Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಯುವಕರು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆ ಬನ್ನಿ: ಶಾಸಕ ಬಿ.ದೇವೇಂದ್ರಪ್ಪ ಕರೆ
ತಾಜಾ ಸುದ್ದಿ

ಯುವಕರು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆ ಬನ್ನಿ: ಶಾಸಕ ಬಿ.ದೇವೇಂದ್ರಪ್ಪ ಕರೆ

Dinamaana Kannada News
Last updated: February 10, 2026 12:42 pm
Dinamaana Kannada News
Share
Jagalore
SHARE

ಜಗಳೂರು: ದಂಡಿಸುವ ಮಾತುಗಳನ್ನು ನಿಂದನೇ ಎಂದು ಕೊಂಡರೆ ಯಾರೋ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿದರು.

ಮಂಗಳವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ವಕ್ಪ್  ಮಂಡಳಿ ಮತ್ತು ತಾಲೂಕು ಮುಸ್ಲಿಂ ಸಮುದಾಯದ ವತಿಯಿಂದ 2025 – 26 ನೇ ಸಾಲಿನ ಜಗಳೂರು ವಿಧಾನಸಭಾ ಕ್ಷೇತ್ರದ ವಕ್ಪ್  ಸಂಸ್ಥೆಗಳ ದುರಸ್ತಿ ಮತ್ತು ಜೀವನೋದ್ಧಾರ, ನವೀಕರಣ ಹಾಗೂ ಇನ್ನಿತರ ಕಾಮಗಾರಿಗಳಿಗೆ ಅನುದಾನ ದಾಖಲೆ ವಿತರಣಾ ಸಮಾರಂಭ  ಉದ್ದೇಶಿಸಿ ಮಾತನಾಡಿದರು.

ದಂಡಿಸುವ  ಮಾತುಗಳ ಮೂಲಕ ತಿಳುವಳಿಕೆ ನೀಡದೇ ಹೋದರೆ ಯಾವುದು ಬದಲಾವಣೆಯಾಗುವುದಿಲ್ಲ . ಬುದ್ದಿ ಮಾತುಗಳನ್ನು ನಿಂದನೇ ಎಂದು ಕೊಂಡರೇ ತಾಲೂಕು ಆಡಳಿತ ಸಮರ್ಪಕವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿರುಲಿಲ್ಲ,ಸಮುದಾಯದಲ್ಲಿ ಇಂದಿನ ಆಧುನಿಕ ವ್ಯವಸ್ಥೆಯಲ್ಲಿಯು ಸಹ ಸ್ತ್ರೀ ಯನ್ನು ತೆರೆಮರೆಯಲ್ಲಿಟ್ಟಿ ರುವುದರಿಂದ ಉನ್ನತ ಶಿಕ್ಷಣದಿಂದ ಅವರು  ವಂಚಿತರಾಗುತ್ತಿದ್ದಾರೆ ಮೊದಲು ಇವರಿಗೆ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಕ್ಷೇತ್ರದ ಯುವಕರು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆ ಬನ್ಜಿ ನಿಮ್ಮ ಜೀವನವೇ ಬದಲಾವಣೆಯಾಗಲಿದೆ ನಾನು ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಮಾಡಿದ್ದೇನೆ  ಅದನ್ನು ಸದ್ಬಳಿಕೆ ಮಾಡಿಕೊಳ್ಳಿ ಎಂದರು.

ನೊಂದವರಿಗೆ ನೆರವಾಗಲು ನಾನು ಜೋಳಿಗೆ ಹಾಕಿ ಇದುವರೆಗೆ 8 ಲಕ್ಷ ರೂ ದೇಣಿಗೆ ಸಂಗ್ರಹ ಮಾಡಿದ್ದೇನೆ ಇದು ದೀನ ದಲಿತರಿಗೆ ಬಡವರ ಸಂಕಷ್ಟ ಕಾಲಕ್ಕೆ ಸಂಜಿವಿಯಾಗಲಿದೆ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಮಾತನಾಡಿ,ಸಂಕಷ್ಟದ ಸಮಯದಲ್ಲಿ  ಬೆನ್ನೆಲುಬಾಗಿ ನಿಂತಿದ್ದಂತಹ ಮುಸ್ಲಿಂ ಸಮುದಾಯದ ಅಭಿವೃದ್ದಿ ಕಾಂಗ್ರೇಸ್ ಸರಕಾರದಿಂದ ಮಾತ್ರ‌ಸಾಧ್ಯವಾಯಿತು. ಇದು ಜಗಳೂರು ಕ್ಷೇತ್ರದಲ್ಲಿ ಅಲ್ಲದೇ ರಾಜ್ಯದ  ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಗೆಲುವಿಗೆ ಕಾರಣರಾಗಿದ್ದಾರೆ. ಮುಸ್ಲೀಂ ಸಮುದಾಯದವರನ್ನು ಮತ ಬ್ಯಾಂಕ್ ಮಾಡಿಕೊಂಡಿಲ್ಲ  ಅವರಗಳ ಋಣ ತೀರಿಸುತ್ತಿದ್ದೇವೆ ಎಂದರು.

ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ. ಇರುವ ನಿಯಮಗಳನ್ನು ಜನರಿಗೆ‌ ತಿಳಿ ಹೇಳಿ ಸುಖ ಸುಮ್ಮನೇ ಕಚೇರಿಗೆ ಅಲೆದಾಡಿಸಬೇಡಿ ಎಂದು ಶಾಸಕರು ಸೂಚನೆ ನೀಡಿದ್ದರು ಅದೇ ರೀತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಶಾಸಕರು ಕಲ್ಪ ವೃಕ್ಷವಿದ್ದಂತೆ  :

ತೆಂಗಿನ‌ಮರ ನೆರಳು ನೀಡುವುದರ ಜೊತೆಗೆ  ಎಳ ನೀರು ,ಪೂಜೆಗೆ ಕಾಯಿ  ಕೊಡುತ್ತಾದೆ ಮತ್ತು  ಗುಡಿಸಲಿನ ಸೂರಿಗೆ ಒದಿಕೆಯಾಗುವಂತೆ ಎಲ್ಲಾ ಸಮುದಾಯದವರಿಗೂ  ಸ್ಥಾನ ಮಾನ ಮಾನ  ನೀಡಿ  ಗೌರವಿಸುವಂತ ಕೆಲಸ  ಮಾಡುತ್ತಿದ್ದಾರೆ ಎಂದರು.

ಕ್ಷೇತ್ರದ ಮಸೀದಿಗಳ ಅಭಿವೃದ್ದಿಗೆ ಒತ್ತು  ನೀಡಿದ್ದಾರೆ. ಅವರನ್ನು ಯಾವಗಲು ಸಮುದಾಯದವರು  ಶಾಸಕರ ಪರವಾಗಿರಬೇಕು ಏಕೆಂದರೆ ಜ್ಯಾತ್ಯಾತೀತ ನಾಯಕರಾಗಿದ್ದಾರೆ ಶಾಸಕರು ನೀಡಿರುವ ಅನುದಾನವನ್ನು ಮಸಿದಿಗಾಗಿ ಸದುಪಯೋಗ ಮಾಡಿ ಕೊಳ್ಳಬೇಕು ಎಂದರು.

ಜಿ.ಪಂ. ಮಾಜಿ ಸದಸ್ಯ ಕೆ.ಪಿ.ಪಾಲಯ್ಯ ಮಾತನಾಡಿ, ಇದೇ ಪ್ರಥಮ ಭಾರಿಗೆ ಮುಸ್ಲೀಂ ಸಮುದಾಯದ ಕಾರ್ಯಕ್ರಮವಾಗಿದೆ  ಅನುದಾನ ನೀಡುತ್ತೇವೆ ಅಧಿಕಾರಿಗಳು ಕೆಲಸ ಮಾಡುತ್ತಾರೆ ಆದರೆ ಚುಣಾವಣೆಯ‌ ಸಂದರ್ಭದಲ್ಲಿ ಕೈಯಿಡಿದಿರುವ  ಸಮಾಜ ಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ನೀಡಲಾಗುವುದು.

