Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ದಾವಣಗೆರೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ : ಹಲವರ ಬಂಧನ -ಬಿಡುಗಡೆ
ತಾಜಾ ಸುದ್ದಿ

Davanagere | ದಾವಣಗೆರೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ : ಹಲವರ ಬಂಧನ -ಬಿಡುಗಡೆ

Dinamaana Kannada News
Last updated: October 16, 2024 1:46 pm
Dinamaana Kannada News
Share
davanagere
davanagere
SHARE

ದಾವಣಗೆರೆ (Davanagere):  ಯುಬಿಡಿಟಿ ಉಳಿಸಿ, ಪೇಮೆಂಟ್ ಸೀಟು ನಿಲ್ಲಿಸಲು ಒತ್ತಾಯಿಸಿ ಎಐಡಿಎಸ್‍ಓ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿದ ದಾವಣಗೆರೆ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂಗಡಿ ಮುಂಗಟ್ಟು ಕೆಲವಡೆ ಸ್ವಯಂ ಪ್ರೇರಿತವಾಗಿ ಬಂದಾಗಿದ್ದವು. ವಾಹನಗಳ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು. ದಾವಣಗೆರೆ ಬಂದ್ ಪ್ರತಿಭಟನೆಯ ಸಮಯದಲ್ಲಿ ಹಲವು ಪ್ರತಿಭಟನಾಕಾರರನ್ನು ಪೆÇಲೀಸರು ಬಂಧಿಸಿದ್ದಾರೆ. ಯುಬಿಡಿಟಿ ವಿದ್ಯಾರ್ಥಿಗಳ ಹೋರಾಟ ಸಮಿತಿ, ರೈತ ಸಂಘಟನೆ ಕಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ದಾವಣಗೆರೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದವು.

ಬಂದ್ ಹಿನ್ನೆಲೆಯಲ್ಲಿ ಹೊಸ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಎಐಡಿಎಸ್ ಒ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶಶಿಕಲಾ, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಸುಮನ್, ಭಾರತಿ, ಪರಶುರಾಮ, ನಾಗಸ್ಮಿತ, ಅನಿಲ್ ಹಾಗೂ ಹಲವು ರಾಜ್ಯ ನಾಯಕರನ್ನೊಳಗೊಂಡಂತೆ ಯುಬಿಡಿಟಿ ವಿದ್ಯಾರ್ಥಿ ಹೋರಾಟ ಸಮಿತಿಯ ವಿದ್ಯಾರ್ಥಿಗಳನ್ನು, ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧನದ ವೇಳೆ ಸರ್ಕಾರದ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ದ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದೆ. ಈ ನಡೆ ಅತ್ಯಂತ ಖಂಡನೀಯ ಎಂದು ಆಕ್ರೋಶಿಸಿರುವ ಪ್ರತಿಭಟನಾಕಾರರು, ಯುಬಿಡಿಟಿ ರಾಜ್ಯದ ಏಕೈಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು. ಬಡ, ಮಧ್ಯಮ ವರ್ಗದ ಜನರ ಮಕ್ಕಳಿಗೆ ಆಶಾಕಿರಣವಾಗಿದೆ. ಇದನ್ನೂ ಕೂಡ ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಸಲು ಮುಂದಾದರೆ ಪ್ರತಿಭಟನೆ ನಡೆಸುವವರನ್ನು ಬಂಧಿಸಿ ಹಕ್ಕನ್ನು ಕಿತ್ತುಕೊಳ್ಳುವ ಸರ್ಕಾರದ ನಡೆಗೆ ನಮ್ಮ ವಿರೋಧ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Read also : Davanagere | 21 ದಿನಗಳೊಳಗಾಗಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ಡಿಸಿ ಸೂಚನೆ

