ದಾವಣಗೆರೆ : ದಾವಣಗೆರೆಯ ಕುಂದವಾಡ ಕೆರೆಯಲ್ಲಿ ಇಬ್ಬರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಶಾಂತಿನಗರದ ಚೇತನ್(22), ಮನು(23) ಮೃತ ದುರ್ಧೈವಿಗಳು.
Read also : ಎಪಿಎಂಸಿ ಅಧಿಕಾರಿ ಮನೆ,ಕಚೇರಿ ಮೇಲೆ ಲೋಕಾ ದಾಳಿ
ಕಳೆದ ಎರಡು ದಿನದಿಂದ ಯುವಕರು ನಾಪತ್ತೆಯಾಗಿದ್ದರು. ವಿವಿಧಡೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಅದರೆ, ಮಂಗಳವಾರ ಕುಂದವಾಡ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರಾ ಎನ್ನುವ ಅನುಮಾನ ವ್ಯಕ್ತವಾಗಿದ್ದು. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
