ದಾವಣಗೆರೆ (Davangere) : ಕೆಂಪೇಗೌಡರ ರೀತಿ ವೈಜ್ಞಾನಿಕ ತಳಹದಿಯ ಮೇಲೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ 516 ನೇ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
.ಕರ್ನಾಟಕದ ಶೇ.50 ರಷ್ಟು ಆರ್ಥಿಕ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಕೆಂಪೇಗೌಡರು ಮೊದಲು ಯಲಹಂಕಕ್ಕೆ ಬಂದು ನಂತರ ಮಾಗಡಿಗೆ ಬಂದರು. ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ ವಹಿವಾಟುಗಳಿಗೆ ಹಾಗೂ ಕುಶಲಕರ್ಮಿಗಳ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟರು. ಹಾಗಾಗಿ ವಿದ್ಯಾರ್ಥಿಗಳು ಕೆಂಪೇಗೌಡರ ಹಾದಿಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ನಗರವನ್ನು ಹೇಗೆ ಬೆಳವಣಿಗೆ ಮಾಡಬೇಕು. ನಗರಕ್ಕೆ ಯೋಜನೆ ಯಾವರೀತಿ ರೂಪಿಸಬೇಕು ಎಂದು ಈ ಕ್ಷೇತ್ರದ ಕುರಿತು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಉದ್ಯೋಗವು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಬೆಂಗಳೂರಿನಲ್ಲಿ ಕೆಂಪೆಗೌಡರು ಸುಮಾರು 26 ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ನಿರ್ಮಿಸುವ ಪೇಟೆಗಳು ಯಾವುದೇ ಟ್ರಾಫಿಕ್ ಆಗದಂತೆ ಜಾಗೃತಿ ವಹಿಸಿ ದ್ದಾರೆ. ಸಿಂಧೂ ನಾಗರಿಕತೆ ಪ್ಲಾನ್ ಪ್ರಕಾರ ಬೆಂಗಳೂರನ್ನು ನಿರ್ಮಾಣ ಮಾಡಿದರು. ಸಾರ್ವಜನಿಕರು ಬಾವಿ ಇಲ್ಲವೆ ಬೋರ್ ತೆಗೆದರೆ 10-15 ಅಡಿ ಅಳದಲ್ಲೇ ನೀರು ಸಿಗುವಂತೆ ಕ್ರಮವಹಿಸಿದ್ದಾರೆ. ಅನೇಕ ದೇವಸ್ಥಾವನ್ನು ನಿರ್ಮಾಣ ಮಾಡಿದ್ದಾರೆ.
Read also : ಗಾಂಧಿ ಪರಿವಾರ ದೇಶಕ್ಕಾಗಿ ಸೇವೆ, ತ್ಯಾಗ ಮಾಡಿದೆ : ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ
ಹಿರಿಯ ಪತ್ರಕರ್ತರಾದ ಬಿ.ಎನ್ ಮಲ್ಲೇಶ್ ಮಾತನಾಡಿ, ಕೆಂಪೇಗೌಡರು ಉತ್ತಮ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆ ಕಟ್ಟಿಸಿದರು, ಮಾರುಕಟ್ಟೆ ಕಟ್ಟಿದ್ದರು. ಆ ಮೂಲಕ ಸುಂದರ, ಸೌಹಾರ್ಧ ರಾಜ್ಯವನ್ನು ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣಕರ್ತರು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಡಿಡಿಪಿಐ ಕೊಟ್ರೇಶ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಬಿಇಒ ಪುಪ್ಪಾಲತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್, ಉಪಸ್ಥಿತರಿದ್ದರು.