ದಾವಣಗೆರೆ : ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ಅಖಿಯಾಜ್, ಸೈಯ್ಯದ್ ಶಪೀವುಲ್ಲಾ ಬಂಧಿತರು.
ಶಿಕಾರಿಪುರ ಕಡೆಯಿಂದ ಸವಳಂಗ ಗ್ರಾಮದ ಮೂಲಕ ಗಾಂಜಾ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಹಿನ್ನಲೆ ಎಸ್ಪಿ ಉಮಾ ಪ್ರಶಾಂತ, ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಯ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿಎಸ್‌ಐ ಸಾಗರ್ ಅತ್ತಾರ್ ವಾಲಾ ಸಿಬ್ಬಂದಿಗಳು ಹಾಗೂ ನ್ಯಾಮತಿ ಪೊಲೀಸ್ ಠಾಣೆಗೆ ಪೊಲೀಸ್ ನಿರೀಕ್ಷಕ ಎನ್ ಎಸ್ ರವಿ ಮತ್ತು ಪಿಎಸ್‌ಐ ಹೊಳಬಸಪ್ಪ ಹೊಳಿ ಮತ್ತು ಸಿಬ್ಬಂದಿ ತಂಡವು ಮಾಚಗೊಂಡನಹಳ್ಳಿ ಗ್ರಾಮದ ಬಳಿ ಶಿಕಾರಿಪುರದ ಕಡೆಯಿಂದ ಸವಳಂಗ ಗ್ರಾಮದ ಕಡೆಗೆ ಬರುತ್ತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಇಬ್ಬರನ್ನು ವಿಚಾರಿಸಿ ಪರಿಶೀಲಿಸಿದಾಗ ಗಾಂಜಾ ಸೊಪ್ಪು ಪತ್ತೆಯಾಗಿದೆ.
Read also : ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಿ:ಅಧಿಕಾರಿಗಳಿಗೆ ಡಿಸಿ ಸೂಚನೆ
ಆರೋಪಿತರಿಂದ ಆಂದಾಜು 1,10,000/- ರೂ ಮೌಲ್ಯದ 1 ಕೆಜಿ 160 ಗ್ರಾಂ ತೂಕ ಇರುವ ಗಾಂಜಾ ಸೊಪ್ಪನ್ನು, ಒಂದು ಹಿರೋ ಹೊಂಡ ಸೆಪ್ಲಂಡರ್ ಪ್ಲಸ್ ಬೈಕ್ , ಒಂದು ಮೊಬೈಲ್ ಪೋನ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ನ್ಯಾಮತಿ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್, ಪಿಎಸ್‌ಐ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಸಾಗರ್ ಅತ್ತಾರ್ ವಾಲಾ ಮತ್ತು ನ್ಯಾಮತಿ ಠಾಣೆಯ ಪಿಎಸ್‌ಐ ಹೊಳಬಸಪ್ಪ ಹೊಳಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರಾದ ಗೋವಿಂದರಾಜು, ಮಂಜಪ್ಪ, ಷಣ್ಮಖ, ಶಿವರಾಜ್, ನ್ಯಾಮತಿ ಠಾಣೆಯ ಸಿಬ್ಬಂದಿಯವರಾದ ಮಂಜಪ್ಪ, ನಾಗರಾಜನಾಯ್ಕ, ಶಿವರಾಜ್, ಪ್ರವೀಣ್ ಕುಮಾರ, ಮತ್ತು ಚನ್ನೇಶ ರವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
