ದಾವಣಗೆರೆ (Davanagere) : ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್. ಸಿ, ಸುಯೇಜ್ ಪ್ರೋ.ಪ್ರೈಲಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಹನುಮಂತಪುರದಲ್ಲಿ ಆಚರಿಸಲಾಯಿತು.
ಸುಯೇಜ್ ಪ್ರೋ.ಪ್ರೈಲಿ ಹಿರಿಯ ವ್ಯವಸ್ಥಾಪಕ ವಿಷ್ಣು ಭಟ್ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಮಹಾನ್ ಚೇತನಗಳ ತ್ಯಾಗ ಹಾಗೂ ಬಲಿದಾನದಿಂದ ದೊರಕಿದೆ. ಗಣರಾಜ್ಯೋತ್ಸವದ ಸುದಿನವಾದ ಇಂದು ನಾವೆಲ್ಲರೂ ಸಹೋದರ ಭಾವದಿಂದ ಐಕ್ಯತೆಯಿಂದ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿಬೇಕಿದೆ ಎಂದು ಸಲಹೆ ನೀಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬ ಮಾತಿನಿಂತೆ ಶಾಲಾ ವಿಧ್ಯಾರ್ಥಿಗಳೊಡನೆ ಗಣರಾಜ್ಯೋತ್ಸವದ ಕಾರ್ಯಕ್ರಮ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಸುಯೇಜ್ ಪ್ರೋ.ಪ್ರೈಲಿ ಸೋಮಶೇಖರ್ ಮಾತನಾಡಿ, ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆಯ ಮಹತ್ವವನ್ನು ವಿವರಿಸಿ ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಸುಜಾತ ಕೆ.ವಿ ಹಾಗೂ ಸಹ ಶಿಕ್ಷಕಿ ಸುಚಿತ್ರಾ .ಟಿ, ಸುಯೇಜ್ ಪ್ರೋ.ಪ್ರೈಲಿ ಸಂಸ್ಥೆಯ ವಿಧ್ಯಾಧರ, ಕಿರಣ್, ರಾಜೇಶ್ ಅವಿಲಾಲ, ರೇಖಾ ಎಸ್, ಸಂದೀಪ್ ನಾಯಕ್, ವೆಂಕಟೇಶ್, ಉಮಾಮಹೇಶ್ವರ ಹಾಗೂ ಸೃಷ್ಟಿ, ಸುಯೆಜ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿ.ಕೆ.ಎನ್. ಮೂರ್ತಿ, ಸುಯೆಜ್ ಉದ್ಯೋಗಿಗಳು ಸಿ.ಎಸ್.ಆರ್ ನ ಸ್ವಯಂ ಸೇವೆಯ ಭಾಗವಾಗಿ ಶಾಲೆಯ ಮಕ್ಕಳಿಗೆ ಸಿಹಿ ಹಾಗು ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು.
Read also : Davanagere | ಸಂಸದರಿಂದ ವಾಚನಾಲಯ ಉದ್ಘಾಟನೆ