Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜಾತಿ, ಧರ್ಮ ಮೀರಿ ಬೆಳೆಯಬೇಕಾದರೆ ಉನ್ನತ ಹುದ್ದೆ ಗಳಿಸಬೇಕು : ಜಿ. ಬಿ. ವಿನಯ್ ಕುಮಾರ್
ತಾಜಾ ಸುದ್ದಿ

ಜಾತಿ, ಧರ್ಮ ಮೀರಿ ಬೆಳೆಯಬೇಕಾದರೆ ಉನ್ನತ ಹುದ್ದೆ ಗಳಿಸಬೇಕು : ಜಿ. ಬಿ. ವಿನಯ್ ಕುಮಾರ್

Dinamaana Kannada News
Last updated: September 1, 2025 1:42 pm
Dinamaana Kannada News
Share
Davanagere
SHARE

ದಾವಣಗೆರೆ: ಒಳ್ಳೆಯ ಸ್ಥಾನ ಮಾನ ಬಯಸಿ ಬರುತ್ತೇವೆಂದರೆ ತಡೆಯಲು ಸಾವಿರಾರು ಪಡೆಗಳು ಇರುವ ದುಷ್ಟ ಸಮಾಜ. ದುಷ್ಟ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಧರ್ಮ ಮೀರಿ ಬೆಳೆಯಬೇಕಾದರೆ ಐಎಎಸ್, ಐಪಿಎಸ್ ನಂಥ ಉನ್ನತ ಹುದ್ದೆಗೆ ಹೋಗುವುದೇ ನಮಗಿರುವ ಮಾರ್ಗ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ಜಗಳೂರಿನ ಹೆಚ್.ಸಿ.ಬಿ. ಕಾಲೇಜು ಸಭಾಂಗಣದಲ್ಲಿ ದಾವಣಗೆರೆ ವಿವಿ, ಜಗಳೂರು ತಾಲೂಕು ನಾಯಕರ ಸಂಘ, ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾ., ಪ.ಪಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನ್ಯಾಕ್, ಐ.ಕ್ಯೂ.ಎ.ಸಿ, ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್ ಮತ್ತು ಎಲ್ಲಾ ಕೋಶಗಳ ಸಹಯೋಗದೊಂದಿಗೆ ಅಕ್ಷರ ಮಾಲೆ ಸರಣಿ ಕಾರ್ಯಕ್ರಮ- 6 ಪ್ರಯುಕ್ತ ಏರ್ಪಡಿಸಲಾಗಿದ್ದ ನೀವು ಯುಪಿಎಸ್ ಸಿ, ಐಎಎಸ್ ಗೆ ಏಕೆ ತಯಾರಿ ನಡೆಸಬೇಕು ಮತ್ತು ಅದನ್ನು ಹೇಗೆ ಪಾಸ್ ಮಾಡುವುದು” ಎಂಬ ಕುರಿತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ದೇಶಕ್ಕೆ ಟಿನಾ ಡಾಗಿ ಎಂಬ ದಲಿತ ಸಮುದಾಯಕ್ಕೆ ಸೇರಿದ ಯುವತಿ 2017ರಲ್ಲಿ ಮೊದಲ ಸ್ಥಾನ ಪಡೆದಿದ್ದರು. 10 ಲಕ್ಷ ಅಭ್ಯರ್ಥಿಗಳಿಂತ ಹೆಚ್ಚು ಅಂಕ ಪಡೆದು ದೇಶದ ಗಮನ ಸೆಳೆದಿದ್ದಲ್ಲದೇ ಆಮೇಲೆ ಸಮಸ್ಯೆಗಳನ್ನು ಎದುರಿಸಿ ಉನ್ನತ ಹುದ್ದೆಗೆ ಏರಿದರು. ಇಂದಿಗೂ ತಳ ಸಮುದಾಯದವರಿಗೆ ಮಾದರಿ ಎಂದರೆ ಉತ್ಪ್ರೇಕ್ಷೆಯಾಗದು.  ನಿಮ್ಮ ಹಸಿವು ಜ್ಞಾನದ ಕಡೆಗೆ ಇರಲಿ. ಹಳ್ಳಿ ಮಕ್ಕಳು, ಶೋಷಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಆಗಬೇಕು. ಈ ನಿಟ್ಟಿನಲ್ಲಿ ದೊಡ್ಡದಾದ ಮಹತ್ವಾಕಾಂಕ್ಷೆ ಹೊಂದುವಂತೆ ಸಲಹೆ ನೀಡಿದರು.

