ದಾವಣಗೆರೆ (Davanagere) : ರಾಷ್ಟ್ರೀಯ ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಭಾರತ ದೇಶದಲ್ಲಿ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಧಾನಮಂತ್ರಿ ಭಾರತ ರತ್ನ ಶ್ರೀಮತಿ ಇಂದಿರಾಗಾಂಧಿಯವರು ಜನಸಾಮಾನ್ಯರು ಬ್ಯಾಂಕ್‍ಗಳಲ್ಲಿ ಆರ್ಥಿಕ ನೆರವು ಪಡೆದುಕೊಳ್ಳಲು ಶಕ್ತಿ ತುಂಬಿದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಹೇಳಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಇನ್‍ಟೆಕ್ ವಿಭಾಗವು ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿ ಏರ್ಪಡಿಸಿದ್ದ ದಿ|| ಶ್ರೀಮತಿ ಇಂದಿರಾಗಾಂಧಿಯವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ, ಮಾತನಾಡಿದರು.
ದೇಶದ ಏಕತೆ ಸಮಗ್ರತೆಗಾಗಿ ತ್ಯಾಗ ಬಲಿದಾನ ಮಾಡಿದ ಇಂದಿರಾಗಾಂಧಿಯವರ ದೇಶ ಸೇವೆ ಅನನ್ಯವಾಗಿದ್ದು, ವಿಶ್ವದಲ್ಲೇ ಉಕ್ಕಿನ ಮಹಿಳೆ ಎಂದು ಪ್ರಸಿದ್ಧರಾಗಿದ್ದ ಇಂದಿರಾಗಾಂಧಿಯವರು ತಮ್ಮ ಆಡಳಿತದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರ ಪಾಲಿನ ತಾಯಿಯಾಗಿದ್ದರು ಎಂದು ಇಂದಿರಾ ಗಾಂಧಿಯವರ ಸೇವೆಯನ್ನು ಸ್ಮರಿಸಿದರು.
ಕೃಷಿ ಆಧುನೀಕರಣಕ್ಕೆ ಒತ್ತು ನೀಡಿ. ದೇಶ ಆಹಾರ ಸ್ವಾವಲಂಬನೆ ಹೊಂದಲು ಶ್ರಮಿಸಿದ್ದಲ್ಲದೇ ಊಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿ ಅನಿಷ್ಟ ಜೀತ ಪದ್ಧತಿಗೆ ಮುಕ್ತಿ ನೀಡಿ ಬಡವರ ಉದ್ದಾರಕ್ಕಾಗಿ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿದ್ದಲ್ಲದೇ ಬಡತನ ತೊಲಗಿಸಲು ಗರೀಬಿ ಹಠಾವೋ ಕಾರ್ಯಕ್ರಮವನ್ನು ದೇಶಕ್ಕೆ ನೀಡಿದ್ದಲ್ಲದೇ ಅಲ್ಪಸಂಖ್ಯಾತರಿಗಾಗಿ 15 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದರು. ನೆರೆಯ ರಾಷ್ಟ್ರ ಪಾಕಿಸ್ತಾನದ ಉಪಟಳ ಜಾಸ್ತಿ ಆದಾಗ ಯುದ್ಧ ಭೂಮಿಗೆ ತೆರಳಿ ಭಾರತೀಯ ಸೈನಿಕರನ್ನು ಹುರಿದುಂಬಿಸಿ ಭಾರತಕ್ಕೆ ಜಯವನ್ನು ತಂದು ಕೊಟ್ಟಂತಹ ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದು ಅವರು ಸ್ಮರಿಸಿದರು.
READ ALSO : Davanagere | ಅಭಿವೃದ್ಧಿ ಕೆಲಸಗಳು ಮಾತನಾಡಲಿ : ಶಾಸಕ ಕೆ.ಎಸ್.ಬಸವಂತಪ್ಪ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಇಂದಿನ ಯುವ ಪೀಳಿಗೆಗೆ ಕಾಂಗ್ರೆಸ್ ಪಕ್ಷ ನೆಹರು ಕುಟುಂಬದ ತ್ಯಾಗ ಬಲಿದಾನಗಳ ಬಗ್ಗೆ ಮನವರಿಕೆ ಮಾಡಬೇಕೆಂದು ಕೋರಿದರಲ್ಲದೆ ಇಂದಿರಾಜಿಯವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಇನ್‍ಟೆಕ್‍ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೊಡಪಾನ ದಾದಾಪೀರ್, ಬಿ.ಹೆಚ್. ಉದಯಕುಮಾರ್, ಡಿ. ಶಿವಕುಮಾರ್, ಸುರೇಶ್ ಬಿ.ಎಸ್., ನವೀನ್ ಕುಮಾರ್, ಕರಿಬಸಪ್ಪ, ರಮೇಶ್ ಚಲುವಾದಿ, ರಿಯಾಜ್, ತಿಪ್ಪೇಸ್ವಾಮಿ, ಮುಬಾರಕ್, ಮೌನೇಶ್, ಈಶ್ವರಪ್ಪ, ಲಕ್ಷ್ಮಣ್, ನಯಾಜ್, ಇಬ್ರಾಹಿಂ, ರವಿ, ಕೆ.ಜಿ. ರಹಮತ್ತುಲ್ಲಾ ಸೇರಿದಂತೆ ಇತರರು ಹಾಜರಿದ್ದರು.