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸೀಟುಗಳನ್ನು ಸಂಪೂರ್ಣವಾಗಿ ಬಡ ವಿದ್ಯಾರ್ಥಿಗಳಿಗೆ ಮೀಸಲಿರಿಸದೆ, ಶೇಕಡ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿಯಿಂದ ಪೇಮೆಂಟ್ ಸೀಟುಗಳಾಗಿ ಮಾರಾಟ ಮಾಡಲು ನಿರ್ಧರಿಸಿರುವುದು ಬಡವರ ,ಹಿಂದುಳಿದವರ, ಮಧ್ಯಮ ವರ್ಗದವರ ಮಕ್ಕಳ, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಂಡಂತಾಗಿದೆ. ಒಂದೆಡೆ ಸರಕಾರವೇ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುತ್ತದೆ. ಇನ್ನೊಂದೆಡೆ ಇದೆಲ್ಲದನ್ನು ವಿರೋಧಿಸಿದ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ. ಇದು ರಾಜ್ಯ ಸರಕಾರ ವಿದ್ಯಾರ್ಥಿಗಳ ಹೋರಾಟದ ಹಕ್ಕಿನ ಮೇಲೆ ಮಾಡುತ್ತಿರುವ ದಮನಕಾರಿ ನೀತಿಯಾಗಿದೆ. ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಎಐಡಿಎಸ್ ಒ ರಾಜ್ಯ ಸಮಿತಿಯು ಆಗ್ರಹಿಸಿದೆ.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere 21 ದಿನಗಳೊಳಗಾಗಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ಡಿಸಿ ಸೂಚನೆ
Next Article Harihara Harihara | ಮೊಬೈಲ್‌ಗಳಿಂದ ದೂರವಿರಿ : ಪ್ರೊ. ಸಿ.ಕೆ. ರಮೇಶ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 42 : ಆಕೆ ತಲೆಯೆತ್ತಿ ನಡೆದಿದ್ದಾಳೆ

Kannada News | Sanduru Stories | Dinamaana.com | 02-06-2024 ನಮ್ಮೂರು! ಅದೇ ನಿಮಗೆ ಗೊತ್ತಲ್ಲ...! ಅದೇ ಬೆಟ್ಟ-ಗುಡ್ಡ,ಕಾಡು-ಮೇಡು,…

By Dinamaana Kannada News

ನಮ್ಮ ಸೈನಿಕರ ಶೌರ್ಯ ನಮಗೆ ಹೆಮ್ಮೆ : ಲಿಯಾಖತ್ ಆಲಿ

ದಾವಣಗೆರೆ  (Davanagere): ಭಾರತದ ಯೋಧರು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರುತಿಸಿ ದಾಳಿ ನಡೆಸುವ ಮೂಲಕ ಪಹಲ್ಗಾಮ್‍ನಲ್ಲಿ ಘಟನೆಗೆ ತಕ್ಕ ಉತ್ತರ…

By Dinamaana Kannada News

Davanagere | ಶೇ 100 ರಷ್ಟು ಸಾಕ್ಷರತೆ ಸಾಧಿಸಲು ಎಲ್ಲರೂ ಶ್ರಮಿಸಿ : ಸುರೇಶ್ ಬಿ.ಇಟ್ನಾಳ್

ದಾವಣಗೆರೆ (Davanagere): ಜಿಲ್ಲೆಯ 74 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತೆ ಹೊಂದಿರುವ ಗ್ರಾಮಗಳೆಂದು ಗುರುತಿಸಿದ್ದು ಜಿಲ್ಲೆ ಶೇ 85 ರಷ್ಟು ಸಾಕ್ಷರತಾ…

By Dinamaana Kannada News

You Might Also Like

Davangere
Blog

ಸಾಹಿತ್ಯ ,ಬರಹಗಳು ಸಾಮಾಜಿಕ‌ ದೋಷ ತಿದ್ದಬೇಕು : ಲೇಖಕಿ ಮಂಜುಳಾ ಮಂಜಪ್ಪ

By Dinamaana Kannada News
Davanagere
ತಾಜಾ ಸುದ್ದಿ

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Davanagere | ಹಾವು ಕಚ್ಚಿ ಬಾಲಕಿ ಸಾವು

By Dinamaana Kannada News
Davanagere police
ತಾಜಾ ಸುದ್ದಿ

Davanagere | ಆಟೋ ಚಾಲಕರಿಗೆ 20600 ರೂ. ದಂಡ : ಒಟ್ಟು 105 ಪ್ರಕರಣ ದಾಖಲು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?