ದಾವಣಗೆರೆ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳೆ ಕಡ್ಲೆಬಾಳು ಗ್ರಾಮದಿಂದ ಮನರೇಗಾ ಯೋಜನೆ ಉಳಿಸಿ ಬಲಪಡಿಸುವ ಉದ್ದೇಶದಿಂದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಸಂಸದೆ ಪ್ರಭಾ ಮಲ್ಲಿಕಾರ್ಜು ನ್ ಮಾತನಾಡಿ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ವಿ.ಬಿ.ಜಿ ರಾಮ್ ಜಿ ಯೋಜನೆಯನ್ನು ಖಂಡಿಸಿದರು. ಸಾಮಾನ್ಯ ಜನರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತಿದ್ದು, ಜನರ ಬದುಕಿಗೆ ತೊಂದರೆ ತಂದಿರುವ ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪರಶುರಾಮ್ ಮಾಗಾನಹಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನೇ ಕಸಿಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರು ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಕಾ ಮುರುಳಿಕೃಷ್ಣ, ರಾಘವೇಂದ್ರ ನಾಯ್ಕ, ಅಯೂಬ್ ಪೈಲ್ವಾನ್, ಜಿಪಂ ಮಾಜಿ ಸದಸ್ಯೆ ರೇಣುಕಮ್ಮ ಕರಿಬಸಪ್ಪ, ಬಾತಿ ಅಂಜಿಬಾಬು, ಬಾತಿ ಉಮೇಶ್, ಕಡ್ಲೆಬಾಳು ಪ್ರಭು, ಅಂಜಿನಪ್ಪ, ಗ್ರಾಪಂ ಅಧ್ಯಕ್ಷ್ಯೆ ರತ್ನಿಬಾಯಿ, ಮಾಗಾನಹಳ್ಳಿ ರಾಜಣ್ಣ, ಕಾಡಜ್ಜಿ ಚಂದ್ರಣ್ಣ ಮತ್ತಿತರರಿದ್ದರು.
Read also : ಜ.27 ಮಂಗಳವಾರ ಅಖಿಲ ಭಾರತ ಬ್ಯಾಂಕ್ ಮುಷ್ಕರ: ಕೆ.ರಾಘವೇಂದ್ರ ನಾಯರಿ
ವಾಲ್ಮೀಕಿ ನಗರ, ಕಡ್ಲೆಬಾಳು, ಅರಸಾಪುರ, ಚಿಕ್ಕ ಓಬಜ್ಜಿಹಳ್ಳಿ ಹಾಗೂ ದೊಡ್ಡ ಓಬಜ್ಜಿಹಳ್ಳಿ ಗ್ರಾಮಗಳ ಮೂಲಕ ಸಾಗಿದ್ದು, ಗ್ರಾಮೀಣ ಕಾರ್ಮಿಕರ ಹಕ್ಕುಗಳು ಮತ್ತು ಜೀವನಾಧಾರವಾದ ಮನರೇಗಾ ಯೋಜನೆಯ ಮಹತ್ವವನ್ನು ಜನತೆಗೆ ತಿಳಿಸಲಾಯಿತು.
