ಜಗಳೂರು :ತಾಲೂಕಿನ ಬಿದರಜೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಕುಂಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಕಾಟಜ್ಜನ ದೇವಸ್ಥಾನದ ಸಮೀಪ ಕರಡಿ ಪ್ರತ್ಯಕ್ಷವಾಗಿದ್ದು ಕರಡಿಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ವೇಳೆ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಆರ್ ಎಫ್ ಓ ನಿತಿನ್ ಬಲ್ಲಾವರ್ ನೇತೃತ್ವದಲ್ಲಿ 20ಕ್ಕೂ ಅಧಿಕ ಸಿಬ್ಬಂದಿಗಳು ಬಕೆ ಮತ್ತು ಬೋನನ್ನು ಇಟ್ಟರು.
ಬೆಳಗ್ಗೆಯಿಂದ ಸಂಜೆವರೆಗೂ ಕಾದರೂ ಸಹ ಪೆಳೆಯಲ್ಲಿ ಅಡಗಿದ್ದ ಕರಡಿ ಬಾರದೆ ಇರುವುದರಿಂದ ಅರಣ್ಯ ಇಲಾಖೆಯವರು ಕಾದು ಕಾದು ಸುಸ್ತಾದರು,
ಈ ವೇಳೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕಾಯುತ್ತಿದ್ದೆ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನಿಸಿದ ಕರಡಿ ಸಿಬ್ಬಂದಿಗಳ ಮುಂಭಾಗದಲ್ಲಿ ಗುಡ್ಡದ ಕಡೆ ಮುಖ ಮಾಡಿ ತೆರಳಿತು ಆಗ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡೆಯನ್ನು ಹಿಂಬಾಲಿಸಿ ಗ್ರಾಮದಿಂದ ಸುಮಾರು ದೂರದವರೆಗೆ ಕಳಿಸಿದರು.
ಕೊಣಚೆಗಲ್ಲುಗುಡ್ಡ ಮತ್ತು ಗೋಸ್ವಾಮಿ ಗುಡ್ಡದ ಸುತ್ತಮುತ್ತ ಕರಡಿಗಳಿದ್ದು ಇವು ಇವು ಸಂಜೆ ಅಥವಾ ಮುಂಜಾನೆ ವೇಳೆ ಈ ಭಾಗದಲ್ಲಿ ಓಡಾಡುತ್ತಿರುತ್ತವೆ ಈ ಕರಡಿಗೆ ಅನಾರೋಗ್ಯ ಇರುವುದರಿಂದ ಗ್ರಾಮಕ್ಕೆ ಬಂದು ಸಮೀಪದ ಬೆಳೆಯಲ್ಲಿ ಅಡಗಿದದೆ ತುಂಬಾ ಸಮಯಕಾದರೂ ಸಹ ಕರಡಿ ಹೋರ ಬರಲಿಲ್ಲ ಸಂಜೆ ವೇಳೆಗೆ ಹೊರಬಂದ ಕರಡಿಯನ್ನು ಗುಡ್ಡದ ಕಡೆ ಓಡಿಸಲಾಗಿದೆ ಎನ್ನುತ್ತಾರೆ ಆರ್‌ಎಫ್‌ಒ ನಿತಿನ್ ಬಲ್ಲವರ್.