ದೇಶದಲ್ಲಿ ಆಜಾರಕತೆ ಉಂಟಾಗಿದೆ ಯಾರೋ ಮಾಡಿದ‌ತಪ್ಪಿಗೆ ನಿಮ್ಮನ್ನು ನಿಂದಿಸುವಂತ ಕೆಲಸವಾಗುತ್ತಿದೆ. ದೇಶದ ಸ್ವಾತಂತ್ರದಲ್ಲಿ ಮುಸ್ಲೀಂ ಸಮುದಾಯದ ನಾಯಕರ‌ ಕೊಡುಗೆ ಇದೆ ಆದರೆ ಇತಿಹಾಸವನ್ನು ಮುಚ್ಚುವಂತ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ವೇಳೆ  ಮಾಜಿ‌ ವಕ್ಪ್  ಮಂಡಳಿಯ ಮೋಮಸ ಅಬ್ , ಜಿಲ್ಲಾವಕ್ಫ್  ಅಧಿಕಾರಿ ಜಾಕೀರ್‌ಹುಸೇನ್ , ಬಿಲಾಲ್ ಮಸೀದಿ ಅಧ್ಯಕ್ಷ  ಇಮಾಮ್ ಆಲಿ, ಜಾಮಿಯ ಮಸೀದಿ ‌ಅಧ್ಯಕ್ಷ ಇಕ್ಬಾಲ್ , ಮಾಜಿ ಅಧ್ಯಕ್ಷ‌ ಅನ್ವರ್ ಸಾಬ್ , ಮುಖಂಡ  ಸಣ್ಣ ಸೂರಜ್ಜ, ಪಲ್ಲಾಗಟ್ಟೆ ಶೇಖರ್,ಪಿಂಜಾರ್ ಸಂಘದ ಅಧ್ಯಕ್ಷ‌ ಫರ್ವೀಜ್ , ಜೈ ಭಾರತ್ ಟ್ರಸ್ಟ್ ಕಾರ್ಯದರ್ಶಿ  ಬರಕತ್‌ಆಲಿ, ವೈದ್ಯೆ ನೂರಾಲಿ,ವಿಜಯ ನಗರ ಜಿಲ್ಲಾ ಇನ್ಸ್ ಪೆಕ್ಟರ್ ಇಪ್ತಿಕರ್,ಅತ್ತರ್ ವುಲ್ಲಾ ಖಾನ್,ಯರಬಳ್ಳಿ ಉಮ್ಮಜ್ಜ, ಆಶ್ರಫ್ ವುಲ್ಲಾ, ಸಂತೆ ಮುದ್ದಾಪುರ ಶಫೀಉಲ್ಲಾ ,ಕಲಿಲ್, ಷಂಷುದ್ದಿನ್,ರಜಾಕ್  ಸೇರಿದಂತೆ ಮತ್ತಿತರರು ಹಾಜರಿದ್ದರು.

Read also : ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ : ದಲಿತ ಸಂಘರ್ಷ ಸಮಿತಿ

ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷ ಅಹಮದ್ ಆಲಿ, ವರ್ತಕರ ಸಂಘದ ತಾಲೂಕು ಅಧ್ಯಕ್ಷ ಕಲಂದರ್ ಖಾನ್ ಮಾತನಾಡಿದರು.

ಈ ವೇಳೆ ನೌಕರರುಗಳಾದ   ಬಿಚೋಡು ಪೊಲೀಸ್ ಠಾಣೆಯ ಸಿಪಿಐ ನೂರ್ ಆಲಿ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಧಿಕ್ ಉಲ್ಲಾ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಎ ಇ ಇ ಆಫ್ರಿಲ್ ಫಿರ್ದೋಜ, ದಾವಣಗೆರೆ ಕೆ ಎಸ್ ಕೆ ಎಸ್  ಆರ್ ಟಿ ಸಿ , ಡಿ ಟಿ ಓ ಫಕ್ರುದ್ದೀನ್, ಪಟ್ಟಣ ಪಂಚಾಯತಿಯ ಅಭಿಯಂತರ ಸಲೀಂ, ಉಪ ನೊಂದಣಾಧಿಕಾರಿ  ಮಹನದ್ ಬಶೀರ್ , ದೀಪಂ ವ್ಯವಸ್ಥಾಪಕ ದಾದಾಪೀರ್, ಗಣಪತಿಯ ಕಂದಾಯ ನಿರೀಕ್ಷಕ ಮೋದಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರುಗಳಾದ ಮಹಮ್ಮದ್ ಆಲಿ, ಶಕೀಲ್ ಅಹಮದ್, ಲುಕ್ ಮನ್ ಕಾನ್ , ನಸ್ರುನ್ನಿಸಾ ನ್ನು ನ್ನು ಸನ್ಮಾನಿಸಲಾಯಿತು.

ಸನ್ಮಾನಿತರಾದ  ವಿದ್ಯಾರ್ಥಿಗಳು:

ಎಂ ಇಡಿ ಸ್ನಾತಕೋತ್ತರ ಪದವಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಸಮ್ರೀನ್ ,  ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಾದ  ಜೆ.ಎಸ್ . ಆಶಿಯಾ ಅಂಜುಮ್, ತಮೀನಾ ಖಾತಂ ,ನೂರ್ ಫಾತಿಮಾ ಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

….