ಯುಪಿಎಸ್ ಸಿಯಲ್ಲಿ ನೂರರ ಟಾಪ್ ಸ್ಥಾನಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳು ಬರುವುದು ತುಂಬಾನೇ ಕಡಿಮೆ. ಇದಕ್ಕೆ ಕಾರಣ ಉತ್ಕೃಷ್ಟ ಮತ್ತು ಗುಣಮಟ್ಟದ ಶಿಕ್ಷಣ ಸಿಗದಿರುವುದೇ ಕಾರಣ. ಇಂಥ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ನಮಗೆ ಯಾವ ರೀತಿ ಶಿಕ್ಷಣ ಸಿಗುತ್ತದೆ ಎಂಬ ಆಧಾರದ ಮೇಲೆ ಮುಂದಿನ ಭವಿಷ್ಯ ಅಡಗಿರುತ್ತದೆ. ದೇಶದಲ್ಲಿ ಇಂದಿಗೂ ಅಸಮಾನತೆ ರುದ್ರತಾಂಡವವಾಡುತ್ತಿದೆ. ಹಳ್ಳಿಗಳಲ್ಲಿ ಎಸ್ಸಿ, ಎಸ್ಟಿ, ದಲಿತ ಕಾಲೋನಿಗಳಲ್ಲಿ ಏನು ವಾಸ್ತವವಿದೆ ಎಂಬುದನ್ನು ಅರಿಯದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಇದು ದುರಂತದ ವಿಚಾರ ಎಂದು ತಿಳಿಸಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ದ್ವೇಷ, ಅಸೂಯೆ ಪ್ರವೃತ್ತಿ ಹೆಚ್ಚಾಗಿದೆ. ಇದು ತೊಲಗಬೇಕಾದರೆ ಐಎಎಸ್, ಕೆಎಎಸ್ ನಂಥ ಹುದ್ದೆಗೇರಬೇಕು. ಆಗ ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ಪದವಿ ಓದಿದವರು ಡ್ರೈವರ್, ಗಾರೆ, ಪೇಟಿಂಗ್, ಕೃಷಿ, ಸಣ್ಣ ಸಣ್ಣ ಕಂಪೆನಿಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಅಷ್ಟು ಸಂಬಳ ತೆಗೆದುಕೊಂಡು ಕೆಲಸ ಮಾಡಿಕೊಂಡಿದ್ದರೆ ಸಮಾಜ ಹಾಗೂ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯವಾಗದು. ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಾಗದು. ನೀವು ಮಹತ್ವಾಕಾಂಕ್ಷಿಗಳಾಗಬೇಕು. ಇಂದಿನಿಂದಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ. ದೊಡ್ಡ ದೊಡ್ಡ ಕನಸು ಕಾಣುವ ಜೊತೆಗೆ ಸಾಧಿಸಲು ಸಜ್ಜಾಗಿ ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡ ಹಾಕಿದರೂ ಯುಪಿಎಸ್ ಸಿಯಲ್ಲಿ ಆಯ್ಕೆ ಮಾಡಲಾಗದು. ಭ್ರಷ್ಟಾಚಾರ, ರಾಜಕೀಯ ಒತ್ತಡ ಇಲ್ಲದೇ ದೇಶದಲ್ಲಿ ನಡೆಯುವ ಪರೀಕ್ಷೆ ಯುಪಿಎಸ್ ಸಿ. ಪ್ರಧಾನಿಗಳೇ ಕರೆ ಮಾಡಿ ಯುಪಿಎಸ್ ಯಲ್ಲಿ ಮೆರಿಟ್ ಮೇಲೆ ಉತೀರ್ಣರನ್ನಾಗಿ ಮಾಡಿ ಎಂದರೂ ಆಗದು. ಅಷ್ಟು ಪಾರದರ್ಶಕವಾಗಿ ಈ ಪರೀಕ್ಷೆ ನಡೆಯುತ್ತದೆ. ಯುಪಿಎಸ್ ಸಿಯಲ್ಲಿ ಯಶ ಸಾಧಿಸಬೇಕಾದರೆ ಜ್ಞಾನ, ಸತತ ಕಠಿಣ ಪರಿಶ್ರಮ, ಓದು, ಅಗಾಧವಾದ ಪಾಂಡಿತ್ಯ ಬೇಕು ಎಂದು ತಿಳಿಸಿದರು.

