ದಾವಣಗೆರೆ : ಸ್ವಚ್ಛ ಭಾರತ ಅಭಿಯಾನ 2.0 ಯೋಜನೆಯಡಿ ಮಹಾನಗರ ಪಾಲಿಕೆಯ ಹಾಗೂ ವಾಹಿನಿ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಘನ ತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಹಾಗೂ ಇನ್ನಿತರ ವಿಷಯಗಳ ಕುರಿತಾಗಿ ಶಾಲಾ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಯನ್ನು ನಗರದ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾ ವಿದ್ಯಾಲಯದ ಥೀಮ್ ಗ್ಯಾಲರಿಯಲ್ಲಿ ನಡೆಯಿತು.
ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ಸತೀಶ್ ವಲ್ಯಾಪುರ , ಮಹಾನಗರ ಪಾಲಿಕೆ ಹಾಗೂ ವಾಹಿನಿ ಸಂಸ್ಥೆಯು ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿರುವುದು ಉತ್ತಮ ಕಾರ್ಯ ಹಾಗೂ ವಿದ್ಯಾರ್ಥಿಗಳು ತಮ್ಮ ಚಿತ್ರ ಕಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ವಿಷಯ ವಸ್ತುವಿಗೆ ಸಂಬಂಧಿಸಿದಂತೆ ಸೃಜನಶೀಲ ಚಿತ್ರಗಳನ್ನು ಪ್ರಸ್ತುತಪಡಿಸುವುದರಲ್ಲಿ ಸಂಶಯವಿಲ್ಲ ಎಂದರು.
ತಾವೂ ಹಾಗೂ ಆಯ್ದ ವಿದ್ಯಾರ್ಥಿಗಳು ಸೇರಿ ಸಾಂಕೇತಿಕವಾಗಿ ಚಿತ್ರಗಳನ್ನು ಬಿಡಿಸುವ ಮೂಲಕ ಚಿತ್ರಕಲಾ ಸ್ಪರ್ಧೆಗೆ ಶುಭ ಕೋರಿದರು..
ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಮಾತನಾಡಿ, ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ವಚ್ಚ ಭಾರತ ಆಭಿಯಾನ ಯೋಜನೆಯಲ್ಲಿ ಪ್ರಮುಖವಾಗಿರುವ ಹಲವಾರು ವಿಷಯಗಳ ಕುರಿತು ಚಿತ್ರಗಳನ್ನು ರಚಿಸಿಬೇಕೆಂದರು.
Read also : ಅಭರಣ ದರೋಡೆ ಪ್ರಕರಣ:ಪಿಎಸೈ ಸೇವೆಯಿಂದ ವಜಾ
ವಾಹಿನಿ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ್ , ದೃಶ್ಯ ಕಲಾ ಮಹಾ ವಿದ್ಯಾಲಯದ ಉಪನ್ಯಾಸಕ ಸುರೇಶ್ ಹಾಗೂ ಗಿರೀಶ್ ಕಾರ್ಯ ನಿರ್ವಹಿಸಿದರು.
ನಗರದ ವಿವಿಧ ಶಾಲೆಗಳಾದ ಸಿದ್ಧೇಶ್ವರ, ಸೋಮೇಶ್ವರ, ಎಸ್.ಆರ್.ಪಿ, ಸಿದ್ದಗಂಗಾ, ಅಥಣಿ, ತರಳಬಾಳು (ಸಿ.ಬಿ.ಎಸ್ ಸಿ ಹಾಗೂ ಸ್ಟೇಟ್) ಹಾಗೂ ಮಾಗನೂರು ಬಸಪ್ಪ ( ಸಿ.ಬಿ.ಎಸ್ ಸಿ ಹಾಗೂ ಸ್ಟೇಟ್) ಪ್ರೌಢಶಾಲೆಗಳಿಂದ 60 ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕ ವೃಂದವರು ಜೊತೆಗೆ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾ ವಿದ್ಯಾಲಯದ ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.. ಮಂಜುನಾಥ್ ಎ.ಕಾರ್ಯಕ್ರಮ ನಿರೂಪಿಸಿಸಿದರು.
