ದಾವಣಗೆರೆ : ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಠದಲ್ಲಿ ಅಸ್ಮಿತ ಖೇಲೋ ಇಂಡಿಯಾ ಪ್ರವೇಶಕ್ಕಾಗಿ ನಡೆದ ಕರ್ನಾಟಕ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಾಲಕಿಯರ 10 ವರ್ಷದ ಕೆಳಗಿನ ವಯೋಮಾನದ ಸಬ್ ಜೂನಿಯರ್ ಯೋಗಾಸನದ ಸ್ಪರ್ಧೆಯಲ್ಲಿ ಇಂಪನ R.C ಯಾದವ್ ಪ್ರಥಮ ಸ್ಥಾನ, 18 ವರ್ಷದ ಕೆಳಗಿನ ವಯೋಮಾನದ ಅಕ್ಷತಾ A. N. . ದ್ವಿತೀಯ ಸ್ಥಾನ, ಅಕ್ಷರ A.N ರಿಷಿಕ್ ಸಾಗರ್, ವಿಠ್ಠಲ ರನ್ನರ್ ಅಪ್ ಆಗಿ ದಾವಣಗೆರೆ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
‘ಅವಿಯಾ’ ಅಂತರಾಷ್ಟ್ರೀಯ ಯೋಗ ಅಕಾಡೆಮಿಯಲ್ಲಿ ತರಬೇತಿ ಪಡೆಯುತಿದ್ದಾರೆ.
Read also : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಯೋಗ ಗುರುಗಳಾದ ಸುಮಾತೀರ್ಥರಾಜ್ ಹೋಲೂರ್ ಮತ್ತು ದಾವಣಗೆರೆ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ವಾಸುದೇವ ರಾಯ್ಕರ್ ಮತ್ತು ಪ್ರಧಾನ ಕಾರ್ಯದರ್ಶಿ ಪರಶುರಾಮ ಹಾಗೂ ಸದಸ್ಯರು ವಿಜೇತರಿಗೆ ಮುಂದಿನ ಶೈಕ್ಷಣಿಕ ಮತ್ತು ಕ್ರೀಡಾ ದಿನಗಳು ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.