ಹರಿಹರ: ಈಚೆಗೆ ಬೆಂಗಳೂರಿನಲ್ಲಿ ನಡೆದ 2ನೇ ರಾಷ್ಟ್ರೀಯ ಪೇಥಿನ್ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಹರಿಹರದ ಬ್ರದರ್ ಜಿಮ್ ನ ಕ್ರೀಡಾಪಟುಗಳು 8 ಪದಕಗಳನ್ನು ಗಳಿಸಿದ್ದಾರೆ.
ಅಬ್ದುಲ್ ಖದೀರ್ ಮತ್ತು ಎನ್.ರಂಜಿತ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕ ಗಳಿಸಿದ್ದಾರೆ. 2ನೇ ಸ್ಥಾನ ಪಡೆದ ಅರ್ಶಿಯಾ ಖಾನಮ್, ಮೊಹಮ್ಮದ್ ಆಸಿಮ್ ಬೆಳ್ಳಿ ಪದಕ, 3ನೇ ಸ್ಥಾನ ಪಡೆದ ಕೈಫ್, ಚೆಲವಿ, ಉಮ್ಮೆಇರಾಮ್ ಕಂಚಿನ ಪದಕ ಪಡೆದಿದ್ದಾರೆ.
Read also : ಸಮತೋಲನ ಆಹಾರ, ವ್ಯಾಯಾಮ, ಸಮರ್ಪಕ ನಿದ್ರೆಯಿಂದ ಬಿಪಿ ಕಡಿಮೆ ಮಾಡಿಕೊಳ್ಳಬಹುದು: ಡಾ. ಮಾಲತೇಶ್ ಕೆ ಎಂ
ಜಿಮ್ ನ ಸಂಚಾಲಕ,ಅಂತರಾಷ್ಟ್ರೀಯ ದೇಹಧಾರ್ಡ್ಯ ಕ್ರೀಡಾಪಟು ಆಕ್ರಮಬಾಷ, ತರಬೇತುದಾರ ಮೊಹಮ್ಮದ್ ರಫೀಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.
