ನೇಗಿಲ ಹೊತ್ತು ಹೊಲವನು ಉತ್ತಿ
ಬೀಜವ ಬಿತ್ತಿ ಸಾಗಿದ ಹೊತ್ತು
ಮುಗಿಲನು ನೋಡುತ ಮಳೆಯನು ಕಾಯುತ
ಛಲದಲಿ ದಿನವಿಡಿ ಕಾಯಕ ಮಾಡುತ
ದಣಿಯದೇ ದುಡಿವನು ನಾಡಿನ ರೈತ……
ಹೊಲದಲಿ ಹುದುಗಿದೆ ಬೀಜದ ತತ್ವ
ಕೊನರಲಿ ಎಲ್ಲೆಡೆ ಸಿರಿಧಾನ್ಯದ ಸತ್ವ
ಕಳೆಯನು ಕಿತ್ತು ಬಿಳೆಯನು ಬೆಳದಿಹ ಬೆವರನು ಹಿಂಡಿ
ಸಾಗಿದೆ ನೋಡು ಜೋಡೆತ್ತಿನ ಬದುಕಿನ ಬಂಡಿ
ದಣಿಯದೇ ದುಡಿವನು ನಾಡಿಗೆ ರೈತ……
ಹೊಲದಲಿ ಫಸಲು ಬರಲು ಸುಗ್ಗಿಯ ಕೊಯ್ಯಲು
ಹೊನಿನ್ನ ಕಣದಲಿ ಮುತ್ತಿನ ರಾಶಿಯ ಧಾನ್ಯದ ಹೊನಲು
ತನುವನು ದಂಡಿಸಿ ದುಡಿವನು ಜೋಗಿ
ಮನವನು ಕಂಡಿಸಿ ನಾಡಿಗೆ ಅನ್ನವನಿಕ್ಕುವ ಯೋಗಿ
ದಣಿಯದೇ ದುಡಿವನು ನಾಡಿಗೆ ರೈತ…….
Read also : ವೈದಿಕ ಪದ್ಧತಿಯಿಂದ ಶೂದ್ರರ ಜೊತೆಗೆ ಮಹಿಳೆಯರ ಶೋಷಣೆ :ಡಾ.ನಾಗಲಕ್ಷ್ಮಿ ಚೌಧರಿ
ದಣಿಯದೇ ದುಡಿವನು ನಾಡಿಗೆ ನಿತ್ಯ
ಕಾಯಕದಲ್ಲಿಯೇ ಕಂಡನು ಅನ್ನದ ಸತ್ಯ
ನಾಡಿನ ಗೇಹದ ನಾಡಿಯ ಮಿಡಿತದ ಮುಕುಟ ಮಣಿ
ನಾಡಿಗೆ ದೊರೆ ಈ ನಮ್ಮಯ ಹೆಮ್ಮೆಯ ಧರಣಿ ಧಣಿ
ದಣಿಯದೇ ದುಡಿವನು ನಾಡಿಗೆ ರೈತ……..
ಈ ನಾಡಿಗೆ ಐರಾವತ ಬಲವೇ
ರೈತ ರಚನೆ:- ಮಂಜುನಾಥ.ಜಿ
Civil Police Canstable
Harapanahalli taluk , Tavaragondi
