗರ್, ವೈ.ಎಂ.ಫಕೃದ್ದೀನ್, ಸೈಯದ್ ಖಾದರ್ ಬಾಷಾ, ಯುವ ಕಾಂಗ್ರೆಸ್ ಮುಖಂಡ ಅಕ್ಬರ್ ಆಲಿ, ಆರ್.ಸಿ.ಜಾವೀದ್. ಫೈರೋಜ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಮುತುವಲ್ಲಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
