ಹರಿಹರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ವಿರುದ್ಧ ಶೂ ಎಸೆದ ಘಟನೆಯನ್ನು ಕರ್ನಾಟಕದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಖಂಡಿಸಿದ್ದಾರೆ.
ಸೋಮವಾರದAದು ಬೆಳಿಗ್ಗೆ ಕೋರ್ಟ್ನಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ಅಪಮಾನವನ್ನು ಸಹಿಸುವುದಿಲ್ಲ ಎಂದು ಹೇಳುತ್ತಾ ರಾಕೇಶ್ ಕಿಶೋರ್ ಎಂಬ ವಕೀಲರೊಬ್ಬರು ಧರಿಸಿದ್ದ ಶೂವನ್ನು ಸಿಜೆಐ ಗವಾಯಿ ಅವರತ್ತ ಎಸೆದಿದ್ದಾನೆ.
ವಿವಿಧ ಪ್ರಕರಣಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಆದೇಶಿಸುತ್ತಿಲ್ಲ ಹಾಗೂ ಸಿಜೆಐ ದಲಿತ ಸಮುದಾಯಕ್ಕೆ ಸೇರಿದವರೆಂಬ ಧ್ವೇಷಾ ಭಾವನೆಯಿಂದಸAಘ ಪರಿವಾರದ ಪ್ರಚೋದನೆಯಿಂದ ಈ ಕೃತ್ಯಎಸಗಿದಆರೋಪಿತನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಸಿಜೆಐ ಗವಾಯಿ ಅವರು ಈಚೆಗೆ ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್‌ಕಾರ್ಯಚರಣೆಗೆತಡೆ ನೀಡಿದ್ದು, ಯಾವುದೆ ಪ್ರಕರಣಇದ್ದರೂ ಸಂವಿದಾನ, ಕಾನೂನು, ಸಾಮಾಜಿಕ ನ್ಯಾಯವನ್ನಾಧರಿಸಿ ಆದೇಶ ನೀಡುತ್ತಿರುವುದು ಸಂಘ ಪರಿವಾರ ಮತ್ತು ಬಿಜೆಪಿಗೆ ನುಂಗಲಾರದತುತ್ತಾಗಿ ಪರಿಣಮಿಸಿದೆ.
ಹಣ, ತೋಳ್ಬಲದಿಂದ ಶಾಸಕಾಂಗ ಮತ್ತುಕಾರ್ಯಾಂಗದ ಮೇಲೆ ಅಧಿಪತ್ಯ ಸಾದಿಸುತ್ತಿರುವ ಸಂಘ ಪರಿವಾರದವರು ನ್ಯಾಯಾಂಗವನ್ನೂ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸಿದ್ದಾರೆ. ಇದೇ ಮಾನಸಿಕತೆಯ ಜನರು ಸಂವಿಧಾನ ಬದಲಿಸುವ, ಮೀಸಲಾತಿರದ್ದು ಪಡಿಸುವ ಮಾತುಗಳನ್ನೂ ಈಗಾಗಲೆ ಆಡಿದ್ದಾರೆ.
Read also : ದಾವಣಗೆರೆ|ದಸರಾ ಹಬ್ಬದಲ್ಲಿ ಸಂವಿಧಾನ ಬಾಹಿರ ಘೋಷಣೆ ಆರೋಪ: ಕ್ರಮಕ್ಕೆ ಎಸ್ಪಿಗೆ ಮನವಿ
ಇವರ ತಾಳಕ್ಕೆ ತಕ್ಕಂತೆ ಕುಣಿಯುವ ನ್ಯಾಯಾಧೀಶರಿಗೆ ನಿವೃತ್ತಿ ನಂತರ ರಾಜ್ಯಗಳ ರಾಜ್ಯಪಾಲರಾಗಿ ನೇಮಿಸುವುದು, ರಾಜ್ಯಸಭಾ ಸದಸ್ಯತ್ವ, ಪದ್ಮವಿಭೂಷಣ ಪ್ರಶಸ್ತಿ, ವಿವಿಧರಾಷ್ಟç ಮಟ್ಟದ ನ್ಯಾಯಮಂಡಳಿ, ಆಯೋಗಗಳ ಅಧ್ಯಕ್ಷರಾಗಿ ನೇಮಿಸಿರುವುದು ನಮ್ಮಕಣ್ಣ ಮುಂದಿದೆ. ಅವರ ತಾಳಕ್ಕೆ ತಕ್ಕಂತೆ ಕುಣಿಯದ ನ್ಯಾಯಧೀಶರನ್ನು ಬೆದರಿಸಲು ಇಂತಹ ಕೃತ್ಯಗಳನ್ನು ವ್ಯವಸ್ಥಿತವಾಗಿ ಎಸಗಲಾಗುತ್ತಿದೆ.
ಈ ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗದ ಅಸ್ತಿತ್ವ ಉಳಿಸಲು ಪ್ರತಿಯೊಬ್ಬರೂಧ್ವನಿ ಎತ್ತಬೇಕಿದೆ ಎಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.