 ಜಗಳೂರಿಗೆ ಬರುವಾಗ ನಾನು ಕಲ್ಲಾಗಿ ಬಂದೆ  ಈಗ ಶಾಸಕರ ಮಾರ್ಗ ದರ್ಶನದ ಹುಳಿ ಏಟಿನಂತ ಮಾತುಗಳಿಂದ   ಇಂದು  ನಾನು  ಶಿಲೆಯಾಗಿ ಯಾಗಿದ್ದೇನೆ   ಎಂದು

ಸೈಯದ್ ಕಲೀಂ ಉಲ್ಲಾ  ತಹಶೀಲ್ದಾರರರು. 

ಇತಿಹಾಸ ನಿರ್ಮಾಣ ವಾಗಿದೆ:

 ಜಗಳೂರು ವಿಧಾನ ಸಭಾ ಕ್ಷೇತ್ರದ ೩೯ ಮಸಿದಿಗಳಿಗೆ ತಲಾ ೫ ಲಕ್ಷ  ಅನುದಾನ ನೀಡಿದ್ದು ಒಟ್ಟು 2 ಕೋಟಿ   ಅನುದಾನ ನೀಡಿದ್ದಾರೆ.  ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ವಸತಿ ಶಾಲೆಗೆ ಕಟ್ಡಡ  ಬೇಕು ಎಂದು  ಸಚಿವ ಜಮೀರ್ ಸಾಹೇಬರ ಗಮನಕ್ಕೆ ತಂದಾಗ 16 ಕೋಟಿ ಅನುದಾನ ನೀಡಿದ್ದು ಕಾಮಗಾರಿ‌ನಡೆಯುತ್ತಿದೆ, ಜೊತೆಗೆ  ಮುಸ್ಲೀಂ ಸಮುದಾಯದ ಬಡಾವಣೆಗಳ ಅಭಿವೃದ್ದಿಗೆ 5 ಕೋಟಿ ರೂ ಅನುದಾನದಡಿ  ಅಭಿವೃದ್ದಿ  ಮಾಡಲಾಗುತ್ತಿದೆ ಎಂದರು.

ಎಂ.ಡಿ. ಕೀರ್ತಿ ಕುಮಾರ್ , ಎಸ್ಟಿ ಘಟಕ ದ ರಾಜ್ಯ ಪ್ರಧಾನ ಕಾರ್ಯದರ್ಶಿ

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ : ದಲಿತ ಸಂಘರ್ಷ ಸಮಿತಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Kannada poem : ಡಾಲರ್ ಕಣ್ಣು

ಡಾಲರ್ ರಾಜಘಾಟಿಗೆ ಹೋಗಿ ನಮಿಸಿತು ತಲೆಬಾಗಿ ಸಾವಿರದೊಂಭೈನೂರ ನಲವತ್ತೆಂಟರ ಜನವರಿ ಮೂವತ್ತರಂದೂ ಹೀಗೆಯೇ ನಮಿಸಲಾಗಿತ್ತು. ಬೆವರ ಮೇಲೆ ನೆತ್ತರ ಮೇಲೆ…

By Dinamaana Kannada News

ಆ. 5 ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಸಹಾಯವಾಣಿ ಆರಂಭ

ದಾವಣಗೆರೆ  : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ…

By Dinamaana Kannada News

crime news | ರೌಡಿಶೀಟರ್ ಕಣುಮನ ಕೊಲೆ ಪ್ರಕರಣ : 10 ಆರೋಪಿಗಳು ಆಂದರ್

ದಾವಣಗೆರೆ (Davanagere): ರೌಡಿಶೀಟರ್ ಸಂತೋಷ ಆಲಿಯಾಸ್ ಕಣುಮನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ ಚಾವಳಿ,…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ : ದಲಿತ ಸಂಘರ್ಷ ಸಮಿತಿ

By Dinamaana Kannada News
Davanagere
ತಾಜಾ ಸುದ್ದಿ

ಜಿನೀವಾದ WHO ಪ್ರಾದೇಶಿಕ ಸದಸ್ಯರಾಗಿ ಡಾ.ಎಲ್.ರಾಕೇಶ್ ಆಯ್ಕೆ

By Dinamaana Kannada News
jagalorue
ಅಪರಾಧ ಸುದ್ದಿತಾಜಾ ಸುದ್ದಿ

ಜಗಳೂರು:ಬಗ್ಗೆನಹಳ್ಳಿ ಗ್ರಾಮದಲ್ಲಿ ಕುರಿಗಳ ಕಳ್ಳತನ

By Dinamaana Kannada News
Davanagere
ತಾಜಾ ಸುದ್ದಿ

ಸಮಾನತೆಗಾಗಿ ಶಿಕ್ಷಣ ಹಾಗೂ ಸಂಘಟನೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?