ಹರಿಹರ (Harihara) : ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ್ ಕಿವಿಮಾತು ಹೇಳಿದರು.
ನಗರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಇಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ಪಡೆದರೆ ಸಾಲದು. ಓದಿನ ಜೊತೆಗೆ ಕೌಶಲ್ಯಗಳನ್ನು ಆಳವಡಿಸಿಕೊಳ್ಳಬೇಕು. ಅಲ್ಲದೇ ಉತ್ತಮ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠ (ರಿ.), ಉಪಾಧ್ಯಕ್ಷ ಡಿ. ಎಂ. ಹಾಲಸ್ವಾಮಿ ಡಿ. ನಿರ್ದೇಶಕರಾದ ಜಿ. ಶಿವಾನಂದಪ್ಪ ,ಎನ್. ಹೆಚ್. ಪಾಟೀಲ್, ಅಧ್ಯಕ್ಷತೆ ಪ್ರಾಂಶುಪಾಲರಾದ ಡಾ. ಎನ್. ಹೆಚ್. ಶಿವಗಂಗಮ್ಮ ವಹಿಸಿದ್ದರು.
ಐ.ಕ್ಯೂ .ಎ.ಸಿ. ಸಂಯೋಜಕ ಡಾ.ವೀರಣ್ಣ ಬಿ. ಶಟ್ಟರ್, ಸಾಂಸ್ಕೃತಿಕ ವೇದಿಕೆ ಸಂಯೋಜಕ ಪ್ರೊ.ವಿಶಾಲ್ ಬೆಂಚಳ್ಳಿ. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರೊ ಮಂಜುನಾಥ್ ಸಜ್ಜನ್, ಪ್ರೊ. ರಮೇಶ್ ಕೆ ಪರ್ವತಿ, ಡಾ. ಪರಮೇಶ್ವರ್ ನಾಯಕ್ ಪ್ರೊ. ಸಿದ್ದಯ್ಯ ಎಸ್. ವಿ. ಪ್ರೊ. ಭರಮಪ್ಪ ಟಿ., ಡಾ. ಪ್ರಿಯಾಂಕ ವೈ.ಬಿ.ಡಾ. ಅರುಣ್ ಕುಮಾರ್ ಟಿ. ಬುಡ್ಡನವರ್ ಡಾ. ಸಂತೋಷ್ ಎಸ್.ಎಂ. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ರಶ್ಮಿ ಜಿ.ಎಚ್. ಡಾ. ದಿವಾಕರ್ ಎಸ್. ಟಿ. ಪ್ರೊ.ಸಂಕೀರ್ಣ ಪಿ.ಬಿ. ಉಪಸ್ಥಿತರಿದ್ದರು.
Read also : Davanagere | ದಾವಣಗೆರೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ : ಹಲವರ ಬಂಧನ -ಬಿಡುಗಡೆ
ಜಿ.ಬಿ. ಪ್ರಸಿದ್ಧ ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಟ್ಟರು. ಸುಕನ್ಯ ಎಂ. ನಿರೂಪಿಸಿದರು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.