Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಉಚ್ಚಂಗಿದುರ್ಗ|ಭಕ್ತಿಯಲ್ಲಿ ಮಿಂದೆದ್ದ ಉಚ್ಚೆಂಗೆಮ್ಮ ಭಕ್ತರು : ದಂಡು ನಿಯಂತ್ರಿಸಲು ಪೊಲೀಸರ ಹರಸಾಹಸ
ತಾಜಾ ಸುದ್ದಿ

ಉಚ್ಚಂಗಿದುರ್ಗ|ಭಕ್ತಿಯಲ್ಲಿ ಮಿಂದೆದ್ದ ಉಚ್ಚೆಂಗೆಮ್ಮ ಭಕ್ತರು : ದಂಡು ನಿಯಂತ್ರಿಸಲು ಪೊಲೀಸರ ಹರಸಾಹಸ

Dinamaana Kannada News
Last updated: February 1, 2026 4:30 pm
Dinamaana Kannada News
Share
Davanagere
SHARE
ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ಪುಣ್ಯ ಕ್ಷೇತ್ರಕ್ಕೆ ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡಿದ್ದರು.
ಸುಮಾರು 600 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ನೆಲಸಿರುವ ಉಚ್ಚೆಂಗೆಮ್ಮ ದೇವಿಗೆ ಹರಿಹರ ಬಾಗಿಲು, ಪಾದಗಟ್ಟೆ ದ್ವಾರ, ತೋಪಿನ ದುರ್ಗಮವಾದ ಬೆಟ್ಟದ ಕಿರಿದಾದ ದಾರಿಯಲ್ಲಿ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಭಕ್ತರು ದರ್ಶನಕ್ಕೆ ಬಂದಿದ್ದರು.
ಹುಣ್ಣಿಮೆಗಳಲ್ಲಿಯೇ ಭರತ ಹುಣ್ಣಿಮೆಯು ಉಚ್ಚೆಂಗೆಮ್ಮ ದೇವಿ ಭಕ್ತರಿಗೆ ಪವಿತ್ರ ಹಾಗೂ ವಿಶಿಷ್ಟವಾಗಿದೆ. ಹಾಗಾಗಿ ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಬಂದಿದ್ದರು.
ಮಾಧ್ಯಹ್ನ ವೇಳೆಗೆ ಬಿಸಿಲ ಪ್ರಖರತೆ ಬೆವರಿದ ಭಕ್ತರು ಬೆಟ್ಟದ ಬಂಡೆ, ಕಲ್ಲು, ಕೋಟೆ, ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂತು.  ದೇವಿಯ ನೈವೇದ್ಯಕ್ಕೆ  ರೊಟ್ಟಿ, ಬದನೆಕಾಯಿ ಪಲ್ಯೆ, ಮೊಸರು ಬುತ್ತಿ, ಹಣ್ಣು, ಹೂ, ಕಾಯಿ, ಕರ್ಪೂರಗಳಿಂದ ಪೂಜೆಯನ್ನು ನೆರೆವೇರಿಸಿ ಭಕ್ತಿ ಸಮರ್ಪಿಸಿದರು.
ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ನೆಲೆಸಿರುವ ಉಚ್ಚಂಗೆಮ್ಮ ದೇವಿಗೆ ಕುಂಕುಮಾರ್ಚನೆ, ಎಲೆ ಪೂಜೆ, ಹೊಳೆ ಪೂಜೆ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಮುತ್ತೈದೆ ಹುಣ್ಣಿಮೆ: ಪುನರ್ವಸತಿ ಕಲ್ಪಿತ ದೇವದಾಸಿಯರು, ಜೋಗಪ್ಪ, ಜೋಗತಿ ಯರಿಗೆ ಇದು ಮುತ್ತೈದೆ ಹುಣ್ಣಿಮೆ ಎಂದೇ ಹೇಳಲಾಗುತ್ತದೆ. ದೇವರು ಹೊತ್ತವರು ಗುಡ್ಡದಲ್ಲಿರುವ ಆನೆಹೊಂಡದಲ್ಲಿ ಸ್ನಾನ ಮಾಡಿ ತಮ್ಮಲ್ಲಿರುವ ಹಳೆ ಪಡ್ಲಿಗೆಗಳನ್ನು ಅಲ್ಲಿ ಬಿಟ್ಟು ಹೊಸ ಪಡ್ಲಿಗೆ ಯನ್ನು ತಲೆಯ ಮೇಲೆ ಹೊತ್ತು ದೇವಿಯ ದರ್ಶನ ಪಡೆಯುತ್ತಾರೆ.
ಕಳೆದ ಬನದ ಹುಣ್ಣಿಮೆಯಂದು ಬಳೆಗಳನ್ನು ತೆಗೆದ ಇವರು, ಈ ಹುಣ್ಣಿಮೆಯಂದು ಹೊಸ ಬಳೆ  ತೊಟ್ಟು ಮುತ್ತೈದೆಯಾಗಿ ರೂಪುಗೊಳ್ಳುವ ಪ್ರತೀತಿ ಇದೆ. ಹಾಗಾಗಿ ಭರತ ಹುಣ್ಣಿಮೆಯನ್ನು ಮುತ್ತೈದೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ.
ಕಾಣದ ಶೌಚಾಲಯ: ಭರತ ಹುಣ್ಣೆಮೆಗೆ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ತಿಂಗಳ ಹಿಂದಿಯೇ  ಜಿಲ್ಲಾಧಿಕಾರಿಗಳು ಮೂಲ ಸೌಕರ್ಯ ಒದಗಿಸಲು ಸೂಚಿಸಿದ್ದರು.
