ದಾವಣಗೆರೆ (Davanagere): ಒಳಮೀಸಲಾತಿಗಾಗಿ ಈಗ ಸಮೀಕ್ಷೆ ನಡೆಯುತ್ತಿದೆ. ವೀರಶೈವ ಜಂಗಮರು ಬೇಡ ಜಂಗಮರ ಹೆಸರಿನಲ್ಲಿ ಒಳಮೀಸಲಾತಿ ಪಡೆಯಲು ನುಸುಳುತ್ತಿದ್ದಾರೆ. ಇದನ್ನು ಸರ್ಕಾರ ತಡೆಯಬೇಕೆಂದು ಒತ್ತಾಯಿಸಿ ಎಸ್‌ಸಿ-ಎಸ್‌ಟಿ ವಕೀಲರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಒಳಮೀಸಲಾತಿ ಸಮೀಕ್ಷೆ ನಡೆಯುತ್ತಿದೆ. ಇದೇ ಸಂದರ್ಭ ಉಪಯೋಗಿಸಿಕೊಂಡ ವೀರಶೈವ ಜಂಗಮರು ನಾವೇ ಬೇಡ ಜಂಗಮರೆAದು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿಕೊಂಡು ಒಳಮೀಸಲಾತಿ ಕಬಳಿಸುವ ಪ್ರಯುತ್ನ ನಡೆಸುತ್ತಿದ್ದಾರೆ. ಇವರು ಸಸ್ಯಹಾರಿಗಳು ಹಾಗೂ ವೀರಶೈವ ಮಠಗಳಿಗೆ ಮಠಾಧೀಶರೂ ಆಗಿದ್ದಾರೆ. ಸರ್ಕಾರ ಕೂಡಲೇ ಇದನ್ನು ತಡೆಯಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇಡ ಜಂಗಮರು ಅಲೆಮಾರಿಗಳು. ಊರೂರು, ನಗರ, ಪಟ್ಟಣಗಳಲ್ಲಿ ರಾಮಾಯಣ, ಮಹಾಭಾರತದ, ಬರ‍್ರಾಕತೆಗಳನ್ನು ಹೇಳುತ್ತಾ ಬಿಕ್ಷೆ ಬೇಡುತ್ತಾ, ಮಾಂಸಕ್ಕಾಗಿ ಬೇಟೆಯಾಡುತ್ತಾ ಜೀವನ ನಡೆಸುತ್ತಾರೆ. ಇವರು ಸಾಮಾನ್ಯವಾಗಿ ರೈಲ್ವೆ ಸ್ಟೇಷನ್ ಪಕ್ಕ, ಊರ ಹೊರಗೆ, ರಸ್ತೆಗಳ ಪಕ್ಕದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸ ಮಾಡುತ್ತಾರೆ. ಇವರು ಕರ್ನಾಟಕದಲ್ಲಿ ಇಲ್ಲ. ಆಂಧ್ರಪ್ರದೇಶದ
ಪಕ್ಕಕ್ಕಿರುವ ಕೆಲವು ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ಇವರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಬೇಡ ಜಂಗಮರು. ವೀರಶೈವ ಜಂಗಮರಲ್ಲ. ಕೂಡಲೇ ಸರ್ಕಾರ ಇದನ್ನು ತಪ್ಪಿಸಬೇಕು. ಒಂದು ವೇಳೆ ಪಟ್ಟಿಯಲ್ಲಿ ಸೇರಿಸಿದ್ದೇ ಆದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರಾದ ಬಿ.ಎಂ.ಹನುಮAತಪ್ಪ, ಮಂಜಪ್ಪ ಹಲಗೇರಿ, ಹನುಮಂತರಾಜು ಕೆ.ಎಚ್., ವಿ.ಗೋಪಾಲ್, ಎಂ.ಚೌಡಪ್ಪ, ಕೆ.ಎಚ್.ಹೊನ್ನಪ್ಪ, ಎಸ್.ಬಿ.ನಾಗರಾಜ್, ಮಾರುತಿ ಕೆ.ಕಡ್ಲೇಬಾಳು, ಎಚ್.ದಾನಪ್ಪ, ನಾಗರಾಜ್, ಎನ್.ಟಿ.ರಾಜು, ಟಿ.ನಾಗರಾಜಪ್ಪ, ಬಿ.ಸ್ವಾತಿ, ಎನ್.ಚಿತ್ರಲಿಂಗಪ್ಪ, ಎಲ್.ಶ್ಯಾಮ್ ಸೇರಿದಂತೆ ಇತರರು ಇದ್ದರು