ದಾವಣಗೆರೆ (Davanagere): ಆಟೋದಲ್ಲಿ ಬಿಟ್ಟು ಹೋಗಿದ್ದ 70 ಸಾವಿರ ಮೌಲ್ಯದ ಲ್ಯಾಪ್‍ಟಾಪ್ ಅನ್ನು ವಾರಸ್ಸುದಾರರಿಗೆ ಅಜಾದನಗರ ಪೊಲೀಸರು ಹಸ್ತಾಂತರ ಮಾಡಿದ್ದಾರೆ.
ಬೆಂಗಳೂರು ನಗರದ ವಾಸಿ ರೇಷ್ಮಾ ಗಂಡ ಕಲೀಂವುಲ್ಲಾ ಅವರು ದಾವಣಗೆರೆ ನಗರದ ಜೆ.ಜೆ ಕಾನ್ವೆಂಟ್ ಹತ್ತಿರ ಇರುವ ಸಂಬಂಧಿಕರ ಮನೆಗೆ ಕಾರ್ಯಕ್ರಮ ನಿಮ್ಮಿತ್ತ ಬಂದಿದ್ದು ಜ.20 ರಂದು ಜೆಜೆ ಕಾನ್ವೆಂಟ್‍ನಿಂದ ಆಟೋದಲ್ಲಿ ಹತ್ತಿಕೊಂಡು ವಿನೋಬನಗರ 13 ನೇ ಕ್ರಾಸ್ ಸಂಬಂದಿಕರ ಮನೆಗೆ ಆಟೋದಲ್ಲಿ ಇಳಿಯುವಾಗ ಲ್ಯಾಪ್ ಟಾಪ್ ಮತ್ತು ದಾಖಲಾತಿ ಇರುವ ಬ್ಯಾಗ್ ಕಳೆದುಕೊಂಡಿದ್ದರು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಮಾಲು ಪತ್ತೆಗೆ ಎಎಸ್ಪಿಗಳಾದ ವಿಜಯ ಕುಮಾರ, ಎಂ ಸಂತೋಷ ಮತ್ತು ಮಂಜುನಾಥ ಜಿ ಹಾಗೂ ನಗರ ಉಪ ವಿಭಾಗದ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್. ಬಿ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್ ಮತ್ತು ಮಹಮ್ಮದ್ ಆಲ್ತಾಫ್ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ತಂಡವು ಕಳೆದ ಹೋದ ಮಾಲಿನ ಪತ್ತೆ ಕಾರ್ಯವನ್ನು ಪ್ರಯಾಣಿಸಿದ ಆಟೋವನ್ನು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯವರ ಸಹಾಯದಿಂದ ಕೆಎ-17 ಂಂ-4961 ನಂಬರಿನ ಆಟೋ ಮತ್ತು ಚಾಲಕ ಮಹಮ್ಮದ್ ಸಾದೀಕ್ ಪತ್ತೆಮಾಡಿ ಕಳೆದುಕೊಂಡಿದ್ದ ಸುಮಾರು 70 ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಇತರೆ ದಾಖಲಾತಿಗಳು ಪತ್ತೆ ಮಾಡಿ ಸ್ವತ್ತಿನ ವಾರಸ್ಸುದಾರರಾದ ರೇಷ್ಮಾ ಗಂಡ ಕಲೀಂವುಲ್ಲಾ ಅವರಿಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್, ಮತ್ತು ಮಹಮ್ಮದ್ ಆಲ್ತಾಪ್, ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥನಾಯ್ಕ, ನರೇಶ್ ಎಪಿ, ಖಾಜಾ ಹುಸೇನ್ ಅತ್ತಾರ್, ದಯಾನಂದ.ಎನ್ ಹಾಗೂ ಕಮಾಂಡ್ ಸೆಂಟರ್ ಸಿಬ್ಬಂದಿ ತಂಡಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಫಿಸಿದ್ದಾರೆ.
Read also : ಭದ್ರತಾ ಮಾನದಂಡಗಳನ್ನು ಎಲ್ಲಾ ಬ್ಯಾಂಕ್‍ಗಳು ಪಾಲನೆ ಮಾಡುವುದು ಕಡ್ಡಾಯ : ಉಮಾ ಪ್ರಶಾಂತ್