Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಶೇ. 90 ರಷ್ಟು ಭಾರತೀಯ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ
ಆರೋಗ್ಯ

ಶೇ. 90 ರಷ್ಟು ಭಾರತೀಯ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ

Dinamaana Kannada News
Last updated: March 12, 2024 12:39 pm
Dinamaana Kannada News
Share
dr. rajeva
dr. rajeva
SHARE

ಬೆಂಗಳೂರು :
ಒಬ್ಬ ಮನುಷ್ಯನಲ್ಲಿ 30 ng/ml ಗಿಂತ ಕಡಿಮೆ ಇದ್ದರೆ ವಿಟಮಿನ್ ಡಿ ಮಟ್ಟವು ಸಾಕಷ್ಟಿಲ್ಲ ಅಥವಾ ಇದರ ಕೊರತೆ ಇದೆ ಎಂದು ಪರಿಗಣಿಸಲಾಗುತ್ತದೆ. ವಿಟಮಿನ್ ಡಿ ಕೊರತೆಯು ಜನರಲ್ಲಿ ಮೂಳೆಯ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ತೀವ್ರವಾದ ಮೂಳೆ ನೋವು ಹಾಗೂ ಮೂಳೆ ಉರಿತಕ್ಕೂ ಕಾರಣವಾಗುತ್ತದೆ. ಭಾರತದಲ್ಲಿನ ಮಹಿಳೆಯರು ಸಾಮಾನ್ಯವಾಗಿ ಕಳಪೆ ಮೂಳೆ ಆರೋಗ್ಯದ ಲಕ್ಷಣಗಳಿದ್ದರೂ ಅವುಗಳನ್ನು ಕಡೆಗಣಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ಶೇ.80 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇದೆ

2023 ರಲ್ಲಿ ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ನೊಂದಿಗೆ ಅಪೊಲೊ ಕ್ಲಿನಿಕ್ಸ್ ಇನ್ ಸಹಯೋಗದಲ್ಲಿ ನಡೆಸಲಾಗಿರುವ ವಿಟಮಿನ್ ಡಿ ಪರೀಕ್ಷಾ ಶಿಬಿರಗಳ ದಾಖಲೆಗಳ ಪ್ರಕಾರ ಭಾರತದಲ್ಲಿನ ನಗರ ಪ್ರದೇಶದಲ್ಲಿರುವ ಸರಿಸುಮಾರು ಶೇ.80 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇದೆ ಎಂಬ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ಇನ್ನು 2023 ರಲ್ಲಿ ಮಾಮ್ಸ್ ಪ್ರೆಸ್ಸೋ ಅಧ್ಯಯನದ ಪ್ರಕಾರ ದೇಹದ ನೋವಿನಿಂದ ಬಳಲುತ್ತಿರುವ ಶೇ.87 ರಷ್ಟು ಮಹಿಳೆಯರು ತಮಗಾಗುತ್ತಿರುವ ದೇಹದ ನೋವು ಮತ್ತು ಕಳಪೆ ಮೂಳೆ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿದಿರುವುದಿಲ್ಲ ಹಾಗೂ ತಾತ್ಕಾಲಿಕ ನೋವು ಪರಿಹಾರಕ್ಕೆ ಮೊರೆ ಹೋಗುತ್ತಿದ್ದಾರೆ.

