ದಾವಣಗೆರೆ : ಎಸ್.ಎಸ್ ಕೇರ್ ಟ್ರಸ್ಟ್ ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ಜೀವನದಲ್ಲಿ ಆಶಾಕಿರಣವಾಗಿದೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಬಾಪೂಜಿ ಆಡಿಟೋರಿಯಂನಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ನ ಸ್ಟೂಡೆಂಟ್ ವಿಂಗ್ ನಿಂದ ಬುಧವಾರ ಆಯೋಜಿಸಿದ್ದ “ಆರಂಭ” ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂಸ್ಥೆಯ ವಿಶೇಷತೆಯೆಂದರೆ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದು ಟ್ರಸ್ಟ್ ಜೊತೆಗೂಡಿ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು.ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಕೌಶಲ್ಯ ಹಾಗೂ ಸೇವಾಭಾವ ಬೆಳೆಸುವ ಪಾಠಶಾಲೆಯಾಗಿದೆ ಎಂದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ವಿದ್ಯಾರ್ಥಿ ವಿಭಾಗವು ಕೈಗೊಂಡಿದ್ದ “ಕ್ಯಾನ್ಸರ್ ಕಾಳಜಿ”, “ಸಂಸಾಧನದಂತಹ” ಕಾರ್ಯಕ್ರಮಗಳ ಮೂಲಕ ಆರೋಗ್ಯ ಸಮಸ್ಯೆಗಳ ಮಾನವೀಯ ಅಂಶಗಳನ್ನು ಶ್ಲಾಘಿಸಿದರು.
“ಜಲ ಉಳಿಸಿ – ಜೀವ ಉಳಿಸಿ” ಅಭಿಯಾನ, “ಟ್ರೀ ಆಫ್ ಹೋಪ್” ಮೂಲಕ 200 ಗಿಡಗಳ ನೆಡುವ ಕಾರ್ಯ, ರಕ್ತದಾನ ಶಿಬಿರ, ವಯನಾಡ್ ಭೂಕುಸಿತ ಪರಿಹಾರ ಕಾರ್ಯಗಳಲ್ಲಿ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಕಳುಹಿಸುವಂತಹ ನೂರಾರು ಕಾರ್ಯಗಳಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಪ್ರಶಂಸಿಸಿದರು.
Read also : ಚುನಾವಣೆ ನಿಗದಿಗೆ ಹಣದ ಬೇಡಿಕೆ : ಅಧಿಕಾರಿ ಲೋಕಾ ಬಲೆಗೆ
ಅನಾಥಾಶ್ರಮ, ವೃದ್ಧಾಶ್ರಮ ಮತ್ತು ದೃಷ್ಟಿಹೀನ ಶಾಲೆಗಳಿಗೆ ಭೇಟಿ ನೀಡಿ ನೆರವು ನೀಡಿದ ವಿದ್ಯಾರ್ಥಿಗಳ ಕಾರ್ಯವು ಹೃದಯಸ್ಪರ್ಶಿಯಾಗಿದೆ. “ನನ್ನ ಜನ್ಮದಿನದಂದು ವಿದ್ಯಾರ್ಥಿಗಳು ದೃಷ್ಟಿಹೀನ ಮಕ್ಕಳಿಂದ ಬ್ರೈಲ್‌ನಲ್ಲಿ ಬರೆದ ಶುಭಾಶಯ ಸಂದೇಶವನ್ನು ಕೊಟ್ಟ ಕ್ಷಣವನ್ನು ಎಂದಿಗೂ ಮರೆಯಲಾಗದು ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ಕೋರ್ ಕಮಿಟಿ ಸದಸ್ಯರುಗಳಾದ ಡಾ.ಮೂಗನಗೌಡ,ಡಾ.ಜಿ.ಎಸ್. ಲತಾ,ಡಾ.ಶುಭಾ ದಾವಳಗಿ, ಡಾ.ಅನಿತಾ,ವಿದ್ಯಾರ್ಥಿ ಘಟಕದ ಓಂ ದುಬೆ,ಟಿ.ಪ್ರಿಯಾ ಹಾಗೂ ಬಾಪೂಜಿ ಸಂಸ್ಥೆಯ ಕಾಲೇಜುಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.