ಜಗಳೂರು : ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಒ ಕೊಟ್ರೇಶ್ ಕೆಲ ಗ್ರಾಪಂ ಸದಸ್ಯರು ಮತ್ತು 25ಕ್ಕೂ ಅಧಿಕ ಸಹಚಾರರೊಡನೆ ತಾಲೂಕಿನ ಹಿರೇಮಲ್ಲನ ಹೊಳೆ ಸಮೀಪ ರಿನೀವ್ ವಿಂಡ್ ಫ್ಯಾನ್ ಕಂಪನಿಯ ರಿನ್ಯೂಬೆಲ್ ಸ್ಟೇಷನ್ ನ ಮುಖ್ಯಸ್ಥ ಉಮಾಮಹೇಶ್ವರ ರಾವ್ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ತಾಲೂಕಿನ ದೊಣ್ಣೆ ಹಳ್ಳಿ, ಗ್ರಾ ಪಂ ವ್ಯಾಪ್ತಿಗೆ ಬರುವ ರಿನಿವೇಬಲ್ ಕಂಪನಿಯ ಪವರ್ ಸ್ಟೇಷನ್ ಬಳಿ ಫೆಬ್ರವರಿ 3 ರಂದು ಕೊಟ್ರೇಶ್ ಕೆಲ ಗ್ರಾಪಂ ಸದಸ್ಯರು ಏಕಾಏಕಿ ಗೇಟ್ ಅನ್ನು ಮುರಿದು ವಾಚ್ ಮ್ಯಾನ್ ಗಳನ್ನು ತಳಿಸಿ ಎದೆಯ ಭಾಗಕ್ಕೆ ಪಿಡಿಒ ಕೊಟ್ರೇಶ್ ಬಲವಾಗಿ ಹೊಡೆದಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹಲ್ಲೆಗೊಳಗಾದ ಮತ್ತು ದೂರುದಾರ ಉಮಾ ಮಹೇಶ್ವರ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ:ಫೆ.3 ರಂದು ತೆರಿಗೆ ವಿಚಾರಕ್ಕೆಸಂಬಂದಿಸಿದಂತೆ ಕಂಪನಿಯೊಂದಿಗೆ ಪಿಡಿಒ ಪತ್ರ ವ್ಯವಹಾರ ಮಾಡಬೇಕಾಗಿತ್ತು. ಆದರೆ, ಏಕಾಏಕಿ ಪವರ್ ಸ್ಟೇಷನ್ ಗುಂಪು ಸಮೇತ ತೆರಳಿ ಪಿಡಿಒ ಹಲ್ಲೆ ನಡೆಸಿದ್ದಾರೆ ಎನ್ನುಲಾಗಿದೆ.
ಮುನ್ನಾ 2021 ರಿಂದ 2025 ರವರೆಗೆ ಗ್ರಾಮ ಪಂಚಾಯಿತಿಗೆ 17.74.440 ರೂಪಾಯಿ ಗಳನ್ನು ಗ್ರಾಮ ಪಂಚಾಯಿತಿಗೆ ಪಾವತಿ ಮಾಡಲಾಗಿದೆ. ಆದರೆ, ಗ್ರಾಪಂ ನವರು ರಸೀದಿಯನ್ನು ಸಹ ನೀಡಿರುವುದಿಲ್ಲ. ಹೊಸ ನಿಯಮದ ಪ್ರಕಾರ ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡಬೇಕೆಂಬ ನಿಯಮದ ವಿರುದ್ಧ ಕಂಪನಿಯವರು ಮಾನ್ಯ ಉಚ್ಚ ನ್ಯಾಯಾಲಯದ ಮೊರೆ ಹೊಗಿದ್ದಾರೆ.
ಇದಕ್ಕೂ ಮುನ್ನಾ 17.74.770 ರೂಗಳನ್ನು ಪಾವತಿ ಮಾಡಲಾಗಿದೆ ಆದರೂ ಸಹ ಪಿಡಿಒ ಅವರು ಪವರ್ ಸ್ಟೇಷನ್ ಬಳಿ ಗುಂಪು ಕಟ್ಟಿಕೊಂಡು ಹೋಗಿ ಮಾರಣಕ ಹಲ್ಲೇ ನಡೆಸಿದ್ದಾರೆ ದೂರುದಾರ ಉಮಾ ಮಹೇಶ್ವರ ರಾವ್ ಮಾಹಿತಿ ನೀಡಿದ್ದಾರೆ.
Read also : ಫೆ.7ರಂದು ಬೆಳಿಗ್ಗೆ10 ರಿಂದ ಸಂಜೆ 5 ರವರೆಗೆ ಅರ್ಧ ದಾವಣಗೆರೆಯಲ್ಲಿ ಕರೆಂಟ್ ಇರಲ್ಲ
ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಡಿಒ ಕೊಟ್ರೇಶ್ ರವರು ಮದ್ಯಪಾನ ಮಾಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಪಂ ಮತ್ತು ತಾಪಂ ಅಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದರು ಸಹ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ ಈತ ದೊಣ್ಣೆ ಹಳ್ಳಿ ,ಮುಸ್ಟೂರು, ಹನುಮಂತಪುರ, ಸೇರಿದಂತೆ ಒಟ್ಟು ಮೂರು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸಾಮಾಜಿಕ ಹೋರಾಟಗಾರರ ಚಾಂದ್ ಪೀರ್, ರಾಘವೇಂದ್ರ.