ಮೂಳೆಗಳ ಸಮತೋಲನೆ ಕಾಪಾಡಿಕೊಳ್ಳಲು ಈ ವಿಟಮಿನ್ ಡಿ ಅತ್ಯಗತ್ಯ

ಬೆಂಗಳೂರಿನ ಅಪೊಲೊ ಕ್ಲಿನಿಕ್ ನ ಆರ್ಥೋಪೆಡಿಕ್ ಸರ್ಜನ್ ಡಾ. ರಾಜೀವ್ ಎಸ್.ಘಾಟ್ ಅವರು ಮಾತನಾಡಿ, ಸೂರ್ಯನ ಬೆಳಕೇ ವಿಟಮಿನ್ ಡಿ ಗೆ ಪ್ರಾಕೃತಿಕ ಮೂಲ. ಆದರೆ, ಬಹುತೇಕ ಮಹಿಳೆಯರು ತಮ್ಮ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸೂರ್ಯ ಬೆಳಕಿಗೆ ಹೋಗುವುದೇ ಇಲ್ಲ. ಅಲ್ಲದೇ ಅವರು ಸೇವಿಸುವ ಆಹಾರಗಳಲ್ಲಿ ವಿಟಮಿನ್ ಡಿ ಕಡಿಮೆ ಇರುತ್ತದೆ ಮತ್ತು ಸಸ್ಯಾಹಾರಿ ಆಹಾರದಲ್ಲಿ ಈ ಪ್ರಮಾಣ ಬಹುತೇಕ ಶೂನ್ಯವಾಗಿರುತ್ತದೆ. ಮೂಳೆಗಳ ಸಮತೋಲನೆಯನ್ನು ಕಾಪಾಡಿಕೊಳ್ಳಲು ಈ ವಿಟಮಿನ್ ಡಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸೂರ್ಯನ ಬೆಳಕಿಗೆ ಮೈವೊಡ್ಡಿದ ನಂತರ ಚರ್ಮದಲ್ಲಿ ವಿಟಮಿನ್ ಡಿ ಉತ್ಪತ್ಪಿಯಾಗುತ್ತದೆ. ಜಡ ಜೀವನಶೈಲಿ, ಕಲುಷಿತ ಗಾಳಿ ಮತ್ತು ಮನೆ ಅಥವಾ ಕಚೇರಿ ಒಳಗಿನ ಕೆಲಸದ ಸ್ಥಳಗಳು ಮನುಷ್ಯನಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಲು ಕಾರಣವಾಗುತ್ತವೆ. ವಿಟಮಿನ್ ಡಿ ಯ ಆಹಾರದ ಮೂಲಗಳು ಬಹಳ ಸೀಮಿತವಾಗಿವೆ.

ಕೊಬ್ಬಿನ ಮೀನು ಮತ್ತು ಮೀನಿನ ಯಕೃತ್ತಿನ ಎಣ್ಣೆ ಒಂದು ಸಣ್ಣ ಪ್ರಮಾಣದ ಮೊಟ್ಟೆಯ ಹಳದಿ ಲೋಳೆ ಮತ್ತು ಕೆಲವು ಅಣಬೆ ಪ್ರಬೇಧಗಳಲ್ಲಿ ವಿಟಮಿನ್ ಡಿ ಯ ಉತ್ತಮ ಮೂಲಗಳಾಗಿವೆ. ಈ ಹಿನ್ನೆಲೆಯಲ್ಲಿ ವಿಟಮಿನ್ ಡಿ ಪ್ರಮಾಣವನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ಪೌಷ್ಟಿಕಾಂಶದ ಸಪ್ಲಿಮೆಂಟ್ ಗಳನ್ನು ಸೇರಿಸುವುದನ್ನು ಶಿಫಾರಸು ಮಾಡಲಾಗಿದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಶೇ.100 ರಷ್ಟು ಶಿಫಾರಸು ಮಾಡಲಾಗುವ ಆಹಾರ ಪದ್ಧತಿಯೊಂದಿಗೆ ಪೌಷ್ಟಿಕಾಂಶದ ಸಪ್ಲಿಮೆಂಟ್ ಗಳು ಸುಲಭವಾಗಿ ಲಭ್ಯವಿವೆ. ಇವುಗಳು ಸುಲಭ ದರದಲ್ಲಿ ಲಭ್ಯವಿದ್ದು, ಮೂಳೆಯ ಆರೋಗ್ಯವನ್ನು ಸುಧಾರಣೆ ಆಗಲು ಸಹಕಾರಿಯಾಗಿವೆ.

 

TAGGED:Bangalore NewsDinamana.compercent 90 percent of Indian women are vitamin D deficientದಿನಮಾನ.ಕಾಂಬೆಂಗಳೂರು ಸುದ್ದಿಶೇ. 90 ರಷ್ಟು ಭಾರತೀಯ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ
Share This Article
Twitter Email Copy Link Print
Previous Article Prabha Mallikarjun Lok Sabha Candidate ಪ್ರಭಾ ಮಲ್ಲಿಕಾರ್ಜುನ್ ಲೋಕಸಭಾ ಅಭ್ಯರ್ಥಿ ಆಗಲಿ ಒಕ್ಕೂರೆಲಿನ ಆಗ್ರಹ
Next Article Selection for international competition ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಿಗೆ ತರಬೇತಿ

ದಾವಣಗೆರೆ (Davanagere): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕೆಇಎ ಮೂಲಕ ನಡೆಸಲಿರುವ ರಾಜ್ಯ ಮಟ್ಟದ…

By Dinamaana Kannada News

Davanagere | ಜೂ.19 ರಂದು ಬೆ. 10 ರಿಂದ ಸ. 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

ದಾವಣಗೆರೆ (Davanagere) :  ಕುಕ್ಕವಾಡ ಮತ್ತು ಶ್ಯಾಗಲೆ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 19 ರಂದು…

By Dinamaana Kannada News

Davanagere | ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ವಿನಾಯಕ ಬಿ.ಎನ್. ಆಕ್ರೋಶ

ದಾವಣಗೆರೆ  (Davanagere ) : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ೩೦ ಲಕ್ಷ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?