Read also : ನನ್ನ ಊರಿನ ಋಣ ನನ್ನ ಮೇಲೆ ಸದಾ ಇರುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೆರಿಟ್ ಮೂಲಕವೇ ಆಯ್ಕೆ ಮಾಡಲು ಭಾರತ ದೇಶದಲ್ಲಿ ಗಟ್ಟಿಯಾಗಿ ನಿಂತಿರುವುದು ಯುಪಿಎಸ್ ಸಿ ಮಾತ್ರ. ಈ ಪರೀಕ್ಷೆ ಯಾವಾಗ ನಡೆಯುತ್ತದೆ ಎಂಬುದನ್ನು ಒಂದು ವರ್ಷ ಮುಂಚಿತವಾಗಿ ಇರುತ್ತದೆ. ಏನೇ ಆದರೂ ನಿಗದಿತ ವೇಳೆಯಲ್ಲೇ ಪರೀಕ್ಷ ನಡೆದೇ ನಡೆಯುತ್ತದೆ. ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಕೋವಿಡ್ ಸೋಂಕು ಹೆಚ್ಚಾದಾಗ ಮಾತ್ರ 2 ತಿಂಗಳು ಮುಂದೂಡಲಾಗಿತ್ತು. ಇನ್ನುಳಿದಂತೆ ಯಾವಾಗಲೂ ತಪ್ಪಿಲ್ಲ. ಪರೀಕ್ಷೆ, ಮೇನ್ಸ್, ಇಂಟರ್ ವ್ಯೂನಲ್ಲಿ ಹೆಚ್ಚು ಅಂಕ ಪಡೆಯಬೇಕು. ನಿರರ್ಗಳವಾಗಿ, ಭಯವಿಲ್ಲದೇ ಗೊತ್ತಿರುವ ವಿಚಾರ ಸುಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಕಡಿಮೆ ಪದಗಳು ಮತ್ತು ಕಡಿಮೆ ಅವಧಿಯಲ್ಲಿ ಹೇಳಬೇಕು. 30ರಿಂದ 40 ಸೆಕೆಂಡ್ ಗಳಲ್ಲಿ ಸಂದರ್ಶನದ ವೇಳೆ ಕೇಳುವ ಪ್ರಶ್ನೆಗೆ ಉತ್ತರಿಸಬೇಕು. ಅಷ್ಟು ಸುಲಭವಲ್ಲ ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು. ಇದಕ್ಕೆ ಸಾಕಷ್ಟು ತಾಲೀಮು ಬೇಕೇ ಬೇಕು ಎಂದು ವಿವರಿಸಿದರು.

ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಇನ್ನು ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯ ಈಡೇರಿಲ್ಲ. ಕೇಂದ್ರ ನಾಗರಿಕ ಸೇವಾ ಹುದ್ದೆಗೆ ಬರಬೇಕಾದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಇದನ್ನು ಸಾಧಿಸಿದವರು ಸೆಲಬ್ರಿಟಿ ಆಗ್ತಾರೆ. ಸಮಾಜದ ಪರಿವರ್ತನೆ ತರಬಲ್ಲ ಶಕ್ತಿಯುಳ್ಳ ಶಕ್ತಿವಂತರಾಗುತ್ತಾರೆ. ತಂದೆ ತಾಯಿಗೂ ಗೌರವ ಸಿಗುತ್ತದೆ. ಸಮಾಜದಲ್ಲಿಯೂ ಸುಧಾರಣೆ ಆಗುತ್ತದೆ. ತನ್ನ ಸಮಾಜದ ಉನ್ನತೀಕರಣ, ಅಭಿವೃದ್ಧಿಗೆ ಕಾರ್ಯರೂಪ ರೂಪಿಸಬಹುದು. ಸಮಾಜದಲ್ಲಿ ತಳ ಸಮುದಾಯಗಳೆಂದು ಕರೆಸಿಕೊಳ್ಳುವವರು ಹೆಚ್ಚಾಗಿ ಇಂಥ ಹುದ್ದೆಗೆ ಬರುವಂತಾಗಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು, ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಆಗಿ ಹೋಗಬೇಕು. ಆಗ ದೆಹಲಿ ಮಟ್ಟದಲ್ಲಿ ಕುಳಿತು ಇಲ್ಲಿನ ಅಭಿವೃದ್ಧಿಗೆ ಸಹಕಾರ ನೀಡಬಹುದು. ಕರ್ನಾಟಕಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳನ್ನು ತೆಗೆದುಕೊಂಡು ಬರಬೇಕಾದರೆ ನಮ್ಮವರೇ ಐಎಎಸ್, ಐಪಿಎಸ್ ಇರಬೇಕಾಗುತ್ತದೆ. ಆದ್ರೆ ವಿಪರ್ಯಾಸದ ಸಂಗತಿ ಎಂದರೆ ಸಂಖ್ಯೆ ಗಣನೀಯವಾಗಿ ಭಾರೀ ಕಡಿಮೆಯಿದೆ. ನಮ್ಮದು ಸುಂದರ ಕನ್ನಡ ಭಾಷೆ. ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಕರ್ನಾಟಕದವರು ಬೇರೆ ರಾಜ್ಯದ ಜಿಲ್ಲಾಧಿಕಾರಿ, ಎಸ್ಪಿಯಂಥ ಅಧಿಕಾರಿಗಳಾದರೆ ಕನ್ನಡದ ಪರ ಒಲವು ಅಲ್ಲಿಯೂ ಮೂಡಿಸಬಹುದು. ಕನ್ನಡ ಭಾಷೆ ಬೆಳವಣಿಗೆ, ಅಭಿವೃದ್ಧಿಗೆ ಐಎಎಸ್ ಅಧಿಕಾರಿಗಳಾದರೆ ಸುಲಭವಾಗುತ್ತದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಹೆಚ್ಚಾಗಿ ಪೋಷಕರು ಮಕ್ಕಳನ್ನು ಇಂಗ್ಲೀಷ್ ಭಾಷಾ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇನ್ನು 30 ವರ್ಷ ಕಳೆದರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಕನ್ನಡ ಭಾಷಾ ಮಾಧ್ಯಮದಲ್ಲಿ ಓದುವವರು ಸಿಗುವುದು ಕಡಿಮೆ. ಆಗ ಕನ್ನಡಕ್ಕೆ ಯಾವ ಮಾನ್ಯತೆ ಸಿಗುತ್ತದೆ ಎಂಬುದನ್ನು ಊಹಿಸಿಕೊಂಡರೆ ಆತಂಕಕಾರಿಯಾಗಿದೆ. ಕನ್ನಡ ಉಳಿದಿರುವುದು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಂದ ಮಾತ್ರ. ಕನ್ನಡ ಬೆಳೆಸುವ ಕೆಲಸ ಮಾಡುತ್ತಿಲ್ಲ. ಕನ್ನಡ ಪ್ರೀತಿಸುವ, ಮನಸುಗಳು ಆಡಳಿತದಲ್ಲಿ ಬರಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.

