ದಾವಣಗೆರೆ.ಅ.30 (Davanagere ): ಜಾತಿ ಜನಗಣತಿ ವರದಿಯನ್ನು ಸರ್ಕಾರ ಒಪ್ಪಿಕೊಂಡು ಬಹಿರಂಗಪಡಿಸದಿದ್ದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಗಿಲ್ಡ್ ನ ರಾಜ್ಯ ಸಂಚಾಲಕ ಅನೀಸ್ ಪಾಷ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರವು ಜಾತಿ ಜನಗಣತಿ ವರದಿಯನ್ನು ತಯಾರಿಸಲು ಸಾರ್ವಜನಿಕರ 169 ಕೋಟಿ ಹಣವನ್ನು ವ್ಯಯ ಮಾಡಿ ತಯಾರಿಸಿದ ಹೆಚ್. ಕಾಂತರಾಜ್ ಆಯೋಗದ ವರದಿಯನ್ನು ಮುಖ್ಯಸ್ಥರಾದ ಜಯಪ್ರಕಾಶ್ ಹೆಗಡೆಯವರು ವರದಿಯನ್ನು ಇದೇ ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಸರ್ಕಾರವು ಸದರಿ ವರದಿಯನ್ನು ಈ ತಕ್ಷಣ ಅಂಗೀಕರಿಸಿ ಬಿಡುಗಡೆ ಮಾಡಬೇಕೆಂದು ಈ ಮೂಲಕ ” ಪೀಪಲ್ಸ್ ಲಾಯರ್ಸ್ ಗಿಲ್ಡ್ ಒತ್ತಾಯಿಸುತ್ತದೆ ಎಂದರು.
ಜಾತಿ ಜನಗಣತಿ ವರದಿಯನ್ನು ತಯಾರಿಸಲು ಸರ್ಕಾರವು ನೀಡಿದ ನಿರ್ದೇಶನದಂತೆ ವಿವರವಾದ ವರದಿಯನ್ನು ಮಂಡಿಸಿರುತ್ತಾರೆ. ಕೆಲವು ಸಮುದಾಯದವರು ಈ ವರದಿಯು ಆವೈಜ್ಞಾನಿಕವಾಗಿದೆ, ದುರುದ್ದೇಶದ ಸಮಾಜವನ್ನು ಒಡೆಯುವ ಸಮೀಕ್ಷೆ ಅದನ್ನು ಅಂಗೀಕರಿಸಬಾರದೆಂದು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ಕೆಲವು ಮಠಾಧೀಶರುಗಳು ಜಾತ್ಯಾತೀತ ರಾಜ್ಯದಲ್ಲಿ ಜಾತಿ ಜನಗಣತಿ ಬೇಡ ಎಂದು ಹೇಳುತ್ತಿದ್ದಾರೆ. ಈ ರೀತಿ ಸರ್ಕಾರಕ್ಕೆ ಒತ್ತಡವನ್ನು ಹಾಕುವುದು ನ್ಯಾಯಸಮ್ಮತವಲ್ಲ. ಈಗಾಗಲೇ ಆ ಸಮುದಾಯಗಳು ಪ್ರತಿಯೊಂದು ರಂಗದಲ್ಲಿ (ರಾಜಕೀಯ, ಆರ್ಥಿಕ, ಶೈಕ್ಷಣಿಕ) ಉತ್ತಮ ಸ್ಥಾನ ಮತ್ತು ಸ್ಥಿತಿಯಲ್ಲಿದ್ದು ಆ ಸಮುದಾಯಗಳು ತುಳಿತಕ್ಕೊಳಗಾದಂತಹ ಬೇರೆ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ನಿಲ್ಲಬೇಕಾಗಿತ್ತು ಎಂದು ಹೇಳುದರು.
ಆದ್ದರಿಂದ ರಾಜ್ಯ ಸರ್ಕಾರವು 15 ದಿನಗಳ ಒಳಗಾಗಿ ಜಯಪ್ರಕಾಶ್ ಹೆಗಡೆಯವರು ಮಂಡಿಸಿರುವ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ನೊಟೀಸ್‌ನ್ನು ನೀಡಿದೆ. ತಪ್ಪಿದ್ದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Read also : Davanagere | ಆರೋಗ್ಯದ ಹಿತ ದೃಷ್ಠಿಯಿಂದ ಒಂದು ಲಕ್ಷ ಮಾಸ್ಕ್ ಉಚಿತವಾಗಿ ವಿತರಣೆ
ಸುದ್ದಿಗೋಷ್ಠಿಯಲ್ಲಿ ಗಿಲ್ಡ್ ನ ರುದ್ರೇಶ್, ಪ್ರದೀಪ್ ಲೋಕಿಕೆರೆ, ಜಸ್ಟಿನ್ ಜಯಕುಮಾರ್, ಹನೀಫ್ ಸಾಬ್, ನಾಗರಾಜ್, ಅಂಜಿನಪ್ಪ ಇದ್ದರು.