ಹರಿಹರ (Harihara): ಸ್ಥಿರ ಮತ್ತು ಕಠಿಣ ಪರಿಶ್ರಮದ ವ್ಯಕ್ತಿತ್ವ ರೂಢಿಸಿಕೊಳ್ಳುವ ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಸಾಧನೆ ಸಾಧಿಸಲು ಸಾಧ್ಯ ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥೆ ಸ್ಥಾಪಕ ವಿನಯ್‍ಕುಮಾರ್ ಜಿ.ಬಿ. ಹೇಳಿದರು.
ನಗರದ ಕಿರ್ಲೋಸ್ಕರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಕಿಮ್) ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಉದ್ಯೋಗ ಯೋಗ್ಯತಾ ಕೌಶಲಗಳು ಮತ್ತು ಸಿವಿಲ್ ಸರ್ವಿಸಸ್ ತಯಾರಿ’ಕುರಿತಂತೆ ಚಿಂತನಾತ್ಮಕ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.
ಉನ್ನತ ಗುರಿ ನಿಗದಿ ಮಾಡುವುದು, ಆ ಗುರಿಯನ್ನು ತಲುಪುವ ಮಾರ್ಗವನ್ನು ನಿಶ್ಚಯಿಸಬೇಕು, ಗುರಿ ತಲುಪಲು ಎದುರಾಗುವ ಸವಾಲುಗಳನ್ನು ಕಠಿಣ ಪರಿಶ್ರಮದ ಮೂಲಕ ಪರಿಹರಿಸಿಕೊಳ್ಳಬೇಕು, ಯುಪಿಎಸ್‍ಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಯಾಂಕದಲ್ಲಿ ಉತ್ತೀರ್ಣರಾಗುವ ಭಾಗ್ಯ ಮಹಾನಗರಗಳಿಗೆ ಅಷ್ಟೆ ಅಲ್ಲ ಸಣ್ಣ, ಪುಟ್ಟ ನಗರ, ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೂ ಲಭಿಸುತ್ತದೆ ಎಂದರು.
ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಯಾಂಕಗಳನ್ನು ಪಡೆದ ಅವರ ಸಂಸ್ಥೆಯ ಹಲವು ವಿದ್ಯಾರ್ಥಿಗಳ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುವ ಮೂಲಕ, ಅವರು ಭವಿಷ್ಯದ ಸಿವಿಲ್ ಸರ್ವಿಸ್ ಅಭ್ಯರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದರು.
Read also : ಪಾಲಿ ನೆರಳು ಪರದೆ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಕಿಮ್ ಸಂಸ್ಥೆ ಪ್ರಾಚಾರ್ಯಡಾ.ಗಿರೀಶ್ ವೈ.ಎಂ.ಮಾತನಾಡಿ, ಕಾಡುಗಲ್ಲು ಸುಂದರ ಮೂರ್ತಿಯಾಗಿರೂಪ ಪಡೆಯಲುಸಹಸ್ರಾರು ಏಟುಗಳನ್ನು ಪಡೆಯುತ್ತದೆ, ಹಾಗೆಯೆಉನ್ನತ ಸಾಧನೆ ಮಾಡಲು ವಿದ್ಯಾರ್ಥಿಗಳು ತಪಸ್ಸಿನ ರೀತಿಯಲ್ಲಿ ಶ್ರಮಪಡುವುದು ಅನಿವಾರ್ಯಎಂದರು.
ಪ್ರಾಧ್ಯಾಪಕರಾದ ಪ್ರೋ.ಕಿರಣ್‍ಕುಮಾರ್‍ಜಿ.ಕೆ.,ಡಾ. ರವಿಕುಮಾರ್, ರಕ್ಷಿತಾಟಿ.ಎಂ., ವೈಷ್ಣವಿ, ನಿಧಿ ಜಂಬಿಗಿ ಮಾತನಾಡಿದರು.