ದಾವಣಗೆರೆ : ವ್ಯಕ್ತಿಯೋರ್ವನಿಗೆ 52 ಲಕ್ಷ ರೂ ವಂಚನೆ ಪ್ರಕರಣದಲ್ಲಿ ಅಂತರ್ ರಾಜ್ಯ ಆರೋಪಿಯನ್ನು ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಟೌನ್‌ನಿನ ಶಾಂತಿನಗರದ ನಿವಾಸಿ ಸೈಯದ್ ಅರ್ಫಾತ್(28) ಬಂಧಿತ ಆರೋಪಿ.
ಪ್ರಕರಣದ ವಿವರ : ಅಗಸ್ಟ್ 8ರಂದು 2025 ರಂದು ಅಂಜನಾದ್ರಿ ಪ್ರಾಪ್ರಟಿ ಕನ್ಸ÷್ಟಕ್ಸನ್ ನ ಪ್ರಮೋದ ಎಂಬುವವರು ಕೆನರಾ ಬ್ಯಾಂಕ್‌ನಿAದ ಆನ್‌ಲೈನ್ ವಹಿವಾಟನಲ್ಲಿ ರೂ. 52,60,523 ಖಾತೆಯಿಂದ ತಮಗೆ ಮಾಹಿತಿ ಇಲ್ಲದೇ ವರ್ಗಾವಣೆಯಾಗಿರುವ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಿದ್ದರು.
ಈ ಸಂಬAಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಸೈಬರ್ ಆಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಯವರಾದ ಅಶೋಕ, ಸುರೇಶ್, ಮುತ್ತುರಾಜ್, ನಿಜಲಿಂಗಪ್ಪ ರವರ ತಂಡವು ಕಾರ್ಯಚರಣೆ ನಡೆಸಿ ಸಿಸಿಟಿವಿ ಕೆಲಸಗಾಗ ಪ್ರರಕಣದಲ್ಲಿನ ಎ2 ಸೈಯದ್ ಅರ್ಫಾತ್ ದಸ್ತಗಿರಿ ಮಾಡಿ 1 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೊಬ್ಬ ಆರೋಪಿತ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರೆಸಿದ್ದಾರೆ.
Read also : ಪುಸ್ತಕ ವಿಮರ್ಶೆ|ದುಬೈ ದೌಲತ್ತು – ಕವಿಯ ಕಣ್ಣಳತೆಯಲ್ಲಿ ದುಬೈ ಕಥನ
ಪ್ರಕರಣದಲ್ಲಿ ವಂಚನೆಗೊಳಗಾಗಿದ್ದ ಹಣ ಪಿರ್ಯಾದಿದಾರರಿಗೆ ಮರಳಿಸುವಲ್ಲಿ ಯಶಸ್ವಿ:
ಪ್ರಕರಣದಲ್ಲಿ ಆರೋಪಿತರ ಚಾಲ್ತಿ ಖಾತೆಯಲ್ಲಿ ಜುಲೈ 27 ರಿಂದ ಆಗಸ್ಟ್ 19 ರವರೆಗೆ ಸುಮಾರು 150 ಕೋಟಿ ಆನ್ ಲೈನ್ ಪ್ರಾಡ್ ಮೊತ್ತ ಡಿಪಾಸಿಟ್ ಆಗಿದ್ದು, ಆರೋಪಿಗಳು 132 ಕೋಟಿ ಹಣ ವಿತ್ ಡ್ರಾ ಮಾಡಿರುತ್ತಾರೆ. ಹಾಲಿ ಖಾತೆಯಲ್ಲಿ 18 ಕೋಟಿ ಪ್ರೀಜ್ ಮಾಡಿಸಿದ್ದು, ಪಿರ್ಯಾದಿಯ 52,60,400/- ರೂಗಳನ್ನು ದಾವಣಗೆರೆ 3ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶದಂತೆ ಪ್ರಮೋದ್ ರವರಿಗೆ ರಿಫಂಡ್ ಮಾಡಲಾಗಿದೆ.
ಆರೋಪಿತ ಹಿನ್ನಲೆ: ಉತ್ತರ ಪ್ರದೇಶದ ಗಾಜೀಯ ಬಾದ್, ಜಮ್ಮು & ಕಾಶ್ಮೀರ ದ ಶ್ರೀನಗರ, ಆಂದ್ರ ಪ್ರದೇಶ ಏಲೂರು, ಮಹಾರಾಷ್ಟ್ರದ ಮುಂಬೈ ಸಿಟಿ, ಕರ್ನಾಟಕದ ಬೆಂಗಳೂರು ಸಿಟಿ ಹಾಗೂ ದಾವಣಗೆರೆ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಆರೋಪಿತನು ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರಕರಣಗಳ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ತಂಡದಿAದ ಬಂಧಿತನಾಗಿದ್ದಾನೆ.
ದಾವಣಗೆರೆ ಜಿಲ್ಲಾ ಪೊಲೀಸ್‌ನ ಸೈಬರ್ ಪೊಲೀಸ್ ಠಾಣೆಯ ತಂಡಕ್ಕೆ ಶ್ಲಾಘನೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.