ಜಗಳೂರು ಶಾಸಕ ಚಿಕ್ಕಮ್ಮನಹಟ್ಟ ಬಿ. ದೇವೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲರು ಮತ್ತು ಕಾರ್ಯಕ್ರಮದ ಸಂಚಾಲಕ ಎಂ. ಒ. ಮಧು, ಅಕ್ಷರ ಮಾಲ ಸರಣಿ ನಿರ್ದೇಶಕ ಪ್ರಸನ್ನ ಕುಮಾರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಡಿ. ಓ. ಸುರೇಶ್ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್: ಜಿಬಿವಿ

ಯುಪಿಎಸ್ ಸಿ ಪರೀಕ್ಷೆಗೆ ಸರಿಯಾದ ಮಾರ್ಗದರ್ಶನ ನಮ್ಮಲ್ಲಿ ಇದೆ. ಸುಮಾರು ಐಎಎಸ್, ಐಪಿಎಸ್, ಐಆರ್ ಎಸ್ ಅಧಿಕಾರಿಗಳನ್ನು ಕೊಟ್ಟಿದ್ದೇವೆ. ಇಂದಿಗೂ ನಾನು ಹೋಗಿ ಮಾರ್ಗದರ್ಶನ ನೀಡುತ್ತೇನೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದೇವೆ ಎಂಬ ಕೊರಗು ಬಿಡಿ. ಎರಡು ವರ್ಷ ಈ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ತಯಾರಿದ್ದೇವೆ. ನಾನು ಇನ್ ಸೈಟ್ಸ್ ಸಂಸ್ಥೆಯಿಂದ ಮಾರ್ಕೆಟಿಂಗ್ ಮಾಡಲು ಇಲ್ಲಿಗೆ ಬಂದಿಲ್ಲ, ನಮ್ಮಲ್ಲಿ ಮಾರ್ಗದರ್ಶನ ಪಡೆದರೆ ನಿಮಗೆ ಸರ್ಕಾರಿ ನೌಕರಿ ಸಿಗುವುದು ಖಚಿತ. ಸವಾಲು ಸ್ವೀಕರಿಸಿ, ಉನ್ನತ ಹುದ್ದೆಗೆ ಏರುವ ಕನಸು ಕಾಣಲು ಶ್ರಮ ಹಾಕಿ. ಖಂಡಿತ ಸಾಧ್ಯವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Chief Minister Siddaramaiah ನನ್ನ ಊರಿನ ಋಣ ನನ್ನ ಮೇಲೆ ಸದಾ ಇರುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
Next Article Davanagere ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗಳ ನೇಮಕಾತಿ, ಶಿಕ್ಷಣದಲ್ಲಿ ಹೆಚ್ಚಿನ ಮೀಸಲಾತಿ ಅಗತ್ಯ; ಕೆ.ಎಸ್.ಬಸವಂತಪ್ಪ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

“ಸಂಕಲ್ಪ” ಉಚಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ: ಸಂಸದೆ ಡಾ.ಪ್ರಭಾ ಭೇಟಿ

ದಾವಣಗೆರೆ ;  ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ  ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಐಎಎಸ್ ಬಾಬಾ ಸಂಸ್ಥೆಯ ಸಹಭಾಗಿತ್ವದಲ್ಲಿ ಭಾನುವಾರ ಬೆಳಗ್ಗೆ …

By Dinamaana Kannada News

Davanagere | ಮಾಜಿ ದೇವದಾಸಿ ಮಹಿಳೆಯರಿಂದ ಪುನರ್ ವಸತಿ ಯೋಜನೆಗೆ ಅರ್ಜಿ ಆಹ್ವಾನ

ದಾವಣಗೆರೆ (Davanagere): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ದೇವದಾಸಿ ಪುನರ್ ವಸತಿ ಯೋಜನೆಯಡಿ ನಿವೇಶನ ಹೊಂದಿದ ಅರ್ಹ ಮಾಜಿ…

By Dinamaana Kannada News

Davanagere news | ಉತ್ತಮ ಆರೋಗ್ಯ ಸೇವೆ ಒದಗಿಸುವುದು ಶಿಬಿರದ ಉದ್ದೇಶ : ಸುಬ್ರಹ್ಮಣ್ಯ ಶ್ರೇಷ್ಠಿ

ಹರಿಹರ (Davanagere) :  ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವುದು  ಶಿಬಿರದ ಉದ್ದೇಶವಾಗಿದೆ ಎಂದು ಹರಿಹರ ನಗರ ಸಭೆಯ ಪೌರಾಯುಕ್ತ ಪಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?