ಆದರೆ, ಪುರಾತತ್ವ ಇಲಾಖೆ ಸ್ಪಂದನೆ ಸಿಗದ ಹಿನ್ನಲೆ ಎಲ್ಲಿಯೂ ಶೌಚಾಲಯ ನಿರ್ಮಿಸಲಾಗಿರಲಿಲ್ಲ. ಇದರಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಮಹಿಳಾ ಭಕ್ತರು ಸಂಕಷ್ಟ ಎದುರಿಸಿದರು. ವಿಧಿ ಇಲ್ಲದೆ ಕೋಟೆ, ಗಿಡ ಗಂಟೆಗಳ ಮೊರೆ ಹೋಗಬೇಕಾಯಿತು.
‘ಅಸಂಖ್ಯಾತ ಭಕ್ತರು ಬಂದಿದ್ದಾರೆ. ಕನಿಷ್ಟ ಶೌಚಾಲಯ ಇಲ್ಲ. ಸ್ನಾನ ಗೃಹ ಇಲ್ಲದಿರುವುದು ನೋವಿನ ಸಂಗತಿ. ಜಿಲ್ಲಾಡಳಿತ ಕೂಡಲೇ ಎಚೆತ್ತುಕೊಳ್ಳಬೇಕು ಎಂದು ಚಿತ್ರದುರ್ಗ ಮೂಲದ ತಾಯವ್ವ’  ಟೀಕಿಸಿದರು.
‘ಭರತ ಹುಣ್ಣಿಮೆ ಅಂಗವಾಗಿ ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದರು. ನುಸುಕಿನಲ್ಲೆ ದೇವಿ ದರ್ಶನಕ್ಕೆ ಭಕ್ತರು ತಂಡೋಪತAಡವಾಗಿ ಸಾಲುಗಟ್ಟಿ ನಿಂತಿದ್ದರು. ೧೨ ರ ಸುಮಾರಿಗೆ ಭಕ್ತರ ಪ್ರವಾಹವೆ ಹರಿದು ಬಂತು.
ಪಾದಗಟ್ಟೆ, ಬನ್ನಿ ಮಂಟಪ, ಹರಿಹರ ಬಾಗಿಲು ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಜನರನ್ನು ನಿಂಯAತ್ರಿಸಲು ಪೊಲೀಸರು ಹರ ಸಹಾಸ ಪಟ್ಟರು. ಪರಸ್ಥಿತಿ ಬಿಗಡಾಯಸುತ್ತಿದ್ದಂತೆ ಡಿವೈಎಸ್ಪಿ ಸಂತೋಷ್ ಚೌಹಾಣ್ ಅಖಾಡಕ್ಕೆ ಧುಮ್ಮಿಕ್ಕಿದ್ದರು. ಭಕ್ತರ ಪ್ರತ್ಯೇಕ ಸಾಲುಗಳು ನಿರ್ಮಿಸಿ ನೂಕು ನುಗ್ಗಲು ಏರ್ಪಡದಂತೆ  ಕರ್ತವ್ಯ ನಿರ್ವಹಿಸಿದರು.
ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ, ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಗೆ ಕ್ರಮ ಕೈಗೊಂಡರೂ, ಇಕ್ಕಟ್ಟಾದ ಕಿರುದಾದ ಮುಖ್ಯ ರಸ್ತೆಯಲ್ಲಿ ಎರಡು ಕಿ.ಮೀ ದೂರದವರೆಗೆ ವಾಹನ ನಿಂತಿದ್ದವು.
Read also : ದಾವಣಗೆರೆ : ಶುಲ್ಕ ಮರುಪಾವತಿ ಯೋಜನೆ ಅವಧಿ ವಿಸ್ತರಣೆ
ಹುಣ್ಣಿಮೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ, ಮುಜುರಾಯಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಡ್ರೋನ್, ಸಿಸಿ ಕ್ಯಾಮೆರಾ, ಅನಿಷ್ಟ ಪದ್ದತಿ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು.
ಉಚ್ಚಂಗಿದುರ್ಗದ ಶ್ರೀ ಉಚ್ಚಂಗ್ಯೆಮ್ಮ ದೇವಿಯ ಜಾತ್ರೆಗೆ ‘ದಶಕಗಳಿಂದ ಭರತ ಹುಣ್ಣಿಮೆಗೆ ಬರುತ್ತಿದ್ದು, ಹರಕೆ ತೀರಿಸಿ ಹೋಗುತ್ತೇವೆ’. ಅಲ್ಲಿನ ಆಚಾರ – ವಿಚಾರ ಗಮನ ಸೆಳೆಯುತ್ತದೆ’.   
ಯರೀಸ್ವಾಮಿ, ಭಕ್ತರು ಹರಪನಹಳ್ಳಿ. 
TAGGED:Davanagere Newsdinamaana.comKannada NewsUcchengi Durgaಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article extended ದಾವಣಗೆರೆ : ಶುಲ್ಕ ಮರುಪಾವತಿ ಯೋಜನೆ ಅವಧಿ ವಿಸ್ತರಣೆ
Next Article Davanagere ದಾವಣಗೆರೆ|ಬಾರ್ ಕಳ್ಳತನ ಮಾಡ್ತಿದ್ದ ಗ್ಯಾಂಗ್‌ ಅರೆಸ್ಟ್;3.35 ಲಕ್ಷ ಮೌಲ್ಯದ ಮದ್ಯ, ಆಟೋ ವಶ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ವಿಶ್ವವಿದ್ಯಾನಿಲಯ|ಜಾಗತಿಕ ನಾಗರಿಕತ್ವ ಅನಿವಾರ್ಯ: ಪ್ರೊ.ನಿರಂಜನ

