ದಾವಣಗೆರೆ: ಷೇರಿನಲ್ಲಿ ಹಣ ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ವರಿಗೆ 52.30 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಆದರೆ ವಂಚನೆಗೆ ಒಳಗಾದ ವ್ಯಕ್ತಿ ಇಂಜಿನಿಯರ್ ಎಂಬುದು ದುರದೃಷ್ಟಕರ.
ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಅಮಿಷವೊಡ್ಡಿ ಆಂಜನೇಯ ಬಡಾವಣೆಯ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಹಣ ಕಳೆದುಕೊಂಡವರು.
ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್‌ವೊಂದಕ್ಕೆ ಅಪರಿಚಿತರು ಸೇರಿಸಿದ್ದರು. ಪೇಟಿಎಂನ ಹೆಸರಿನ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುತ್ತೇವೆ ಎಂದು ನಂಬಿಸಿದ್ದರು. ಲಿಂಕ್ ಕಳಿಸಿ, ನನ್ನ ಪ್ರೊಫೈಲ್ ಕೂಡ ತಯಾರಿಸಿದ್ದರು.
Read also : ಸಮೀಕ್ಷಾ ಕಾರ್ಯ 10 ದಿನ ಮುಂದುವರೆಸಿ : ಪಿ.ಜೆ.ಮಹಾಂತೇಶ್
ಆ ನಂತರ ಹೆಚ್ಚಿನ ಲಾಭಾಂಶ ನೀಡುವುದಾಗಿ ಆನ್‌ಲೈನ್ ಮೂಲಕ 52.30 ಲಕ್ಷ ರೂ. ಮೊತ್ತವನ್ನು ವರ್ಗಾಯಿಸಿಕೊಂಡಿದ್ದಾರೆ. ನಂತರ ಹಣ ನೀಡದೇ, ಬೆದರಿಕೆಯೊಡ್ಡಿ ದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದಾರೆ.
ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
