ಜಗಳೂರು: ವಿಜ್ಞಾನವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು ಬಹುತೇಕ ವಿಜ್ಞಾನವಿಲ್ಲದೆ ಜೀವನ ನಡೆಸುವಂತಹ ಪರಿಸ್ಥಿತಿ ಇಲ್ಲದಂತಾಗಿದೆ ಎಂದು ತಾಲೂಕಿನ ತಮಲೆಹಳ್ಳಿ ಗ್ರಾಮದ ಪಿಎಂ ಶ್ರೀ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್ ಟಿ ಎಂ ಸಿ ಅಧ್ಯಕ್ಷ ಎಂ ಜೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ತಮಲೆಹಳ್ಳಿ ಗ್ರಾಮದ ಪಿಎಂ ಶ್ರೀ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು
ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. 1928ರ ಫೆಬ್ರವರಿ 28ರಂದು ಮಹಾನ್ ಭಾರತೀಯ ವಿಜ್ಞಾನಿ ಸಿ.ವಿ. ರಮನ ಅವರು “ರಮನ ಪರಿಣಾಮ” ಅನ್ನು ಕಂಡುಹಿಡಿದ ದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಈ ಮಹತ್ವದ ಆವಿಷ್ಕಾರಕ್ಕಾಗಿ ಅವರಿಗೆ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು.
1986ರಲ್ಲಿ ಭಾರತ ಸರ್ಕಾರ ಈ ದಿನವನ್ನು “ರಾಷ್ಟ್ರೀಯ ವಿಜ್ಞಾನ ದಿನ”ವೆಂದು ಘೋಷಿಸಿತು ಅಂದಿನಿಂದ ಈ ದಿನವನ್ನು ವಿಜ್ಞಾನ ದಿನವನ್ನಾಗಿ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳು ಕಲಿಯುವ ಸಮಯದಲ್ಲಿ ಆಸಕ್ತಿಯಿಂದ ಕಲಿತಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಶಿಕ್ಷಕ ಲೋಕೇಶ್ ಮಾತನಾಡಿ, ಈ ಆವಿಷ್ಕಾರವು ಭೌತಶಾಸ್ತ್ರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆಯಾಗಿದ್ದು, ರಸಾಯನಶಾಸ್ತ್ರ, ವೈದ್ಯಕೀಯ, ಅಂತರಿಕ್ಷ ವಿಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆಗೆ ಹೊಸ ದಾರಿಯನ್ನು ತೋರಿಸಿದೆ. ವಿಜ್ಞಾನ ದಿನಾಚರಣೆಯ ಉದ್ದೇಶಗಳು ಸಮಾಜದಲ್ಲಿ ವಿಜ್ಞಾನ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮತ್ತು ಕುತೂಹಲವನ್ನು ಉತ್ತೇಜಿಸುವುದು. ವಿಜ್ಞಾನಿಗಳ ಸಾಧನೆಗಳನ್ನು ಸ್ಮರಿಸಿ ಗೌರವಿಸುವುದು. ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳನ್ನು ದೂರ ಮಾಡಿ ವೈಜ್ಞಾನಿಕ ದೃಷ್ಟಿಕೋನವನ್ನು ಬಲಪಡಿಸುವುದು ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಶಿಕ್ಷಕರಾದ ಸುಬನ್ ಸಾಬ್, ಸುರೇಶ್, ಅಮೃತನಾಡಿಗಾರ್, ವಿಜಯ, ಅತಿಥಿ ಶಿಕ್ಷಕರುಗಳಾದ ಮಂಜುನಾಥ ಗುರಮ್ಮ, ಚಿತ್ರಲಿಂಗಪ್ಪ, ನಾಗರಾಜ್ ಸೇರಿದಂತೆ ವಿದ್ಯಾರ್ಥಿಗಳು ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ಕಿರಿಯರು ಹಾಜರಿದ್ದರು.
ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಒಂದು ಆಚರಣೆ ಮಾತ್ರವಲ್ಲ; ಅದು ವಿಜ್ಞಾನ ಚಿಂತನೆಗೆ ಪ್ರೇರಣೆ ನೀಡುವ ಮಹತ್ವದ ದಿನವಾಗಿದೆ. ಯುವಜನತೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ತೋರಿಸಿ ಸಂಶೋಧನೆಗೆ ಮುಂದಾದರೆ ದೇಶದ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಸಾಗುತ್ತದೆ. ವಿಜ್ಞಾನ ಮನೋಭಾವ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. “ಜ್ಞಾನವೇ ಶಕ್ತಿ” ಎಂಬ ಮಾತಿನಂತೆ, ವಿಜ್ಞಾನವೇ ನಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಶಕ್ತಿ
ವಿಜ್ಞಾನ ಶಿಕ್ಷಕಿ ಗೋದ ಸಂಗೀತ,
