ದಾವಣಗೆರೆ : ಪ್ರಸಕ್ತ ಸಾಲಿನ ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಠಾನವಾಗುತ್ತಿರುವ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆಬೆಳೆ ಯೋಜನೆ ಅಡಿ ತಾಳೆ ಕೃಷಿ ಉತ್ತೇಜಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ನಾಟಿ ಮಾಡಲು ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುತ್ತಿದ್ದು, ಕೊಯ್ಲಿನವರೆಗೂ ವಿವಿಧ ಘಟಕದಡಿ ತೋಟಗಾರಿಕೆ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುವುದು.
Read also : ಕಾಡಾನೆ ದಾಳಿ: ಹೊಟ್ಯಾಪುರ ಕಾರ್ಮಿಕ ಮಹಿಳೆ ಸಾವು
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಹಾಗೂ ಕಲ್ಪವೃಕ್ಷ ಆಗ್ರಿ ಟೆಕ್ ಕಂಪನಿ ಲಿಮಿಟೆಡ್, ಕುರುಬರಹಳ್ಳಿ, ಹರಿಹರ ತಾ ದಾವಣಗೆರೆಗೆ ಭೇಟಿ ನೀಡಬಹುದೆಂದು ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.