ದಾವಣಗೆರೆ: ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಜಾಗತಿಕ ಅನುಭವ, ಆತ್ಮವಿಶ್ವಾಸ ಮತ್ತು ವಿಶಾಲ ವೃತ್ತಿ ಅವಕಾಶಗಳೊಂದಿಗೆ ಜಾಗತಿಕ ನಾಗರಿಕರಾಗುವಿಕೆ ಅನಿವಾರ್ಯವಾಗಿದೆ ಎಂದು…

By Dinamaana Kannada News

ದಾವಣಗೆರೆ | ಕಟ್ಟಡ ಕಾರ್ಮಿಕರ ಸೌಲಭ್ಯ ವಿಳಂಬ ನೀತಿ ತಪ್ಪಿಸಲು ಸಚಿವರಿಗೆ ಮನವಿ

ದಾವಣಗೆರೆ :   ಕಟ್ಟಡ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಕಾರ್ಮಿಕ ಸಚಿವ ಸಂತೋಷ್…

By Dinamaana Kannada News

ಹಿರಿಯ ನಾಗರಿಕರ ಗಮನಕ್ಕೆ:ಆಸ್ತಿ ರಕ್ಷಣೆ, ಮಾಸಿಕ ಪಿಂಚಣಿ ಮತ್ತು ಉಚಿತ ಕಾನೂನು ನೆರವು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಹಿರಿಯ ನಾಗರಿಕರ (60 ವರ್ಷ ಮೇಲ್ಪಟ್ಟವರ) ಹಿತರಕ್ಷಣೆಗಾಗಿ ಹಲವಾರು ಕಾನೂನುಗಳು ಮತ್ತು ಸರ್ಕಾರಿ ಯೋಜನೆಗಳು ಜಾರಿಯಲ್ಲಿವೆ. ಅವುಗಳ ಬಗ್ಗೆ…

By ನ್ಯಾ.ಮಹಾವೀರ ಮ. ಕರೆಣ್ಣವರ

You Might Also Like

Davanagere
ಅಪರಾಧ ಸುದ್ದಿ

ದಾವಣಗೆರೆ|ಬಾರ್ ಕಳ್ಳತನ ಮಾಡ್ತಿದ್ದ ಗ್ಯಾಂಗ್‌ ಅರೆಸ್ಟ್;3.35 ಲಕ್ಷ ಮೌಲ್ಯದ ಮದ್ಯ, ಆಟೋ ವಶ

By Dinamaana Kannada News
extended
ತಾಜಾ ಸುದ್ದಿ

ದಾವಣಗೆರೆ : ಶುಲ್ಕ ಮರುಪಾವತಿ ಯೋಜನೆ ಅವಧಿ ವಿಸ್ತರಣೆ

By Dinamaana Kannada News
Davanagere
Blog

ಫೆ.2 ರಿಂದ ಚಂದನ ವಾಹಿನಿಯಲ್ಲಿ ಡಾ||ರಾಘವೇಂದ್ರ ಗುರೂಜಿಯವರ ಯೋಗ ಸಂಚಿಕೆಗಳು ಪ್ರಸಾರ

By Dinamaana Kannada News
Davanagere
ಅಪರಾಧ ಸುದ್ದಿ

Crime news|ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?